ಸುದ್ದಿಲೈವ್/ಭದ್ರಾವತಿ
ಭದ್ರಾವತಿಯ ಹೊಸಮನೆ ಸಬ್ ಇನ್ ಸ್ಪೆಕ್ಟರ್ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಭದ್ರಾವತಿಯ ಕೂಲಿ ಕಾರ್ಮಿಕನೋರ್ವ , ಸರ್ಕಾರಕ್ಕೆ, ರಾಜ್ಯ ಪಾಲರಿಗೆ, ಗೃಹಸಚಿವರಿಗೆ, ರಾಜ್ಯ ಮಹಾನಿರ್ದೇಶಕರಿಗೆ, ರಾಜ್ಯ ಮಾನವ ಹಕ್ಕುಗಳಿಗೆ ಹಾಗೂ ಎಸ್ಪಿ ಮಿಥುನ್ ಕುಮಾರ್ ಅವರಿಗೆ ಇಂದು ಪತ್ರಬರೆದಿದ್ದಾರೆ.
ಜೊತೆಗೆ ಠಾಣೆಯಲ್ಲಿ ಅಮಾಯಕರ ಮೇಲೆ ಪೊಲೀಸರ ದರ್ಪ ಮತ್ತು ದೌರ್ಜನ್ಯ ಮೆರೆದಿರುವ ಆರೋಪವನ್ನೂ ಮಾಡಿದ್ದಾರೆ. ನನ್ನನ್ನು ಮತ್ತು ನಮ್ಮ ಅಣ್ಣನನ್ನು ಹೊಸ ಮನೆ ಪೊಲೀಸ್ ಠಾಣೆಯಲ್ಲಿ ಹೊಡೆದು ಚಿತ್ರಹಿಂಸೆ ನೀಡಿದ ಮತ್ತು ಮಾನಸಿಕ ತೊಂದರೆ ನೀಡಲಾಗಿದೆ ಎಂದು ಸಹೋದರರಾದ ಅನಿಲ್ ಮತ್ತು ದೀಪಕ್ ಮನವಿಯಲ್ಲಿ ಆರೋಪಿಸಿದ್ದಾರೆ.
ಹೊಸಮನೆ ನಿವಾಸಿಯಾಗಿರುವ ನಾನು ಮತ್ತು ನನ್ನ ಹೆಂಡತಿ ಮಕ್ಕಳು ವಾಸವಾಗಿದ್ದು. ನನ್ನ ಅಣ್ಣ ದೀಪಕ್ ಬೆಂಗಳೂರಿನಲ್ಲಿ ವೆಂಡರ್ ಕೆಲಸ ಮಾಡುತ್ತಿದ್ದಾನೆ. ತಿಂಗಳಿಗೆ ಒಂದು ಬಾರಿ ಅಥವಾ ಎರಡು ಬಾರಿ ಬಂದು ಹೋಗುತ್ತಾನೆ. ನಮ್ಮ ಅಣ್ಣನ ಮೇಲೆ ಒಂದು ಪ್ರಕರಣ ಹೊಸ ಮನೆ ಠಾಣೆಯಲ್ಲಿದ್ದು ಕೋರ್ಟ್ ನಲ್ಲಿ ನಡೆಯುತ್ತಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ದಿನಾಂಕ 22/08/2024 ರಂದು ನಾನು ಮತ್ತು ನನ್ನ ಅಣ್ಣ ಮನೆಯ ವಿಚಾರದಲ್ಲಿ ಬಾರ್ ಬಳಿ ಜಗಳ ಮಾಡಿಕೊಂಡಿದ್ದೆವು. ಈ ಬಗ್ಗೆ ನಾನಾಗಲಿ ನನ್ನ ಸಹೋದರನಾಗಲಿ ಯಾವುದೇ ದೂರನ್ನು ಪೊಲೀಸರಿಗೆ ನೀಡಿಲ್ಲ. ಈ ಸಂದರ್ಭದಲ್ಲಿ ರಸ್ತೆ ಬಳಿಯಲ್ಲಿ ನಿಂತಿದ್ದ ನಮ್ಮಿಬ್ಬರನ್ನು ಪೊಲೀಸರು ಕರೆದು ಹಣ ಕೇಳಿದರು ನಾವೇಕೆ ಹಣ ಕೊಡಬೇಕು ಎಂದು ಪ್ರಶ್ನಿಸಿದಾಗ ಹೌದಾ ಹಾಗಾದರೆ ಯಾಕೆ ಅಂತ ಹೇಳುತ್ತೇವೆ ಬನ್ನಿ ಠಾಣೆಗೆ ಎಂದು ಕರೆದೊಯ್ದಿರುವುದಾಗಿ ಆರೋಪ ಕೇಳಿ ಬಂದಿದೆ.
ಈ ನನ್ನನ್ನು ಮತ್ತು ನಮ್ಮ ಅಣ್ಣನನ್ನು ಪೊಲೀಸ್ ಠಾಣೆಯಲ್ಲಿ ಕರೆದುಕೊಂಡು ಹೋಗಿ ಸುಮಾರು ಮಧ್ಯಾಹ್ನ 1 ಗಂಟೆ ನಂತರ ಹೊಸಮನೆ ಪೊಲೀಸ್ ಸಬ್ ಇನ್ನೆಕ್ಟರ್ ಕೃಷ್ಣಕುಮಾರ್ ಮಾನೆ ರವರು ಹೊಸಮನೆ ಠಾಣೆಯ ಒಳಗೆ ಲಾಕಪ್ ಮುಂದೆ ನನ್ನನ್ನು ನಮ್ಮ ಅಣ್ಣನನ್ನು ಬೂಟಿನಿಂದ ಒದ್ದು ಅವ್ಯಚ್ಯ ಶಬ್ದಗಳಿಂದ ಬೈದಿದ್ದಾರೆ.
ರಬ್ಬರ್ ಬೆಲ್ಲಿನಿಂದ ಹೊಡೆದಿದ್ದಾರೆ ಮತ್ತು ಮೊಬೈಲನ್ನು ಹೊಸ ಮನೆ ಪೊಲೀಸ್ ಠಾಣೆಯ ಪಿಸಿ ತೇಜು ಮತ್ತು ಪಿ ಸಿ ಹನುಮಂತ ಅಮಾತಿ ಕಸಿದುಕೊಂಡು 2000 ರೂ. ಹಣಕೊಟ್ಟು ತೆಗೆದುಕೊಂಡು ಹೋಗುವಂತೆ ತಿಳಿಸಿ ಹಣ ಪಡೆದು ವಾಪಸ್ ನೀಡಿದ್ದಾರೆ. ಇದಾದ ನಂತರ ಪೊಲೀಸರಿಗೆ ಭಯ ಬಿದ್ದು ನಾವು ಹೆದರಿ ಯಾವುದೇ ದೂರನು ನೀಡಲಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದರೆ ಈ ಘಟನೆ ನಡೆದ ಬಳಿಕ ದೀಪಕ್ ಭದ್ರಾವತಿಗೆ ಬಂದಾಗಲೆಲ್ಲ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಹೊಡೆಯುವುದು ಹಣ ಕೇಳುವುದು ನಿನ್ನ ಮೇಲೆ ಇನ್ನು ಎರಡು ಕೇಸ್ ಹಾಕಿ ಜೈಲಿಗೆ ಕಳಿಸುತ್ತೇನೆ ಎಂದು ಎದುರಿಸುವುದು ಮಾಡುತ್ತಿರುತ್ತಾರೆ ಇವರು ಕರೆದುಕೊಂಡು ಹೋಗಿ ಪದೇಪದೇ ಹೊಡೆದ ಕಾರಣ ನಮ್ಮ ಅಣ್ಣನಿಗೆ ಎದೆ ನೋವು ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ನಮಗಾದ ಸಂಕಷ್ಟ ದೂರ ಮಾಡಿಕೊಳ್ಳಲೆಂದು ಈ ದೂರನ್ನು ತಮಗೆ ನೀಡುತ್ತಿದ್ದೇವೆ. ದಲಿತ ಜನಾಂಗಕ್ಕೆ ಸೇರಿದ ನಮ್ಮಿಬ್ಬರಿಗೆ ಅಪ್ಪ ಅಮ್ಮ ಯಾರು ಇಲ್ಲ. ಹಿಂದು ಮುಂದು ಯಾರು ಇಲ್ಲ ಎಂಬ ಕಾರಣಕ್ಕಾಗಿ ಹವ್ಯಾಚವಾಗಿ ಮನಬಂದಂತೆ ನಿಂದಿಸುತ್ತಾರೆ. ದೈಹಿಕವಾಗಿ ಹಲ್ಲೆ ನಡೆಸುತ್ತಾರೆ ಕೇಸು ಹಾಕುವ ಬೆದರಿಕೆ ಹಾಕಲಾಗುತ್ತಿದೆ. ಆದ್ದರಿಂದ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯ ಪೊಲೀಸರಾದ ತೇಜು ಮತ್ತು ಹನುಮಂತ ಅಮಾತಿ ಹಾಗೂ ಸಬ್ ಇನ್ಸೆಕ್ಟರ್ ಆದ ಕೃಷ್ಣಕುಮಾರ್ ಮಾನೆ ನೀಡುತ್ತಿರುವ ಕಿರುಕುಳದಿಂದ ತಪ್ಪಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗಿ ನೊಂದ ಕಾರ್ಮಿಕ ಮನವಿ ಪತ್ರದಲ್ಲಿ ತಿಳಿಸಿದ್ದಾನೆ. ಈ ಕುರಿತು ಠಾಣೆಯಲ್ಲಿ ಪೊಲೀಸರು ಹೊಡೆದಿರುವ ಫೊಟೊ ಸಹ ಸುದ್ದಿಲೈವ್ ಗೆ ಲಭ್ಯವಾಗಿದೆ.