ಸುದ್ದಿಲೈವ್/ಶಿವಮೊಗ್ಗ
ಕೃಷಿ ಮಾರಾಟ ಇಲಾಖೆ, ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವರ್ತಕರುಗಳಿಗೆ ಉಪ /ಸಹಾಯಕ ನಿರ್ದೇಶಕರ ಕಛೇರಿಗೆ ವರ್ತಕರ ಲೈಸೆನ್ಸ್ ಮಂಜೂರಾತಿ ಮತ್ತು ನವೀಕರಣದ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ.ಈ ನಿಯಮಾನುಸಾರ ಏಕೀಕೃತ ಲೈಸೆನ್ಸ್ ಪ್ರಮಾಣ ಪತ್ರಗಳನ್ನು ಈಗಾಗಲೇ ಉಪ ನಿರ್ದೇಶಕರ ಕಛೇರಿಯಿಂದ ವರ್ತಕರ ಲೈಸೆನ್ಸ್ಗಳನ್ನು ಹಾಗೂ ಹೊಸ ವರ್ತಕರ ಲೈಸೆನ್ಸ್ಗಳನ್ನು ಮಂಜೂರು/ನವೀಕರಿಸಲಾಗುತ್ತಿದೆ. ವರ್ತಕರ ಪರವಾನಗಿ ಅವಧಿಯು 2025 ರ ಮಾರ್ಚ್ 31 ರಂದು ಮುಕ್ತಾಯಗೊಳ್ಳುವ ವರ್ತಕರು ಲೈಸೆನ್ಸ್ನ್ನು ನವೀಕರಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ.
ಲೈಸೆನ್ಸ್ ನವೀಕರಿಸಲು ಇಚ್ಚಿಸುವ ಪೇಟೆ ಕಾರ್ಯಕರ್ತರು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ದಿ) ಅಧಿನಿಯಮ 1966 ರ ಕಲಂ 72 ಮತ್ತು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ದಿ) ನಿಯಮಾವಳಿ 1968 ರ ನಿಯಮ 76(ಎ)ರನ್ವಯ ಲೈಸೆನ್ಸ್ ನವೀಕರಿಸಲು ನಿಗದಿತ ಲೈಸೆನ್ಸ್ ಫಾರಂನ್ನು ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಿ, ಅವಶ್ಯಕ ದಾಖಲೆಗಳೊಂದಿಗೆ ದಿ: 28-02-2025 ರ ಒಳಗಾಗಿ ಕಾರ್ಯದರ್ಶಿ, ಎಪಿಎಂಸಿ, ಭದ್ರಾವತಿ ಇವರ ಕಚೇರಿಗೆ ಸಲ್ಲಿಸುವುದು.
2025 ನೇ ಸಾಲಿಗೆ ಲೈಸೆನ್ಸ್ನ್ನು ನವೀಕರಿಸಲು ಬರುವ ವರ್ತಕರು ಸಮಿತಿಗೆ ಯಾವುದೇ ರೀತಿಯ ಬಾಕಿ ಉಳಿಸಿಕೊಂಡಿರಬಾರದು. ಸಮಿತಿಗೆ ಪಾವತಿಸಬೇಕಾದ ಮಾರುಕಟ್ಟೆ ಶುಲ್ಕ, ದಂಡ, ಲೀವ್ ಆಂಡ್ ಲೈಸೆನ್ಸ್ ಶುಲ್ಕ, ರೈತರಿಗೆ ಪಾವತಿಸಬೇಕಾದ ಕೃಷಿ ಹುಟ್ಟುವಳಿಯ ಮೊತ್ತ, ವಿದ್ಯುತ್ ಶುಲ್ಕದ ಪಾವತಿ ಮುಂತಾದ ಯಾವುದೇ ಬಾಕಿ ಇಲ್ಲವೆಂಬುದನ್ನು ದೃಢಪಡಿಸಿಕೊಂಡು ಅನಂತರವೇ ನಿಗದಿತ ಲೈಸೆನ್ಸ್ ಫಾರಂನ್ನು ಭರ್ತಿ ಮಾಡಿಕೊಂಡು ಅವಶ್ಯಕ ದಾಖಲಾತಿಗಳೊಂದಿಗೆ ದಿನಾಂಕ : 28/02/2025 ರ ಒಳಗಾಗಿ ಈ ಕಛೇರಿಗೆ ಸಲ್ಲಿಸತಕ್ಕದ್ದು. ಈ ಬಗ್ಗೆ ಕ್ರಮ ವಹಿಸಲು ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು.
ನಿಗದಿತ ಅವಧಿಯೊಳಗೆ ಲೈಸೆನ್ಸ್ಗಳನ್ನು ನವೀಕರಿಸದಿದ್ದಲ್ಲಿ ಮುಂದಿನ ಕಾನೂನಾತ್ಮಕ ಪರಿಣಾಮಗಳಿಗೆ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಭದ್ರಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tags:
Traders