ಉರುಸ್ ಮುಬಾರಕ್ ಫ್ಲೆಕ್ಸ್ ನಲ್ಲಿ ರಾರಾಜಿಸಿದ ರೌಡಿಶೀಟರ್ ಗಳ ಫೋಟೋಗಳು

Hindu organizations have come under fire for the photos of rowdy sheeters being displayed on the flexes wishing for Urus in Shiralakoppa.

ಸುದ್ದಿಲೈವ್/ಶಿರಾಳಕೊಪ್ಪ

ಶಿರಾಳಕೊಪ್ಪದಲ್ಲಿ ನಡೆಯುವ ಉರುಸ್ ಗೆ ಶುಭಕೋರುವ ಫ್ಲೆಕ್ಸ್ ಗಳಲ್ಲಿ  ರೌಡಿಶೀಟರ್ ಗಳ ಫೋಟೊ ರಾರಾಜಿಸುತ್ತಿರುವುದಕ್ಕೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿವೆ. 

ಇಂದಿನಿಂದ ಉರುಸ್ ಆರಂಭವಾಗಿದ್ದು,  ಉರುಸ್ ಮುಬಾರಕ್ ಎಂಬ ಫ್ಲೆಕ್ಸ್ ನಲ್ಲಿ ಶಿವಮೊಗ್ಗದ ಗ್ಯಾಂಗ್ ವಾರ್  ನಲ್ಲಿ ಮರ್ಡರ್ ಆದ ಯಾಸಿನ್ ಖುರೇಷಿ, ಸಾಗರದ ಅಲಿ, ಶಾಹೀದ್ ಅವರ ಫೊಟೋಗಳು ಶಿರಾಳಕೊಪ್ಪದಲ್ಲಿ ರಾರಾಜಿಸುತ್ತಿವೆ. ಇಂತಹ ರೌಡಿ ಶೀಟರ್ ಗಳು ನಮಗೆ ಆದರ್ಶವಾಗಲ್ಲ ಎಂಬುದು ಹಿಂದೂ ಸಂಘಟನೆಯ ಆರೋಪವಾಗಿದೆ. 

ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ,  ಸಂತ ಶಿಶುನಾಳ ಶರೀಫ್,  ಗಡಿನಾಡ ಗಾಂಧಿಯಂತಹ ಆದರ್ಶ ಪುರುಷರ ಮಹಾನ್ ವ್ಯಕ್ತಿಗಳ ಪೋಸ್ಟರ್ಗಳನ್ನು ಫ್ಲೆಕ್ಸ್ ಗಳನ್ನು ಹಾಕಿ ಯುವಕರಿಗೆ ಸ್ಪೂರ್ತಿಯಾಗಬೇಕೆ ಹೊರತು ಕೊಲೆ ಆರೋಪಿಗಳು ರೌಡಿಶೀಟರ್ ಗಳ ಫೋಟೋವನ್ನು ಹಾಕಿ ಇವತ್ತಿನ ಯುವ ಪೀಳಿಗೆಗೆ ಯಾವ ಸಂದೇಶವನ್ನು ನೀಡುತ್ತಿದ್ದಾರೆ ಎಂದು ಹಿಂದೂ ಸಂಘಟನೆಗಳು ಪ್ರಶ್ನಿಸಿದೆ.‌

ಸ್ಥಳೀಯ ಆಡಳಿತ ಪುರಸಭೆಗೂ  ಮಾಹಿತಿ ನೀಡಿದರೂ  ಸಹ ರಸ್ತೆಯ ಮಧ್ಯದಲ್ಲಿ ಹಾಕಿರುವ ಕಟೌಟ್ಗಳನ್ನು ತೆರುಗೊಳಿಸಲಾಗಿಲ್ಲ. ಎಂದು ಸಂಘಟನೆ ದೂರಿವೆ. 

 ಕಳೆದ ಸ್ವತಂತ್ರ ದಿನಾಚರಣೆಯ ಅಂಗವಾಗಿ ಶಿರಾಳಕೊಪ್ಪದಲ್ಲಿ ದೇಶಭಕ್ತರ ಹೆಸರಿನ ಮೇಲೆ ಜನಜಾಗೃತಿಗಾಗಿ ಪಂಜಿನ ಮೆರವಣಿಗೆ ಹಮ್ಮಿಕೊಂಡಿದ್ದ ಹಿಂದೂ ಜಾಗರಣ ವೇದಿಕೆಯ ಮೆರವಣಿಗೆ  ಅಡ್ಡಿ ಮಾಡಿದ ಪೊಲೀಸರು ಈಗ ಈ ರೀತಿಯ ಪೋಸ್ಟಲ್ ಗಳನ್ನು ನೋಡಿ ಏಕೆ ಸುಮ್ಮನೆ ಕುಳಿತಿದ್ದಾರೆ.

ಯಾಸಿನ್ ಖುರೇಶಿ ಅವರ ಫೊಟೊವನ್ನ ತೆರವುಗೊಳಿಸಲಾಗಿದೆ ಎಂದು ಪಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close