ಸುದ್ದಿಲೈವ್/ಶಿವಮೊಗ್ಗ
ಎಲ್ಲಿನ ಶಿವಮೊಗ್ಗ, ಎಲ್ಪಿನ ಪ್ರಯಾಗ್ ರಾಜ್ ನ ಕುಂಭಮೇಳ?(kumbh Mela) ಆದರೆ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಶಿವಮೊಗ್ಗದಿಂದ ಹೊರಟ 250 ಜನರಿಗೆ 14,50,000 ಲಕ್ಷ ರೂ ವಂಚನೆ(fraud) ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
ಶಿವಮೊಗ್ಗದ ಯೋಗ ವಿಸ್ಮಯ ಟ್ರಸ್ಟ್ ನಿಂದ 650 ಜನ ಫೆ.14 ರಂದು ಮಹಾಕುಂಭಮೇಳಕ್ಕೆ ಹೋಗಲು ತೀರ್ಮಾನಿಸಿ ಅಲ್ಲಿ ವ್ಯವಸ್ಥೆ ಮಾಡಿಕೊಳ್ಳಲು ಅನೇಕರನ್ನ ಟ್ರಸ್ಟ್ ನ ವಿಜಯಲಕ್ಷ್ಮಿಯವರು ಸಂಪರ್ಕಿಸಿದ್ದಾರೆ. ಕೊನೆಗೆ ಬಗಳೂರಿನ 3 ಜಿ ಯೋಗ ಚಿಕಿತ್ಸಾಲಯದ ಡಾ. ಗುಂಜೂರು ಗಣೇಶ್ ಗುರೂಜಿಯನ್ನ ಸಂಪರ್ಕಿಸಿದ್ದಾರೆ.
ಇಂಡಿಯನ್ ಯೋಗ ಅಸೋಸಿಯೇಷನ್ ನ ಯೋಗ ಮಂಡಲದಲ್ಲಿ ಒಂದು ದಿನಕ್ಕೆ 5 ಸಾವಿರ ರೂ. ನಂತೆ ಊಟ ತಿಂಡಿ ಸ್ನಾನ, ಯೋಗ ಮಾಡಲು ಅವಕಾಶವಿರುವ ಬಗ್ಗೆ ತಿಳಿದು ಗುರೂಜಿಯನ್ನ ಸಂಪರ್ಕಿಸಿ ಒಟ್ಟು 250 ಜನರಿಗೆ ವ್ಯವಸ್ಥೆ ಮಾಡಲು 5 ಲಕ್ಷ ರೂ. ಹಣಕಟ್ಟು ವಂತೆ ಸೂಚಿಸಿ 14,50000 ಲಕ್ಷ ರೂವನ್ನ ಸಂದಾಯಿಸಿದ್ದಾರೆ.
ಯಾವಾಗ ಶಿಬಿರಾರ್ಥಿಗಳು ವಸತಿ ವ್ತವಸ್ಥೆಯ ಕಾಟೇಜ್ ಗಳನ್ನ ವಾಟ್ಸಪ್ ನಲ್ಲಿ ಹಾಕಿಸಿಕೊಳ್ಳಲು ಒತ್ತಾಯಿಸಲು ಆರಂಭಿಸಿದ್ದರಿಂದ ಗುರೂಜಿಯನ್ನ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆಗ ಗುರೂಜಿಯ ಆಪ್ತ ಶ್ರೀಕಾಂತ್ ಮಾತನಾಡಿ ಸೆಕ್ಟರ್ 24 ರಲ್ಲಿ ತಗಡಿಶೀಟ್ ಹಾಕಿ ವ್ಯವಸ್ಥೆ ಮಾಡಲಾಗಿದೆ. 6-8 ಬೆಡ್ ಗಳಿಗೆ ಸೀರೆ ಕಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನ ಶಿಬಿರಾರ್ಥಿಗಳು ಒಪ್ಪೊಲ್ಲವೆಂದು ತಿಳಿದು ಜಯಲಕ್ಷ್ಮೀ ಅವರು ಈ ವ್ಯವಸ್ಥೆ ಬೇಡ ನಮ್ಮ ಹಣವನ್ನ ವಾಪಾಸ್ ಕೊಡುವಂತೆ ಗುರೂಜಿಯನ್ನ ಕೇಳಿದ್ದಾರೆ. ಈ ಹಣವನ್ನ ಖರ್ಚು ಮಾಡಿರುವೆ ಶಿಬಿರಾರ್ಥಿಗಳಿಗೆ ಇಲ್ಲೇ ಉಳಿಯಲು ತಿಳಿಸಿ. ಇಲ್ಲವಾದಲ್ಲಿ 2-3 ತಿಂಗಳು ಸಮಯ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಂತರ ಶ್ರೀಕಾಂತ್ ಮಾತನಾಡಿ ಮಹಾಮಂಡಲೇಶ್ವರದ ಯೋಗೇಶ್ ಅವರು ಒಂದು ವೇಳೆ ಒಪ್ಪದಿದ್ದರೆ ನೀವು ಕುಂಭಕ್ಕೆ ಕಾಲಿಡದಂತೆ ಫೇಸ್ ಬುಕ್ ನಲ್ಲಿ ಎಲ್ಲೆಡೆ ಟ್ಯಾಗ್ ಮಾಡಿ ಹರಿಬಿಡುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ. ನಂತರ ಯೋಗೇಶ್ ನಮ್ಮ ಮೊಬೈಲ್ ನ್ನ ಕಿತ್ತುಕೊಂಡು ಕೂಡಿಹಾಕಿದ್ದಾರೆ. 75 ಲಕ್ಷ ರೂ. ನೀಡಿ ಬಿಡಿಸಿಕೊಂಡು ಹೋಗಲು ಬೇಡಿಕೆ ಇಟ್ಟಿದ್ದಾರೆ ಎಂದು ಶ್ರೀಕಾಂತ್ ಹಲವು ಬಾರಿ ವಿಜಯ ಲಕ್ಷ್ಮೀಗೆ ಕರೆ ಮಾಡಿದ್ದಾರೆ.
ಈ ಹಿನ್ಬಲೆಯಲ್ಲಿ ಹಣ ನೀಡದ ವಿಜಯಲಕ್ಷ್ಮೀ ನೇರವಾಗಿ ವಿನೋಬ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗುರೂಜಿ, ಮತ್ತು ಶ್ರೀಕಾಂತ್ ವಿರುದ್ಧ ನಂಬಿಸಿ ವಂಚಿಸಿದ ಪ್ರಕರಣ ದಾಖಲಾಗಿದೆ.