ಅರಣ್ಯ ಮತ್ತು ಕಂದಾಯ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಪ್ರತಿಭಟನೆ

Bagur Hukum Cultivation and Sharavati Submerged Farmers' Welfare Committee has decided to protest against the oppression of the forest department in the forest edges like Maidola Mallagenahalli Anvadhari, Sidera Kallahalli, Tadasa, Hanchina Siddapur, Kodihalli, Danawadi etc.


ಸುದ್ದಿಲೈವ್/ಶಿವಮೊಗ್ಗ

ಬಗುರ್ ಹುಕುಂ ಸಾಗುವಳಿ ಮತ್ತು ಶರಾವತಿ ಮುಳುಗಡೆ ರೈತರ ಹಿತರಕ್ಷಣಾ ಸಮಿತಿ ಮೈದೊಳಲು ಮಲ್ಲಗೇನಹಳ್ಳಿ ಆನ್ವಢರಿ, ಸೈದರ ಕಲ್ಲಹಳ್ಳಿ, ತಡಸ, ಹಂಚಿನ ಸಿದ್ದಾಪುರ, ಕೋಡಿಹಳ್ಳಿ, ದಾನವಾಡಿ ಮೊದಲಾದ ಕಾಡು ಅಂಚಿನಲ್ಲಿ ಅರಣ್ಯ ಇಲಾಖೆಯವರ ದಬ್ಬಾಳಿಕೆ ವಿರುದ್ಧ ಪ್ರತಿಭಟಬೆಗೆ ತೀರ್ಮಾನಿಸಿದೆ. 

ಭದ್ರಾವತಿಯಲ್ಲಿ ಮತ್ತು ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಭಾಗದಲ್ಲಿ ಬಗರ್ ಹುಕುಂ ಸಾಗುವಳಿ ರೈತರು ಮತ್ತು ಶರಾವತಿ ಮುಳುಗಡೆಯಿಂದ ಸ್ಥಳಾಂತರಗೊಂಡ ಸಂತ್ರಸ್ತ ರೈತರು ಸುಮಾರು 60-70 ವರ್ಷಗಳಿಂದ ಸಾಗುವಳಿ ಮಾಡಿಕೊಂಡುರವ 1970 ರಿಂದ 2018ರವರೆಗೂ ನಮೂನೆ 50,53 ರಲ್ಲಿ ಅರ್ಜಿಯನ್ನ ಸಲ್ಲಿಸಿದ ಅರ್ಜಿಗಳನ್ನ ಪರಿಶೀಲಿಸಿ ಬಗುರ್ ಹುಕುಂ ಸಮಿತಿಯಿಂದ ಹಕ್ಕು ಪತ್ರ ಮಂಜೂರಾಗಿದ್ದು ಈ ಹಕ್ಕು ಪತ್ರವನ್ನ ನಾನ್ಯತೆ ಮಾಡದೆ ಇರುವುದರಿಂದ ಪ್ರತಿಭಟಿಸಲಾಗುತ್ತಿದೆ. 

ರಂಗಪ್ಪ ಸರ್ಕಲ್ ನಿಂದ ತಹಶೀಲ್ದಾರ್ ಕಚೇರಿ ಮತ್ತು ಅರಣ್ಯ ಡಿಎಫ್ ಒ ಅಧಿಕಾರಿಗಳ ಕಚೇರಿಯ ವರೆಗೆ ಪಾದಯಾತ್ರೆ ನಡೆಯಲಿದೆ. ಶ್ರೀಗಂಧ, ಬೀಟೆ ಮತ್ತು ಸಾಗುವಾನಿ ಮರ ಕಡಿಯುತ್ತಿದ್ದೀರಿ ನಿಮ್ಮ ವಿರುದ್ಧ ದಾವೆ ಹೂಡುವುದಾಗಿ ಸೂಚನಾ ಪತ್ರಗಳನ್ನ ಅರಣ್ಯ ಇಲಾಖೆ ನೀಡಿದೆ. ಎಸಿಗೆ ಕೇಳಿದರೆ ಇದು ಮಾನ್ಯತೆಯಿಲ್ಲ ಎಂದು ಹೇಳುತ್ತಾರೆ. ಇದರ ವಿರುದ್ಧ ಪ್ರತಿಭಟನೆಗೆ ಸಮಿತಿ ಫೆ.21 ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಭಟನ ನೆರವಣಿಗೆ ನಡೆಸಲಾಗುವುದು ಎಂದರು. 

ಸಂಸದರು, ಶಿವಮೊಗ್ಗ ಗ್ರಾಮಾಂತರ ಶಾಸಕಿ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ಎಂಎಲ್ ಸಿ ಗಳಾದ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್, ಬಲ್ಕಿಸ್ ಭಾನು, ಮೊದಲಾದ ನಾಯಕರು ಭಾಗಿಯಾಗಲಿದ್ದಾರೆ ಎಂದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close