Recently, a complaint was filed in the police station due to a scuffle between two officials in the regional transport department. The case has taken a political turn by backing an organization.
ಸುದ್ದಿಲೈವ್/ಶಿವಮೊಗ್ಗ
ಇತ್ತೀಚೆಗೆ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಇಬ್ಬರು ಅಧಿಕಾರಿಗಳ ನಡುವೆ ಉಂಟಾದ ಗಲಾಟೆ ಹಾದಿ ರಂಪ ಬೀದಿ ರಂಪ ಉಂಟಾಗಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಘಟನೆಯೊಂದು ಬೆನ್ನಿಗೆ ನಿಲ್ಲುವ ಮೂಲಕ ರಾಜಕೀಯ ತಿರುವು ಪಡೆದುಕೊಂಡಿದೆ.
ನಿರೀಕ್ಷಕ ಮಲ್ಲೇಶ್ ಅವರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಇಂದು ದಲಿತ ಹಿಂದುಳಿದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ ಜಂಟಿ ಸಾರಿಗೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಮುಖ್ಯಮಂತ್ರಿ ಸಿದ್ಸರಾಮಯ್ಯ, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸಿದೆ.
ಪ್ರೊಬೇಷನರಿ ಅಧಿಕಾರಿ ಮಂಜುನಾಥ್ ಅವರು ಫೆ.04 ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ಮಲ್ಲೇಶಪ್ಪನವರು ಕಿರುಕುಳ ಹಿಂಸೆ ಜಾಸ್ತಿಯಾಗಿದೆ ಎಂದು ದೂರು ದಾಖಲಿಸಿದ್ದರು. ಫೆ.10 ರಂದು ಮಲ್ಲೇಶಪ್ಪನವರು ಪ್ರೊಬೇಷನರಿ ಅಧಿಕಾರಿ ಮಂಜುನಾಥ್ ವಿರುದ್ಧ ಹಲ್ಲೆ, ಅವ್ಯಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ್ದರು.
ಈ ವಿಚಾರದಲ್ಲಿ ಮಲ್ಲೇಶಪ್ಪನವರಿಗೆ ವರ್ಗಾವಣೆಯ ಬಿಸಿಯೂ ತಟ್ಟಿತ್ತು. ಈ ಹಿನ್ನಲೆಯಲ್ಲಿ ಸಂಘಟನೆಯೊಂದು ಡಿಸಿಗೆ ಸಿಎಂಗೆ ಸಚಿವರಿಗೆ ಮನವಿ ಸಲ್ಲಿಸುವ ಮೂಲಕ ಬ್ರೇಕ್ ಇನ್ ಸ್ಪೆಕ್ಟರ್ ಮಲ್ಲೇಶಪ್ನವರ ಪರವಾಗಿ ಬೆನ್ನಿಗೆ ನಿಂತಿದ್ದಾರೆ.