ಮಹಿಳಾ ಅಧಿಕಾರಿಗೆ ನಿಂದನೆ ಪದ, ಈಡಿಗ ಸಮಾಜದ ಖಡಕ್ ಎಚ್ಚರಿಕೆ



ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಜಿಲ್ಲಾಧಿಕಾರಿಯಾದ ಜ್ಯೋತಿ ಅವರೊಂದಿಗೆ ದೂರವಾಣಿಯಲ್ಲಿ(telephone) ಅಸಹ್ಯ ಅಸಂವಿಧಾನಿಕವಾಗಿ,  ಸ್ತ್ರೀ(ladies) ಸಮಾಜ ತಲೆ ತಗ್ಗಿಸುವಂತ ಪದ ಬಳಸಿದ ಭದ್ರಾವತಿ ಶಾಸಕ ಸಂಗಮೇಶ್ ಪುತ್ರನನ್ನು ಪೋಲಿಸರು ಈ ಕೂಡಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಮತ್ತು ಹಿಂದುಳಿದ ವರ್ಗದ ಮಹಿಳ ಅಧಿಕಾರಿಗಳ ವಿರುದ್ಧ ಅಸಭ್ಯ ವರ್ತಿಸುವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾರಾಯಣಗುರು ಯುವ ವೇದಿಕೆಯ ಸಂಚಾಲಕ ನಗರದ ನಿತಿನ್ ಆಗ್ರಹಿಸಿದ್ದಾರೆ. 

ಹಾಗೂ ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಅಧಿಕಾರಿಗಳೊಂದಿಗೆ ನಿರಂತರವಾಗಿ ಅಗೌರವದಿಂದ, ತೀರ ಅಸಹ್ಯವಾಗಿ ನಡೆದುಕೊಳ್ಳುತ್ತಿರುವ ಆಡಳಿತರೂಡ ಕಾಂಗ್ರೇಸ್ ಪಕ್ಷದ ಕೆಲ ಮುಖಂಡರ ಇಂತಹ ಅಸಹ್ಯ ನಡವಳಿಕೆಯನ್ನು ಈಡಿಗ ಸಮಾಜ ಖಂಡಿಸುತ್ತದೆ. ಈ ರೀತಿಯ ನಡವಳಿಕೆಗಳು ಮುಂದಿನ ದಿನದಲ್ಲಿ ಮುಂದುವರೆದರೆ ಜಿಲ್ಲೆಯಾದ್ಯಂತ ಪ್ರತಿಭಟನೆಯನ್ನು ಈಡಿಗ ಸಮಾಜ ಕೈಗೊಳ್ಳುತ್ತದೆ ಎನ್ನುವ ಎಚ್ಚರಿಕೆಯನ್ನು ಕಾಂಗ್ರೇಸ್ ಪಕ್ಷಕ್ಕೆ ಹಾಗೂ ಭದ್ರಾವತಿ ಶಾಸಕ ಸಂಗಮೇಶ್ ಪುತ್ರನಿಗೆ ಸಮಾಜದ ಪರವಾಗಿ ನೀಡುತಿದ್ದೇವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close