ಪಶುಸಂಗೋಪನೆ ಒತ್ತುವರಿ ಜಾಗ ತೆರವು

Tehsildar Rajeev identified the encroached areas in Shimoga countryside. Two major encroachments were cleared with the help of Tunganagar PI Gururaj KT and staff.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಗ್ರಾಮಾಂತರ ಭಾಗದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಜಾಗಗಳನ್ನ ತಹಶೀಲ್ದಾರ್ ರಾಜೀವ್ ತೆರವುಗೊಳಿಸಿದ್ದಾರೆ. ತುಂಗನಗರದ ಪಿಐ ಗುರುರಾಜ್ ಕೆಟಿ ಮತ್ತು ಸಿಬ್ಬಂದಿಗಳ ಸಹಾಯದಿಂದ ಪ್ರಮುಖ ಎರಡು ಒತ್ತುವರಿಯನ್ನ ತೆರವುಗೊಫುಸಲಾಗಿದೆ. 

ಸೋಗಾನೆ ಸರ್ವೆ ನಂಬರ್ 120 ಮಂಡೆನಕೊಪ್ಪದ  243 ಸರ್ವೆ ನಂಬರ್ ಸರ್ಕಾರಿ ಜಾಗವನ್ನ ಒತ್ತುವರಿ ಮಾಡಲಾಗಿತ್ತು. ತಹಶೀಲ್ದಾರ್ ರಾಜೀವ್  ನೇತೃತ್ವದಲ್ಲಿ ಜಾಗ ಒತ್ತುವರಿ ತೆರವುಗೊಳಿಸಲಾಯಿತು.  2018 ರಲ್ಲಿ ಪಶುಸಂಗೋಪನೆ ಇಲಖೆಗೆ ಈ ಜಾಗ ಮಂಜೂರಾಗಿತ್ತು. 

ಮಂಜೂರಾತಿ ಜಾಗವನ್ನ ಕಬ್ಜ ಮಾಡಿಕೊಂಡಿದ್ದವರನ್ನ ತೆರವುಗೊಳಿಸಲಾಗಿದೆ. ಎರಡೂ ಕಡೆ ಪಶು ಇಲಾಖೆಗೆ 1 ಎಕರೆ 30 ಗುಂಟೆ ಜಾಗವನ್ನ ಒತ್ತುವರಿ ಬಿಡಿಸಲಾಗಿದೆ. 

ಅದರಂತೆ ಹಸೂಡಿ ಸರ್ವೆ ನಂಬರ್ 134/6 ಪಿಸಿಟಿಎಲ್ ಜಾಗವನ್ನ ತಶೀಲ್ದಾರ್ ಅವರು ತೆರವುಗೊಳಿಸಿದ್ದಾರೆ. ಎರಡು ಎಕರೆಯನ್ನ ಜೆಸಿಬಿ ಮೂಲಕ ತೆರವುಗೊಳಿಸಿ ಜಗದೀಶ್ ಎಂಬುವರಿಗೆ ಬಿಟ್ಟುಕೊಡಾಯಿತು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close