ಖಾಲಿ ಕೊಡಪಾನವಿಟ್ಟು ಪ್ರತಿಭಟನೆ

At Newmandli Second Cross in Shimoga, drinking water was not supplied for the last three months and a protest was held on the road.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ನ್ಯೂಮಂಡ್ಲಿ ಎರಡನೇ ಕ್ರಾಸ್ ನಲ್ಲಿ ಕುಡಿಯುವ ನೀರು ಕಳೆದ ಮೂರು ತಿಂಗಳಿಂದ ಸರಬರಾಜು ಆಗುತ್ತಿಲ್ಲವೆಂದು ಆರೋಪಿಸಿ ಕೊಡಪಾನಗಳನ್ನ ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಲಾಯಿತು. 

ರೈಸಿಂಗ್ ಮ್ಯಾನ್ ಬಂದ್ ಆದ ಕಾರಣ ಈ ಏರಿಯಾದಲ್ಲಿ ನೀರು ಬರ್ತಾಯಿಲ್ಲ. ನಿನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಜ್ಯ ಒಳಚರಂಡಿ ಮತ್ತು ಕುಡಿಯುವ ನೀರಿನ ಸರಬರಾಜು ಇಲಾಖೆಯ ಎಇಇ ಮಿಥುನ್ ಇಂದು ಬೆಳಿಗ್ಗೆಯಿಂದ ನೀರು ಬಿಡುವುದಾಗಿ ಭರವಸೆ ನೀಡಿದರೂ ಏನೂ ಕ್ರಮ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದರು. 

ರೈಸಿಂಗ್ ಇದ್ದಾಗ ಮೂರು ನಾಲ್ಕು ಗಂಟೆ ಬರ್ತಾ ಇತ್ತು ಈಗ ಕಳೆದ ಎರಡು ಮೂರು ತಿಂಗಳಿಂದ ನೀರು ಬರ್ತಾಯಿಲ್ಲ. ಸ್ಥಳೀಯರಿಂದ ನೀರಿನ ಟ್ಯಾಂಕರ್ ತರಿಸಿ ಹಂಚಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು. 500 ಮಬೆಗಳು ಇವೆ.  500 ಮನೆಗಳ ವಾಸಿಗಳು ಬೀದಿಗೆ ಇಳಿದು ಕೊಡಪಾನವಿಟ್ಟು ಪ್ರತಿಭಟಿಸಿದರು. 

ಹೊಳೆಯ ದಂಡೆಯ ಮೇಲೆ ನ್ಯೂಮಂಡ್ಲಿ ಇದ್ದರೂ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಸಂಜೆಯ ಮೇಲೆ ಸೊಳ್ಳೆ ಹಾವಳಿ ಹೆಚ್ಚಾಗಿದೆ. ಇದನ ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ  ಎಂದು ಮಹಿಳೆಯರು ಹಿಡಿಶಾಪ ಹಾಕಿದ್ದಾರೆ.  ಪಾಲಿಕೆ ಆಯುಕ್ತರು ಸ್ಥಳಕ್ಕೆ ಬಂದು ಭರವಸೆ ನೀಡ ಬೇಕೆಂದು ದೂರಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close