ಸುದ್ದಿಲೈವ್/ಭದ್ರಾವತಿ
ಭದ್ರಾವತಿಯಲ್ಲಿ ಗುಂಡಿನ(firing) ಸಪ್ಪಳ(sound) ಕೇಳಿ ಬಂದಿದೆ. ಹೊಸಮನೆ ಪೊಲೀಸ್ ಠಾಣೆಯ ಪಿಎಸ್ ಐ ಕೃಷ್ಣ ಕುಮಾರ್ ಮಾನೆ ಹಾರಿಸಿದ ಗುಂಡು ಆರೋಪಿಯ ಕಾಲನ್ನ ಸೀಳಿದೆ.
ಭದ್ರಾವತಿಯಲ್ಲಿ ಗುಂಡ ಯಾನೆ ರವಿ ಎಂಬಾತನ ಮೇಲೆ ನಾಲ್ಕು ಕೊಲೆಯತ್ನ ಆರೋಪಗಳಿದ್ದವು. ಆತನನ್ನ ಹಿಡಿದು ಕರೆ ತರುವಾಗ ಆರೋಪಿ ರವಿ ಪಿಸಿ ಆದರ್ಶನ ಮೇಲೆ ಆಯುಧಗಳಿಂದ ದಾಳಿ ನಡೆಸಿದ್ದ. ಈ ವೇಳೆ ಆದರ್ಶನನ್ನ ರಕ್ಷಿಸಲು ಪಿಎಸ್ಐ ಕೃಷ್ಣ ಕುಮಾರ್ ಮಾನೆ ಆರೋಪಿ ಕಾಲಿಗೆ ಗುಂಡು ಹಾರಿಸಿ ರಕ್ಷಣೆ ಮಾಡಿದ್ದಾರೆ.
ಗುಂಡ ಯಾನೆ ರವಿ ವಿರುದ್ಧ ನಾಲ್ಕು 307 ಪ್ರಕರಣ ದಾಖಲಾಗಿತ್ತು. ಹೊಸಮನೆ ಪೊಲೀಸರು ಈತನನ್ನ ಕರೆತರಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಲು ಹೋಗಿ ಪೊಲೀಸರ ಮೇಲೆ ದಾಳಿಗೆ ನಿಂತ್ಬುಡ್ತಾನೆ.
ಆತನ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸುವಂತಾಗಿದೆ. ಗಾಯಗೊಂಡ ಪಿಸಿ ಆದರ್ಶನರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್ಪಿ ಮಿಥುನ್ ಕುಮಾರ್ ಅವರು ಶಿವಮೊಗ್ಗಕ್ಕೆ ಬಂದ ನಂತರ ಗುಂಡಾಗಳ ಹೆಡೆ ಮುರಿಯನ್ನೇ ಕಟ್ಟಲು ಪ್ರಯತ್ನಿಸಿದ್ದಾರೆ. 2022 ಸೆಪ್ಟಂಬರ್ ನಿಂದ 2025 ಇಲ್ಲಿಯ ವರೆಗೆ ಬಹಶಃ 15 ಕ್ಕೂ ಹೆಚ್ಚು ಜನ ಗೂಂಡಾಗಳ ಕಾಲುಗಳು ಸೀಳಿರಬಹುದು. ಮೋಟು ಪ್ರವೀಣ, ಮುಬಾರಕ್, ರೌಡಿಶೀಟರ್ ಹಬೀಬುಲ್ಲಾ ಅಲಿಯಾಸ್ ಅಮ್ಮು, ಸೈಫುಲ್ಲಾ ಖಾನ್ ಅಲಿಯಾಸ್ ಸೈಫು,
ಅಸ್ಲಾಂ, ಶೋಯೆಬ್ ಅಲಿಯಾಸ್ ಅಂಡ, ಹರ್ಷದ್ ಯಾನೆ ಜಾಮೂನು, ಭವಿತ್, ರಜಾಕ್, ಫರ್ವೇಜ್ ಯಾನೆ ಫರ್ರು, ಮಂಜುನಾಥ್ ಯಾನೆ ಒಲಂಗ ಮೊದಲಾದವರು ಸೇರಿದಂತೆ 15 ಕ್ಕೂ ಹೆಚ್ಚು ಜನರ ಕಾಲುಗಳನ್ನ ಪೊಲೀಸರ ಗುಂಡು ಸೀಳಿದೆ.
ಇವರೆಲ್ಲ ಕಾನೂನು ಬಾಹಿರ, ಕೊಲೆ, ಕೊಲೆಯತ್ನದಲ್ಲಿ ಭಾಗಿಯಾದ ಅಪರಾಧಿಗಳಾಗಿದ್ದು, ಇವರುಗಳು ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದವರಾಗಿದ್ದಾರೆ. ಇವರ ಕಾಲಿಗೆ ಬುದ್ದಿಹೇಳಲಾಗಿದೆ.