ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆ ಎಂದು ಕೆಆರ್ ಎಸ್ ಪಕ್ಷದ ರವಿಕೃಷ್ಣಾರೆಡ್ಡಿ ಫೇಸ್ ಬುಕ್ ನಲ್ಲಿ ಪೋಸ್ಟ್-ಕ್ರಮ ಆಗುತ್ತಾ ಆರೋಪಿಗಳಿಗೆ?



A female officer who was performing her duty was verbally abused and threatened by the MLA's son!? Ravi Krishnareddy of KRS Party has shared a video on Facebook under the title.

ಸುದ್ದಿಲೈವ್/ಭದ್ರಾವತಿ

ತನ್ನ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಹಿಳಾ ಅಧಿಕಾರಿಗೆ ಶಾಸಕನ ಮಗನಿಂದ ಅವಾಚ್ಯ ಬೈಗುಳ ಮತ್ತು ಬೆದರಿಕೆ!? ಎಂಬ ಶೀರ್ಷಿಕೆ ಅಡಿಯಲ್ಲಿ ಕೆಆರ್ ಎಸ್ ಪಕ್ಷದ ರವಿ ಕೃಷ್ಣಾರೆಡ್ಡಿ ವಿಡಿಯೋವೊಂದನ್ನ ಫೆಸ್ ಬುಕ್ ನಲ್ಲಿ ಹರಿಬಿಟ್ಟಿದ್ದಾರೆ. ಇದು ಭದ್ರಾವತಿಯ ಸೀಗೆಬಾಗಿಯ ಮರಳ ಕ್ವಾರೆಗೆ ರಾತ್ರೋರಾತ್ರಿ ತೆರಳಿದ ಮಹಿಳಾ ಅಧಿಕಾರಿಗೆ ಅವ್ಯಾಚ್ಯ ಶಬ್ದದಲ್ಲಿ ಬೈದಿರುವುದಾಗಿ ಹೇಳಲಾಗುತ್ತಿದೆ. 

ರವಿಕೃಷ್ಣಾ ರೆಡ್ಡಿ ಅವರ ಪೋಸ್ಟ್ ಹೀಗಿದೆ. ಇದರಲ್ಲಿರುವವರು ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಎಂದು ಹೇಳಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಬಂದ ಅವರಿಗೆ ಫೋನಿನಲ್ಲಿ ಇನ್ನೊಂದು ಕಡೆಯಿಂದ ಬೈದು ಬೆದರಿಕೆ ಹಾಕುತ್ತಿರುವವರು ಜಿಲ್ಲೆಯ ಶಾಸಕರೊಬ್ಬರ ಪುತ್ರ ಎನ್ನಲಾಗುತ್ತಿದೆ. ಆ ಪರಮಕೊಳಕ ಕ್ರಿಮಿನಲ್ ಯಾರೆಂದು ನಿಮಗೆ ಗೊತ್ತೇ?

ಅಂದಹಾಗೆ, ಎಲ್ಲಿಯವರೆಗೆ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ತಮ್ಮ ಕೆಲಸ ಮಾಡುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟ ಮತ್ತು ಕ್ರಿಮಿನಲ್ ರಾಜಕಾರಣಿಗಳು ಅವರಿಗೆ ಬೆಲೆ ಕೊಡುವುದಿಲ್ಲ. ಈ ತರಹದ ಘಟನೆಗಳು ನಡೆಯುತ್ತಿರುತ್ತವೆ. ಒಮ್ಮೆ ಬಹುಸಂಖ್ಯಾತ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದರೆ ಪೋಕರಿಗಳೆಲ್ಲ ತಮ್ಮ ಬಿಲ ಸೇರುತ್ತಾರೆ. ಇಲ್ಲವಾದರೆ ಅಲ್ಲೊಬ್ಬರು ಇಲ್ಲೊಬ್ಬರು ಪ್ರಾಮಾಣಿಕರು ಈ ತರಹ ದಾಳಿಗೆ ಒಳಗಾಗುತ್ತಾರೆ ಮತ್ತು ಮಿಕ್ಕ ಭ್ರಷ್ಟ ಅಧಿಕಾರಿಗಳು ಭ್ರಷ್ಟರ ಮನೆಯ ಕಕ್ಕಸುಗುಂಡಿ ತೊಳೆಯುತ್ತಾರೆ.

ಈ ಕೂಡಲೇ ಸರ್ಕಾರ ಈ ಅಧಿಕಾರಿಗೆ ರಕ್ಷಣೆ ಕೊಡಬೇಕು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಲೇ Suo Moto ಪ್ರಕರಣ ದಾಖಲಿಸಿ ಬೆದರಿಕೆ ಹಾಕಿದ ನೀಚನ ಮೇಲೆ ಕ್ರಮ ಜರುಗಿಸಬೇಕು. ರಾಜ್ಯದಾದ್ಯಂತ ಇರುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು ಈ ಮಹಿಳಾ ಅಧಿಕಾರಿಯ ಬೆಂಬಲಕ್ಕೆ ನಿಲ್ಲಬೇಕು.

ಶಿವಮೊಗ್ಗ ಜಿಲ್ಲೆಯ KRS ಪಕ್ಷದ ಮುಖಂಡರು ಈ ಕೂಡಲೇ ಈ ಅಧಿಕಾರಿಯನ್ನು ಭೇಟಿ ಮಾಡಿ ನೈತಿಕ ಬೆಂಬಲ ನೀಡಬೇಕು ಮತ್ತು ಅವರು ಪೊಲೀಸರಿಗೆ ದೂರು ನೀಡಲು ಒತ್ತಾಯಿಸಬೇಕು ಎಂದು ಈ ಮೂಲಕ ನಾನು ಸೂಚಿಸುತಿದ್ದೇನೆ.- ರವಿ ಕೃಷ್ಣಾರೆಡ್ಡಿ ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಎಂದು ಪೋಸ್ಟ್ ಮಾಡಿದ್ದಾರೆ. ಒಂದು ವೇಳೆ ಇದು ಶಿವಮೊಗ್ಗ ಜಿಲ್ಲೆಯದೇ ಆಗಿದ್ದರೆ ಅಧಿಕಾರಿಗೆ ನೈತಿಕ ಬೆಂಬಲದ ಜೊತೆ ಅವ್ಯಾಚ್ಯ ಶಬ್ದಗಳಿಂದ ಬೈದ ಪರಮ ನೀಚನ ಹೆಡೆ ಮುರಿ ಕಟ್ಟಬೇಕು.

ಆ ತಾಕತ್ತನ್ನ ಅಧಿಕಾರಿ ಎನ್ನುವ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ತೋರಬೇಕು. ಪೊಲೀಸ್ ಇಲಾಖೆ ಶಾಕನ ಪುತ್ರನನ್ನ ಹೆಡೆಮುರಿ ಕಟ್ಟುತ್ತಾರೋ ಅಥವಾ ಇಲ್ಲವೋ ಎಂಬುದನ್ನ ಕಾದು ನೋಡಬೇಕಿದೆ. ಏಕೆಂದರೆ ಭದ್ರಾವತಿ ಎಂದರೆ ಇದು ಮಾಮೂಲಿ ಎಂದು ಕೈತೊಳೆದುಕೊಳ್ಳುವ ಅಧಿಕಾರಿಗಳಿಗೆ ಇದು ಒಂದು ಪಾಠವೂ ಹೌದು!


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close