ಒಂದು ಪ್ರಕರಣ ಬೆನ್ನುಹತ್ತಿದ ಪೊಲೀಸರಿಗೆ ಪತ್ತೆಯಾಗಿದ್ದು 4 ಪ್ರಕರಣ

On date: 26-01-2025, the Holehonnur police have opened the bag of nuts kept in front of Bhadravati Arahatholalu village Vasi Harsha in connection with the case of theft.

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ಅರಹತೊಳಲು ಗ್ರಾಮ ವಾಸಿ ಹರ್ಷ ರವರು  ತಮ್ಮ ಮನೆಯ ಮುಂದೆ ಇಟ್ಟಿದ್ದ ಅಡಿಕೆ ಚೀಲಗಳನ್ನು ದಿನಾಂಕ : 26-01-2025 ರಂದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆಹೊನ್ನೂರು ಪೊಲೀಸರು ಭೇಧಿಸಿದ್ದಾರೆ. 

ಪ್ರಕರಣದ ಆರೋಪಿತರು ಹಾಗೂ ಕಳುವಾದ ಮಾಲಿನ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್. ಎಸ್. ಭೂಮರಡ್ಡಿ  ಎ. ಜಿ ಕಾರಿಯಪ್ಪ ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ನಾಗರಾಜ್ ಕೆ. ಆರ್. ಮೇಲ್ವಿಚಾರಣೆಯಲ್ಲಿ ಪಿಐ ಲಕ್ಷ್ಮೀಪತಿ ಆರ್.ಎಲ್ ರವರ ನೇತೃತ್ವದ ಪಿಎಸ್ಐ ರವರುಗಳಾದ ರಮೇಶ, ಮಂಜುನಾಥ ಎಸ್ ಕುರಿ, ಕೃಷ್ಣನಾಯ್ಕ ಹಾಗೂ ಸಿಬ್ಬಂದಿಗಳಾದ ಸಿ.ಹೆಚ್.ಸಿ ಅಣ್ಣಪ್ಪ, ಪ್ರಕಾಶ ನಾಯ್ಕ ಪ್ರಸನ್ನ, ಸವಿತ ಮತ್ತು ಸಿ.ಪಿ.ಸಿ ವಿಶ್ವನಾಥ ರವರುಗಳನ್ನು ಒಳಗೊಂಡ  ತನಿಖಾ ತಂಡವನ್ನು ರಚಿಸಲಾಗಿತ್ತು. 

ತನಿಖಾ ತಂಡವು  ಜ.6 ರಂದು ಆಯನೂರಿನ ಕೋಹಳ್ಳಿ ನಿವಾಸಿ ಸೈಯದ್ ನವೀದ್(29) ನನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು, ಫೆ.10 ರಂದು ಪುನಾಃ ಪೊಲೀಸ್ ವಶಕ್ಕೆ ಪಡೆದು, ಆರೋಪಿತನಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವರದಿಯಾದ 2025ನೇ ಸಾಲಿನ ಎರಡು ಮತ್ತು 2024ನೇ ಸಾಲಿನ ಎರಡು ಪ್ರಕರಣ ಸೇರಿ ಒಟ್ಟು ನಾಲ್ಕು ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 5,00,000/- ರೂಗಳ 10 ಕ್ವಿಂಟಾಲ್ ಒಣ ಅಡಿಕೆ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 4,00,000/- ರೂಗಳ ಅಮೇಜ್ ಹೋಂಡಾ ಕಾರ್ ಸೇರಿ ರೂ 9,00,000/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಾಗಿದೆ.

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close