ಸಾವಿರ ವರ್ಷದಿಂದ ದಾಳಿಗೊಳದರೂ ಹಿಂದೂ ಧರ್ಮ ಬದುಕುಳಿದಿದೆ, ಧರ್ಮ ರಕ್ಷಣೆಯಲ್ಲಿ ಶಿವಾಜಿ ಮಹಾರಾಜರ ಕಾಣಿಕೆ ಅಪಾರ

Hindu activist Harika Manjunatha announced that Sanatan Dharma has been attacked for thousands of years but the religion has survived.

ಸುದ್ದಿಲೈವ್/ಶಿವಮೊಗ್ಗ

ಸನಾತನ ಧರ್ಮದ ಮೇಲೆ ಸಾವಿರಾರು ವರ್ಷಗಳಿಂದ ದಾಳಿ ನಡೆದರೂ  ಧರ್ಮ ಬದುಕುಳಿದಿದೆ ಎಂದು ಯುವವಾಗ್ಮಿ ಹಾರಿಕ ಮಂಜುನಾಥ ತಿಳಿಸಿದರು.

ಇಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾದ ಶಿವಾಜಿ ಮಹಾರಾಜರ ಜಯಂತ್ಯೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು 35 ವರ್ಷದ ಒಳಗೆ ಅದೆಷ್ಟೋ ಸಣ್ಣಪುಟ್ಟ ದಾಳಿಗೆ ಧರ್ಮಗಳು ಕಣ್ಮರೆಯಾಗಿದೆ. ಆದರೆ ಸಾವಿರಾರು ವರ್ಷಗಳಿಂದ ಮೊಘಲರು ಡಚ್ಚರು, ಪರ್ಶಿಯನ್, ಮಂಗೋಲಿಯನ್, ಬ್ರಿಟೀಶರಿಂದ ದಾಳಿಗೊಳಗಾದರೂ ಇವತ್ತಿಗೂ ಭಾರತದಲ್ಲಿ ಸನಾತನ ಧರ್ಮವಾಗಿ ಹಿಂದೂ ಧರ್ಮ ಬದುಕುಳಿದಿದೆ. ಮೊಘಲರ ಕಾಲದಲ್ಲಿ ಹಿಂದೂಗಳು ಧಾರ್ಮಿಕ ಯಾತ್ರೆಗೆ ಹೋಗುವಾಗ  ಜಾಜಿಯ ಕಂದಾಯ ಕಟ್ಟುವ ವ್ಯವಸ್ಥೆಯಿತ್ತು.  ಸಮರ್ಥ ರಾಮದಾಸರ ಮುಂದೆ ಈ ಚರ್ಚೆ ಮುಂದೆ ಬಂದಿತ್ತು. 

ಆ ವೇಳೆ ಸಮರ್ಥ ರಾಮದಾಸರು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ ಸಂಭವಾಮಿ ಯುಗೇ ಯುಗೇ ಎಂದಿದ್ದರು. ಆಗಲೆ ಜೀಜಾಬಾಯಿಯ ಗರ್ಭದಲ್ಲಿ ಶಿವಾಜಿ ಮಹಾರಾಜರು ಹುಟ್ಟಿ ಬಂದು ಹಿಂದೂ ಧರ್ಮ ರಕ್ಷಣೆಗೆ ನಿಂತರು. ಮನೆಯಲ್ಲಿ ಪ್ರತಿಯೊಬ್ಬ ತಾಯಿಯು ಜೀಜಾಬಾಯಿ ಆದಾಗ ಪ್ರತಿಯೊಂದ ಮನೆಯಲ್ಲಿ ಶಿವಾಜಿ ಮಹಾರಾಜರು ಹುಟ್ಟುತ್ತಾರೆ ಎಂದರು. 

ನನ್ನ ಮಗನಿಗೆ ಯಾಕೆ ದೇಶ ಕಾರ್ಯ ಎಂದು ಜೀಜಾಬಾಯಿ ಸುಮ್ಮನಿದ್ದರೆ, ಹಿಂದೂ ಧರ್ಮ ಕಟ್ಟಲು ಶಿವಾಜಿ ಹುಟ್ಟಿಬರುತ್ತಿರಲಿಲ್ಲ.  ತನ್ನ 15 ನೇ ವರ್ಷದಲ್ಲಿ ಮೊಘಲರ ಜಂಘೀ ಬಲವನ್ನೇ ಅಲುಗಾಡಿಸಿದ್ದವರು ಶಿವಾಜಿ ಮಹಾರಾಜರು.   ಶಿವಾಜಿ ಮಹಾರಾಜರಿಂದ ಕಲಿಯ ಬೇಕಾದ ಮೊದಲ ಪಾಠ ಸಂಘಟಿತ ಬಲ. ಈ ಬಲವೇ ಅವರ ಶಕ್ತಿಯಾಗಿತ್ತು ಎಂದು ತಿಳಿಸಿದರು. 

ಮಕ್ಕಳನ್ನ ಆಟ ಆಡಿಸುವ ಮೂಲಕ ದೇಶ ಭಕ್ತಿಯನ್ನ ಬೆಳೆಸಿದವರು ಶಿವಾಜಿ. ಒಬ್ಬೊಬ್ಬರಲ್ಲಿ ಧೈವ ಸ್ವರೂಪದ ಶಕ್ತಿಯನ್ನ ಧಾರೆ ಎರೆದು  ಎದುರಾಳಿಯನ್ನ ಶಿವಾಜಿ ಮಹಾರಾಜರು ಸಾಮ್ರಾಜ್ಯವನ್ನ ಕಟ್ಟಿದರು.  ಬಾಜಿ,  ಸಾಂಬಾಜಿ ಮೊದಲಾದವರ ಸೈನೆ ಕಟ್ಟಿದ್ದರು. ತಮ್ಮ ಸೈನ್ಯದ ಮೂಲಕ ಸಾಮ್ರಾಜ್ಯವನ್ನ ಕಟ್ಟಿದರು. ತಪಸ್ಸಿನ ಕಾರಣದಿಂದ ಶಿವಾಜಿ ಮಹಾರಾಜರು ಹುಟ್ಟಿ ಬಂದವರು ಎಂದರು.

ನಾವು ಒಂದು ಕರೆ ನೀಡಿದರೆ ಸಾಕ್ಷಾತ್ ಶಿವನೇ ಎದ್ದು ಬರ್ತಾನೆ ಎಂದರೆ ಮತ್ತೆ ಶಿವಾಜಿ ಹುಟ್ಟಿಬರೋದಿಲ್ವಾ? ಈ ಕರೆಯನ್ನ ಹಿಂದೂ ಧರ್ಮದಲ್ಲಿ ಸಾಗಿ ಶಿವಾಜಿ ಮಹಾರಾಜರನ್ನ ಕರೆಯಬೇಕು. ನಮ್ಮ ನಿಮ್ಮ ಜನ್ಮ ಸಿದ್ದ ಹಕ್ಕು ಹಿಂದೂ ಧರ್ಮದ ರಕ್ಷಣೆ ಅದರ ಮೂಲಕ ಧರ್ಮ ರಕ್ಷಿಸೋಣ  ಎಂದು ಕರೆ ನೀಡಿದರು.

ಜಾತಿಯನ್ನ ಸೀಮಿತಕ್ಕೊಳಪಡಿಸಿ ದಾರ್ಶನಿಕರನ್ನ ನೋಡಲಾಗುತ್ತಿದೆ. ಅದರ ಮೂಲಕ ಹಿಂದೂ ಧರ್ಮವನ್ನ ಬೆಳೆಸಲು ಸಾಧ್ಯವಿಲ್ಲ.  ಅದರಲ್ಲಿ ಶಂಕರಾಚಾರ್ಯರೂ ಹೌದು, ಬಸವಣ್ಣನೂ ಹೌದು, ಶಿವಾಜಿ ಮಹಾರಾಜರೂ ಹೌದು, ರಾಯಣ್ಣನೂ ಹೌದು ಎಂದ ಅವರು ಶಿವಾಜಿ ಮಹಾರಾಜರ ಮೂಲ ಕರ್ನಾಟಕದ ಗದಗ ಜಿಲ್ಲೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close