![]() |
Among the six Naxals who surrendered before Chief Minister Siddaramaiah recently, Mundagaru Lata and Vanajakshi were captured by the Tirthahalli police with difficulty. |
ಸುದ್ದಿಲೈವ್/ತೀರ್ಥಹಳ್ಳಿ
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶರಣಾಗಿದ್ದ ಆರು ನಕ್ಸಲರಲ್ಲಿ ಮುಂಡಗಾರು ಲತಾ ಮತ್ತು ವನಜಾಕ್ಷಿ ಅವರನ್ನು ತೀರ್ಥಹಳ್ಳಿ ಪೊಲೀಸರು ಕಷ್ಟಡಿಗೆ ಪಡೆದಿದ್ದಾರೆ.
ಇಬ್ಬರನ್ನು ತೀರ್ಥಹಳ್ಳಿಯ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಂಡಗಾರು ಲತಾ ಮತ್ತು ವನಜಾಕ್ಷಿ ವಿರುದ್ಧ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣ, ಹೊಸನಗರ ಠಾಣೆ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು. ಈ ಕಾರಣದಿಂದ ತೀರ್ಥಹಳ್ಳಿ ಕೋರ್ಟ್ ಗೆ ಇಂದು ಹಾಜರುಪಡಿಸಲಾಗಿತ್ತು.
ಹಿರಿಯ ವ್ಯವಹಾರಿಕ ನ್ಯಾಯಾಧೀಶರಾದ ಗೀತಾಮಣಿಯವರು ವಿಚಾರಣೆ ನಡೆಸಿ ಇಬ್ಬರನ್ನು ಮೂರು ದಿನಗಳ ಕಾಲ ಪೊಲೀಸ್ ಕಷ್ಟಡಿಗೆ ನೀಡಿ ಪೊಲೀಸರಿಗೆ ಸಹಕರಿಸುವಂತೆ ಆದೇಶ ನೀಡಿದ್ದಾರೆ.