Three camels were brought to the Urus of Shiralakoppa. A case has been registered against bringing an animal from Rajasthan to Karnataka without any license and the court has fined the person who brought the camels.
ಸುದ್ದಿಲೈವ್/ಶಿರಾಳಕೊಪ್ಪ
ಶಿರಾಳಕೊಪ್ಪದ ಉರುಸ್ ಗೆ ಮೂರು ಒಂಟೆಗಳನ್ನ ಕರೆತರಲಾಗಿತ್ತು. ರಾಜಸ್ಥಾನದ ಪ್ರಾಣಿಯನ್ನ ಕರ್ನಾಟಕಕ್ಕೆ ತರಲು ಯಾವುದೇ ಪರವಾನಗಿ ಇಲ್ಲದ ತಂದಿದ್ದರ ಮೇಲೆ ಪ್ರಕರಣ ದಾಖಲಾಗಿದ್ದು, ಒಂಟೆಗಳನ್ನ ಕರೆತಂದ ವ್ಯಕ್ತಿಗೆ ನ್ಯಾಯಾಲಯ ದಂಡ ವಿಧಿಸಿದೆ.
ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಪ್ರಶಾಂತ್ ಅವರಿಗೆ ಆನ್ ಲೈನ್ ಮೂಲಕ ಒಂದು ದೂರು ಬಂದಿದ್ದು ಆನ್ ಲೈನ್ ದೂರಿನ ಆಧಾರದ ಮೇಲೆ ಬೆಲವಂತಕೊಪ್ಪದ ಮುಕ್ರಮ್ ಮನೆಯನ್ನ ತಪಾಸಣೆ ನಡೆಸಿದ್ದರು ತಪಾಸಣೆ ವೇಳೆ ಒಂಟೆಗಳು ಕಂಡು ಬಂದಿರುವುದಿಲ್ಲ.
ಆನವಟ್ಟಿ ರಸ್ತೆಯಲ್ಲಿರುವ ಅಮ್ಯೂಸ್ಮೆಂಟ್ ಪಾರ್ಕ್ ಬಳಿಯ ಶಿವಾನಂದ ರೈಸ್ ಮಿಲ್ ನಲ್ಲಿ ಒಂಟೆ ಇರುವ ಬಗ್ಗೆ ಮಾಹಿತಿ ಬಂದಿದ್ದು, ಪೊಲೀಸರು ಅದರ ಬೆನ್ನು ಹತ್ತಿದ ಪೊಲೀಸರಿಗೆ ಮೂರು ಒಂಟೆಗಳು ಪತ್ತೆಯಾಗಿವೆ. ಈ ವೇಳೆ ಪ್ರಕಾಶ್ ಎಂಬಾತ ಯಾವುದೇ ಪರವಾನಗಿ ಇಲ್ಲೆ ಉರುಸ್ ನಲ್ಲಿ ಮಕ್ಕಳಿಗೆ ಸವಾರಿ ಮಾಡಿಸಲು ತಂದಿರುವುದಾಗಿ ತಿಳಿಸಿದ್ಸಾನೆ.
ಮೂರು ಒಂಟೆಗಳನ್ನ ವಶಕ್ಕೆ ಪಡೆದು ಪ್ರಕಾಶ್ ಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯ ಒಂಟೆಗಳನ್ನ ಪರವಾನಗಿ ಇಲ್ಲದೆ ಕರೆತಂದ ಪ್ರಕಾಶ್ ಗೆ ದಂಡ ವಿಧಿಸಿದೆ. ನಂತರ ನೇರವಾಗಿ ಒಂಟೆಗಳನ್ನ ಸುರಕ್ಷಿತವಾಗಿ ರಾಜಸ್ಥಾನ್ ಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದೆ.