ಫೆ. 22 ಮತ್ತು 24 ರಂದು ವಿದ್ಯುತ್ ವ್ಯತ್ಯಯ

There will be power outage in many parts of the city tomorrow and February 24, Monday. Tomorrow there will be power disruption on NT road due to highway work and replacement of electric pole


ಸುದ್ದಿಲೈವ್/ಶಿವಮೊಗ್ಗ ಫೆಬ್ರವರಿ 21

ನಾಳೆ ಮತ್ತು ಫೆ.24 ರಂದು ಸೋಮವಾರ ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ನಾಳೆ ಎನ್ ಟಿ ರಸ್ತೆಯಲ್ಲಿ ಹೈವೆ ಕಾಮಗಾರಿ ಮತ್ತು ವಿದ್ಯುತ್ ಕಂಬ ಬದಲಿಸುವಿಕೆ ಹಿನ್ನಲೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.‌

ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ-6ರ ವ್ಯಾಪ್ತಿಯಲ್ಲಿ ಎನ್.ಟಿ.ರಸ್ತೆ ನ್ಯಾಷನಲ್ ಹೈವೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ. 22 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹರಕೆರೆ, ಹಳೇ ಮಂಡ್ಲಿ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಮಂಜುನಾಥ ರೈಸ್‌ಮಿಲ್, ಬೆನಕೇಶ್ವರ ರೈಸ್‌ಮಿಲ್, ರಾಮಿನಕೊಪ್ಪ ಅನ್ನಪೂರ್ಣೇಶ್ವರಿ ಬಡಾವಣೆ, ಹೊಸಹಳ್ಳಿ, ಲಕ್ಷ್ಮೀಪುರ, ಹೊಸೂರು, ಐಹೊಳೆ, ಭಾರತಿನಗರ, ಶಾರದನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

ಫೆ. 24ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನಗರದ ಮೀನು ಮಾರುಕಟ್ಟೆ ಹತ್ತಿರದ ಶಿವಾಜಿ ರಸ್ತೆಯಲ್ಲಿ ವಿದ್ಯುತ್ ಕಂಬಗಳನ್ನು ಬದಲಿಸುವ ಕಾಮಗಾರಿ ಇರುವುದರಿಂದ ಫೆ.24 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣ ಕೇರಿ, ಯಾಲಕಪ್ಪಕೇರಿ, ಬೇಡರಕೇರಿ, ಅಶೋಕರಸ್ತೆ, ಅನವೇರಪ್ಪ ಕೇರಿ, ರಾಮಣ್ಣಶ್ರೇಷ್ಠಿ ಪಾರ್ಕ್, ಎಸ್‌ಪಿಎಂ ರಸ್ತೆ, ಮೀನು ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close