ಸುದ್ದಿಲೈವ್/ಶಿವಮೊಗ್ಗ
ನನ್ನ ಸೇವೆ ಕನ್ನಡಕ್ಕೆ ಕರ್ನಾಟಕಕ್ಕೆ. ನನ್ನ ತಂದೆ ಯವರ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ನನ್ನ ತಂದೆಯವರ ಹೆಸರು ಇಟ್ಟಿದ್ದಾರೆ ಎಂದು ಸಹಾಯ ಮಾಡುತ್ತಿಲ್ಲ. ಕನ್ನಡ ಉಳಿಯಬೇಕು ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಸಹಾಯ ಮಾಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸಾಹಿತ್ಯ ಗ್ರಾಮದಲ್ಲಿ ಬಂಗಾರಪ್ಪನವರ ಗ್ರಂಥಾಲಯಕ್ಕೆ 5 ಲಕ್ಷ ರೂ. ನಗದು ಹಣ ದೇಣಿಗೆ ನೀಡಿ ಮಾತನಾಡಿ, ನಮ್ಮ ತಂದೆಯವರು ಬೀದಿ ದೀಪದಲ್ಲಿ ಓದುತ್ತಿದ್ದರು. ಕನ್ನಡದ ಕುರಿತು ಹೆಚ್ಚು ಅಭಿಮಾನ ಇದೆ. ಪುಸ್ತಕ ಓದುವುದು ಒಳ್ಳೆಯ ಸ್ನೇಹಿತನಿಗೆ ಸಮಾನ. ಒಬ್ಬ ಒಳ್ಳೆಯ ಸ್ನೇಹಿತ ಜೀವನ ಪೂರ್ತಿ ಇರುತ್ತಾನೆ. ಹಾಗಾಗಿ ಒಳ್ಳೆಯ ಪುಸ್ತಕಗಳನ್ನು ಓದಬೇಕು. ಸಾಹಿತ್ಯಕ್ಕಾಗಿ ಇದನ್ನು ಬಳಸಬೇಕಾಗುತ್ತದೆ ಎಂದರು.
ಅನೇಕ ಸಾಹಿತಿಗಳು ಜಿಲ್ಲೆಯಲ್ಲಿ ಇದ್ದಾರೆ. ಇಲ್ಲಿಯೇ ಒಂದು ಸಾಹಿತ್ಯ ಸಭಾಂಗಣ ಇಲ್ಲ ಎಂದರೆ ಅದು ಸರಿಯಲ್ಲ. ಇಷ್ಟರಲ್ಲಿ ಆಗಬೇಕಿತ್ತು. ಆದರೆ ಇವಾಗ ಆಗುತ್ತಿದೆ.
2.5 ಕೋಟಿ ಬಹಳ ದೊಡ್ಡ ಮೊತ್ತವಾದರೂ ಕನ್ನಡಕ್ಕೆ ಅದು ದೊಡ್ಡ ಮೊತ್ತದ ಹಣವಲ್ಲ. ಪ್ರಸ್ತುತ ಪೋಷಕರು ಮಕ್ಕಳನ್ನು ಕನ್ನಡ ಮೀಡಿಯಂ ಗೆ ಕಳುಹಿಸುತ್ತಿಲ್ಲ. ಮಕ್ಕಳು ನಿಮ್ಮ ಚಿಂತನೆಯ ಮೂಲಕ ಮೊದಲ ಭಾಷೆ ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಬೇಕು. ನನ್ನ ರಕ್ತ ಕನ್ನಡದ್ದು ಎನ್ನುವ ಮನೋಭಾವ ಬರಬೇಕು. ನಮ್ಮ ಪ್ರಚಾರ ಕನ್ನಡಕ್ಕೆ ಉಪಯೋಗ ಆಗುತ್ತದೆ ಎಂದರೆ ನಾನು ಬಂದು ಪ್ರಚಾರ ಮಾಡಲಿಕ್ಕೂ ಸಿದ್ಧ ಎಂದು ತಿಳಿಸಿದರು.
ಬಂಗಾರಪ್ಪ ಅವರ ಮಗ ಕನ್ನಡದವರು ಎನ್ನಬೇಕು. ಸಾಹಿತ್ಯ ಸಭಾಂಗಣವನ್ನು ಮುಗಿಸಿಕೊಡುವ ಕೆಲಸ ನನ್ನದು. ಸರ್ಕಾರದಿಂದಲೂ ಹಣ ಕೊಡಿಸಲು ಪ್ರಯತ್ನಿಸುತ್ತೇನೆ. ಗ್ರಂಥಾಲಯ ಶಿಕ್ಷಕರಿಲ್ಲದ ವಿಶ್ವವಿದ್ಯಾಲಯವಿದ್ದಂತೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಎಲ್ಲ ಪ್ರಯತ್ನವನ್ನೂ ನಾನು ಮಾಡುತ್ತೇನೆ. ಹೆಜ್ಜೆಯನ್ನು ಪುಟ್ಟಪುಟ್ಟದಾಗಿ ಇಡೋಣ ಆದರೆ ವೇಗ ಹೆಚ್ಚು ಮಾಡುತ್ತೇನೆ. ಸ್ವಲ್ಪ ಸಮಯಬೇಕು. ಆದರೆ ವೇಗವಾಗಿ ಮಾಡುತ್ತೇನೆ.
ಪೂರ್ಣ ನಿರ್ಮಾಣಕ್ಕೆ 2.5 ಕೋಟಿ ಹಣ ಬೇಕಾಗುತ್ತದೆ. 20 ವರ್ಷಗಳಿಂದ ಮಕ್ಕಳ ಸಮ್ಮೇಳನ ಮಾಡುತ್ತಿದ್ದೇವೆ. ಜಾನಪದ ಸಮ್ಮೇಳನದ ಜಿಲ್ಲಾ ಮಟ್ಟದ 6ನೇ ಸಮ್ಮೇಳನ ನಡೆಯುತ್ತಿದೆ. ಕ್ರಿಯಾಶೀಲ ಚಟುವಟಿಕೆಯನ್ನು ಮಾಡುತ್ತಾ ಬಂದಿದ್ದೇವೆ. ಇನ್ನಷ್ಟು ಚೈತನ್ಯಯುತವಾಗಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದೇವೆ.
ಬಂಗಾರಪ್ಪ ಅವರು ಸುಮಾರು 40 ನಿಮಿಷ ಕುವೆಂಪು ಅವರ ಕುರಿತು ಸುದೀರ್ಘವಾಗಿ ಮಾತನಾಡಿದ್ದರು. ಅವರ ಹೆಸರಿನಲ್ಲಿ ಅಚ್ಚುಕಟ್ಟಾಗಿ ಗ್ರಂಥಾಲಯ ಮಾಡಲಾಗುವುದು ಎಂದರು.
ಡಿ ಮಂಜುನಾಥ್, ಜಿಲ್ಲಾ ಕಸಾಪ ಅಧ್ಯಕ್ಷರು
---------------------------------------------
ಮಂಜುನಾಥ ಗೌಡರು, ಬಾಲ್ಕಿಶ್ ಬಾನು, ಚಂದ್ರ ಭೂಪಾಲ್, ವಿಜಿ, ರಮೇಶ್ ಹೆಗಡೆ, ಡಿ. ಮಂಜುನಾಥ,