ಕೂಡು ಕುಟುಂಬ ನಾಶವಾಗಲಿ ಎಂದು ವಾಮಾಚಾರ

Sorcery has been done to destroy the Kudu family. Witchcraft was conducted in Bogi village of Udugani Hobali in Shikaripura taluk of Shimoga district.


ಸುದ್ದಿಲೈವ್/ಶಿರಾಳಕೊಪ್ಪ

ಕೂಡು ಕುಟುಂಬ ನಾಶವಾಗಲಿ ಎಂದು ವಾಮಾಚಾರ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುಗಣಿ ಹೋಬಳಿಯ ಬೋಗಿ ಗ್ರಾಮದಲ್ಲಿ ವಾಮಾಚಾರ ನಡೆಸಲಾಗಿದೆ. 

ಮನೆ ಸಮೀಪ ಹಾಗೂ ತೋಟದಲ್ಲಿ ವಾಮಾಚಾರವನ್ನ ದುಷ್ಕರ್ಮಿಗಳು ನಡೆಸಿದ್ದು, ಇಂದು ಬೆಳಗ್ಗೆ ಪತ್ತೆಯಾದ ವಾಮಾಚಾರದ ಬೆಳಕಿಗೆ ಬಂದಿದೆ. ಮಡಿಕೆ, ಕುಡಿಕೆ, ಸೂಜಿ, ಲಿಂಬೆಹಣ್ಣು ಮತ್ತು ತ್ರಿಶೂಲ, ಮೊಟ್ಟೆ, ಶಂಕು, ಕುಂಕುಮ ವಸ್ತುಗಳನ್ನು ಬಳಸಿ ವಾಮಾಚಾರ ನಡೆದಿದೆ. 


ಹನುಮ ನಾಯ್ಕನ ಕೂಡು ಕುಟುಂಬದ ಭವಿಷ್ಯ ಮತ್ತು ಜೀವನ ಹಾಳಾಗಲಿ ಎಂದು ಬರೆದು ವಾಮಾಚಾರ ನಡೆಸಲಾಗಿದ್ದು, ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಹಿಂದೆಯೂ ಇದೇ ರೀತಿಯ ವಾಮಾಚಾರದ ಪ್ರಯತ್ನ ನಡೆದಿತ್ತು ಎಂದು  ಹನುಮಾ ನಾಯಕ ಕುಟುಂಬಸ್ಥರು ತಿಳಿಸಿದ್ದಾರೆ. 

ವಾಮಾಚಾರದ ಹಿನ್ನೆಲೆಯಲ್ಲಿ ನಮ್ಮ ಮನೆಯ ಕೆಲಸಕ್ಕೆ ಬರಲು ಜನ ಹಿಂದೆಟು ಹಾಕುತ್ತಿದ್ದಾರೆ ಎಂದು ಕುಟುಂಬ ಅವಲತ್ತುಕೊಂಡಿದೆ. 16 ಎಕರೆ ಅಡಿಕೆ ತೋಟ ಇದಾಗಿದ್ದು ಹನುಮ ನಾಯ್ಕ, ರೇವಣಿ ನಾಯ್ಕ, ಶೇಖರ ನಾಯ್ಕ ಕೃಷ್ಣ ನಾಯಕರ ತೋಟದಲ್ಲಿ ಕೆಲಸ ಮಾಡುವಾಗ ಈ ದುಷ್ಯಾಂತ ಕಂಡು ಬಂದಿದೆ. 

ನಮ್ಮ ಕೂಡು ಕುಟುಂಬವನ್ನು ಒಡೆಯಲು ಈ ಪ್ರಯತ್ನ ನಡೆದಿದೆ ಎಂದು  ಕುಟುಂಬಸ್ಥರು ಆರೋಪಿಸಿದ್ದಾರೆ. ಎರಡು ಗೊಂಬಗಳಿಗೆ ತಗಡಿನ ಶೀಟಿನ ಮೇಲೆ ರಾನಚಂದ್ರ, ಆಶಾ, ರೇವಣ್ಣ, ರಾಮಚಂದ್ರ ಭೂಮಿ ನಾಶ, ವಂಶ ನಾಶ ಎಂದು ಬರೆಯಲಾಗಿದೆ ಎಂದು ದೂರಿನಲ್ಲಿ ನಾಗರಾಜ್ ಎಂಬುವರು ದೂರು ನೀಡಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close