ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ್ದ ಇಲ್ಲು ಗ್ಯಾಂಗ್ ಅಂದರ್


While having dinner with a girl I know at the hotel, a group of boys sitting at the next table did the dadagiri. Tunga Nagar police have arrested three people after investigating the case of kidnapping and demanding money by making a video.

ಸುದ್ದಿಲೈವ್/ಶಿವಮೊಗ್ಗ

ಹೋಟೆಲ್ ನಲ್ಲಿ ಪರಿಚಯಸ್ಥ ಹುಡುಗಿಯೊಂದಿಗೆ ಊಟ ಮಾಡುವ ವೇಳೆ ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಪಡ್ಡೆಹುಡುಗರ ಪಟಾಲಂವೊಂದು ದಾದಾಗಿರಿ ಮಾಡಿದೆ. ವಿಡಿಯೋ ಮಾಡಿ  ಕಿಡ್ನ್ಯಾಪ್, ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣವನ್ನ ತುಂಗ ನಗರ ಪೊಲೀಸರು ಬೇಧಿಸಿ ಮೂವರನ್ನ ಅರೆಸ್ಟ್ ಮಾಡಿದ್ದಾರೆ. 

ಭದ್ರಾವತಿಯ ದೊಡಂಗಟ್ಟದ ಯುವಕ ಶಹಿದ್ ಫಜಲ್ ಎಂಬಾತ ಶಿವಮೊಗ್ಗದ ಗಾಜನೂರಿಗೆ ಪರಿಚಯಸ್ಥ ಯುವತಿಯೊಂದಿಗೆ ಅಮ್ಮ ಹೋಟೆಲ್ ಗೆ ಬಂದಿದ್ದಾನೆ. ಈ ಯುವಕ ಬಿಯರ್ ಬಾಟೆಲ್ ನ್ನ ತೆಗೆದುಕೊಂಡು ಊಟಕ್ಕೆ ಮುಂದಾಗಿದ್ದಾನೆ. ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಪುಂಡ ಪೋಕರಿ ಇಲಿಯಾಜ್ ನ ಗ್ಯಾಂಗ್ ವಿಡಿಯೋ ಮಾಡಿಕೊಡಿದೆ. 

ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ ಇಲಿಯಾಜ್ ನ ಗ್ಯಾಂಗ್ ಯುವಕ ಯುವತಿಯನ್ನ  ಅಟೋವೊಂದರಲ್ಲಿ ಹತ್ತಿಸಿಕೊಂಡು ತೀರ್ಥಹಳ್ಳಿ ರಸ್ತೆಯಲ್ಲೇ ಸಾಗಿ ಬಂದು ಬೈಪಾಸ್ ಬಳಿ ಒಳಗೆ ಕರೆದುಕೊಂಡು ಹೋಗಿದ್ದಾರೆ.  1.5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಯುವತಿಯ ಪರ್ಸ್ ನ್ನ ಕಿತ್ತುಕೊಂಡು 24,500 ರೂ.ಗಳನ್ನ ಎತ್ತಿದ್ದಾನೆ. 

ನಂತರ ಶಹಿದ್ ಫಜಲ್ ಎಂಬುವನಿಂದ 1500 ರೂ. ಹಣ ಕಿತ್ತುಕೊಂಡು ಇಬ್ಬರ ಮೊಬೈಲ್ ನಂಬರ್ ಪಡೆದಿದ್ದಾರೆ. ನಂತರ ಫಜಲ್ ಗೆ ಕರೆ ಮಾಡಿದ ಇಲಿಯಾಜ್ 1.5 ಲಕ್ಷ ಹಣ ತರಲಿಲ್ಲ ಎಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಕಷ್ಟಪಟ್ಟು ಸಾಲ ಮಾಡಿ, 6 ಸಾವಿರ ರೂ. ಹಣ ಪಡೆದು ಶಿವಮೊಗ್ಗದಲ್ಲಿ ಪರಿಚಯಸ್ಥನಿದ್ದ ಜಾಫರ್ ನೊಂದಿಗೆ ಶಿವಮೊಗ್ಗದ ಬಸ್ ನಿಲ್ದಾಣದ ಬಳಿ ಇಲಿಯಾಜ್ ನನ್ನ ಹುಡುಕಿ ಕೊಂಡು ಬಂದಿದ್ದಾನೆ. 

ತನ್ನನ್ನ ಕಿಡ್ನ್ಯಾಪ್ ಮಾಡಿದ್ದ ಆಟೋದಲ್ಲಿ ಕುಳಿತಿದ್ದ ಇಲಿಯಾಜ್ ಗೆ ನನ್ನ ಬಳಿ 6 ಸಾವಿರ ರೂ. ಹಣ ಬಿಟ್ಟರೆ ಬೇರೆ ಏನೂ ಇಲ್ಲ. ತೆಗೆದುಕೊಂಡು ಬಿಟ್ಟುಬಿಡಿ ಎಂದಿದ್ದಾನೆ. ಇಷ್ಟಕ್ಕೆ ಕೆಂಡಮಂಡಲನಾದ ಇಲಿಯಜ್ ಯುವಕನನ್ನ ಎಳೆದಾಡಿದ್ದಾನೆ. 1.5 ಲಕ್ಷ ರೂ. ನೀಡದಿದ್ದರೆ ಜೀವ ಸಹಿತ ಬಿಡಲ್ಲ ಎಂದು 6 ಸಾವಿರ ರೂ.ವನ್ನ ಕಿತ್ತುಕೊಂಡು ಕಳುಹಿಸಿದ್ದಾನೆ. ಎಳೆದಾಟದಲ್ಲಿ ಫಜಲ್ ಕಣ್ಣಿಗೆ ಗಾಯವಾಗಿದೆ. 

ಈ ಪ್ರಕರಣವನ್ನ ಬೇಧಿಸಿದ ತುಂಗ ನಗರ ಪೊಲೀಸದ ಠಾಣೆಯ ಪೊಲೀಸರು ಕ್ಲಾರ್ಕ್ ಪೇಟೆಯ  ಇಲಿಯಾಜ್ ಯಾನೆ ಇಲ್ಲು, ಚೀಲೂರಿನ ಮೊಹಮದ್ ವಾಸಿಮ್, ಅಣ್ಣನಗರದ ಚಂದ್ರಶೇಖರ್ ನನ್ನ ಒದ್ದು ಒಳಗೆ ಹಾಕಿದ್ದಾರೆ. 

ಪ್ರಕರಣದಲ್ಲಿ ತುಂಗನಗರ ಪಿಐ ಗುರುರಾಜ್ ಮತ್ತು ಸಿಬ್ಬಂದಿಗಳ ಖಡಕ್ ಕಾರ್ಯಾಚರಣೆಯಿಂದ ಇಲ್ಲು ಗ್ಯಾಂಗ್ ನನ್ನ ಬಂಧಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close