ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಬಿಹೆಚ್ ರಸ್ತೆಯಲ್ಲಿರುವ ಇ ಎಸ್ ಐ ಕಚೇರಿಯಲ್ಲಿ(office) ನಲ್ಲಿ ಸರ್ವರ್ ಡೌನ್(server Down) ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಈ ತೊಂದರೆಯ ಬೆನ್ನಲ್ಲೇ ಸಾರ್ವಜನಿಕರು ಇಎಸ್ಐ ಸಿಬ್ಬಂದಿಗಳ ವಿರುದ್ದ ಹಿಡಿಶಾಪ ಹಾಕಲಾರಂಭಿಸಿದ್ದಾರೆ.
ಇಎಸ್ಐ ಹಾಸ್ಪಿಟಲ್ ನಲ್ಲಿ ಸರ್ವರ್ ಪ್ರಾಬ್ಲಮ್ ನಿಂದಾಗಿ ಇನ್ಫ್ಯುಯನ್ಸ್ ಇರುವವರಿಗೆ ಮಾತ್ರ ವೈದ್ಯಕೀಯ ಶಿಫಾರಸ್ಸು ಪತ್ರ ದೊರೆಯುತ್ತಿದೆ. ಇಲ್ಲೂ ಸಹ ಪ್ರಬಲರಿಗೆ ಸರ್ವರ್ ಇರುವಂತಾಗಿ, ಉಳಿದ ಕಾರ್ಮಿಕರಿಗೆ ಸರ್ವರ್ ಇರುವುದಿಲ್ಲವೆಂದು ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.
ಸರ್ವರ್ ಡೌನ್ ನಿಂದಾಗಿ ಇ ಎಸ್ ಐ ಗೆ ಹೊಂದಿಕೊಂಡಿರುವ ಇತರೆ ಆಸ್ಪತ್ರೆಗಳಲ್ಲಿ, ಚಿಕಿತ್ಸೆ ಪಡೆಯಲು ವೈದ್ಯರ ಒಂದು ರೆಫರೆನ್ಸ್ ಲೆಟರ್ ತೆಗೆದುಕೊಳ್ಳುವುದಕ್ಕೆ ಗಂಟೆಗಟ್ಟಲೆ ನಿಲ್ಲಿಸುವಂತಾಗಿದೆ. ಯಾವಾಗಲೂ ಅಲ್ಲಿ ಸರ್ವರ್ ಪ್ರಾಬ್ಲಮ್ ಇರುತ್ತೆ. ರೋಗಿಗಳು ಬಿಲ್ ಕೊಡಲು ಹೋದಾಗಲೂ ಕೂಡ ಸರಿಯಾದ ರೆಸ್ಪಾನ್ಸ್ ಇರುವುದಿಲ್ಲ ಎಂದು ನೊಂದ ಇಎಸ್ಐ ಕಾರ್ಡ್ ಹೋಲ್ಡರ್ ಆರೋಪಿಸಿದ್ದಾರೆ.
ಇ ಎಸ್ಐ ಹಾಸ್ಪಿಟಲ್ ನೌಕರರು ರೋಗಿಗಳೊಂದಿಗೆ ಸ್ಪಂದಿಸುವುದಿಲ್ಲ. ಕೆಲಸ ಮಾಡಿಕೊಳ್ಳಲು ಬಹಳ ಹಿಂದೇಟು ಹಾಕುತ್ತಾರೆ. ಫ್ರೀಯಾಗಿ ಕೆಲಸ ಮಾಡುವವರ ರೀತಿ ವರ್ತನೆ ಮಾಡುತ್ತಾರೆ. ಕಾರ್ಮಿಕರ ಕಷ್ಟಗಳಿಗೆ ಯಾರು ಸ್ಪಂದಿಸುತ್ತಿಲ್ಲ. ಗಂಟೆಗಟ್ಟಲೆ ಅಲ್ಲಿ ಕಾಯಬೇಕಾಗಿದೆ. ಈ ಕುರಿತು ಸಚಿವ ಸಂತೋಷ್ ಲಾಡ್ ಶಿವಮೊಗ್ಗಕ್ಕೆ ಭೆಟಿ ನೀಡಿದಾಗ ಅಂತಹ ಸಮಸ್ಯೆಗಳಿಲ್ಲ ಎಂಬ ಭರವಸೆ ನೀಡಿದ್ದರು.
ಆದರೆ ಇಎಸ್ಐ ಸಮಸ್ಯೆಗಳು ಕಾರ್ಮಿಕರಿಗೆ ಆಗುತ್ತಿದ್ದರು ಯಾರನ್ನ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂಬುದರ ಬಗ್ಗೆ ಗೊತ್ತಿಲ್ಲ. ಆದರೆ ಸಂಬಂಧ ಪಟ್ಟ ಇಲಾಖೆ ಅಧಿಜಾರಿಗಳಿ್ಎ ಈ ಸಮಸ್ಯೆ ಗೊತ್ತಿದ್ದರೂಎಚ್ಚರ ವಹಿಸಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ.