![]() |
The CBSE Schools National Level Science Fair 2024-25 final stage competition was organized at Amity International School, Gurugram, Haryana. |
ಸುದ್ದಿಲೈವ್/ಶಿವಮೊಗ್ಗ
CBSE ಶಾಲೆಗಳ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ 2024-25ನೇ ಸಾಲಿನ ಅಂತಿಮ ಹಂತದ ಸ್ಪರ್ಧೆಯು ಅಮೈಟಿ ಇಂಟರ್ನ್ಯಾಷನಲ್ ಸ್ಕೂಲ್,ಗುರುಗ್ರಾವ್, ಹರಿಯಾಣದಲ್ಲಿಆಯೋಜಿಸಲಾಗಿತ್ತು.
ಜನವರಿ 30 ರಿಂದ ಫೆಬ್ರವರಿ 01 ರವರೆಗೆ ಆಯೋಜಿಸಲಾಗಿದ್ದ ಈ ರಾಷ್ಟ್ರ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ರಾಷ್ಟ್ರದಾದ್ಯಂತ ಒಟ್ಟು429 ಶಾಲೆಗಳು ವಿವಿಧ ಮಾದರಿಗಳ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಾಗೆಯೇ ಗೋಪಾಳದ ಪೊದಾರ್ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಅದ್ವಿತೀಯ ಬ್ಲಾಕ್ ಸೋಲ್ಜರ್ ಫ್ಲೈ ಎನ್ನುವ ಶೀರ್ಷಿಕೆ ಅಡಿಯಲ್ಲಿ ಜೂನಿಯರ್ ವಿಭಾಗದಲ್ಲಿಸಿದ್ಧಾಂತ ಬಿ ಪೃಥ್ವಿ ಮತ್ತು ಡಿ.ಆರ್ ಪ್ರಣಿತ್ ರೆಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿದ್ದಾರೆ.
ಇಂತಹ ಅಮೋಘ ಸಾಧನೆಯ ಬೆನ್ನೆಲುಬಾಗಿ ನಿಂತು ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಶ್ರೀಮತಿ ಶ್ವೇತಾ ಎಂ.ಎಸ್ ರವರಿಗೆ ಶಾಲೆಯ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಶುಭಕೋರಿದ್ದಾರೆ. ವಿದ್ಯಾರ್ಥಿಯಾದ ಸಿದ್ಧಾಂತ.ಬಿ.ಪೃಥ್ವಿ ಮೆಟ್ರೋಯುನೈಟೆಡ್ ಹಾಸ್ಪಿಟಲ್ ಮೆಡಿಕಲ್ ಡೈರೆಕ್ಟರ್ ಆಗಿರುವ ಶ್ರೀಯುತ. ಡಾ .ಪೃಥ್ವಿಬಿ.ಸಿ ಹಾಗೂ ಅಸೋಸಿಯೇಟ್ ಪ್ರೊಫೆಸರ್ SIMS ನಲ್ಲಿಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಡಾ. ರೂಪಶ್ರೀ.ಎಸ್ ದಂಪತಿಗಳ ಪುತ್ರನಾಗಿದ್ದಾನೆ. ವಿದ್ಯಾರ್ಥಿಡಿ .ಆರ್. ಪ್ರಣಿತ್ ರೆಡ್ಡಿಶ್ರೀಮತಿ ಅನುಷಾ ಕೆ ಬಿ ಹಾಗೂ ಶ್ರೀಯುತ ರಮೇಶ್ ಡಿ.ಎಸ್ ದಂಪತಿಗಳ ಪುತ್ರನಾಗಿದ್ದಾನೆ.
ರಾಷ್ಟ್ರಮಟ್ಟದಲ್ಲಿಶಿವಮೊಗ್ಗ ನಗರವನ್ನುಪ್ರತಿನಿಧಿಸಿ ಶಾಲೆಗೆ, ಜಿಲ್ಲೆಗೆ ಹಾಗೂ ರಾಜ್ಯಕ್ಕೆಕೀರ್ತಿತಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರಿಶ್ರಮಕ್ಕೆಶಾಲೆಯ ಪ್ರಾಂಶುಪಾಲರಾದ ಡಾ.ಸರೋಜಾ ಬಿ ಶಿಳ್ಳಿನ್, ಆಡಳಿತ ಮಂಡಳಿಯವರಾದ ಶ್ರೀಯುತ ಸುರೇಶ್ ಕುಮಾರ್, ಕೋಆರ್ಡಿನೇಟರ್ರ್ಸ್, ಬೋಧಕ ಮತ್ತುಬೋಧಕೇತರ ವೃಂದದವರು ಹಾರೈಸಿ ಶುಭಕೋರಿದ್ದಾರೆ.