ಮ್ಯಾಮ್ ಕೋಸ್ ಚುನಾವಣೆ, ನಾಳೆ ಮತದಾನ

Mamcos election will be held tomorrow and director election will be held for the next five years. Voters of Chikkamagaluru as many districts and Shimoga as many districts and Davangere's Nyamati, Channagiri and Honnali taluks will vote tomorrow.


ಸುದ್ದಿಲೈವ್/ಶಿವಮೊಗ್ಗ

ನಾಳೆ ಮ್ಯಾಮ್ ಕೋಸ್ ಚುನಾವಣೆ ನಡೆಯಲಿದ್ದು ಮುಂದಿನ ಐದು ವರ್ಷಕ್ಕೆ ನಿರ್ದೇಶಕರ ಚುನಾವಣೆ ನಡೆಯಲಿದೆ. ಚಿಕ್ಕಮಗಳೂರಿನ ಅಷ್ಟು ಜಿಲ್ಲೆಗಳು ಮತ್ತು ಶಿವಮೊಗ್ಗದ ಅಷ್ಟು ಜಿಲ್ಲಿಗಳು ಮತ್ತು ದಾವಣಗೆರೆಯ ನ್ಯಾಮತಿ, ಚನ್ನಗಿರಿ ಮತ್ತು ಹೊನ್ನಾಳಿ ತಾಲೂಕುಗಳ ಮತದಾರರು ನಾಳೆ ಮತಹಾಕಲಿದ್ದಾರೆ. 

17 ವಿಧಾನ ಸಭಾ ಕ್ಷೇತ್ರಗಳಲ್ಲಿ  ಶಿವಮೊಗ್ಗ ಸೇರಿದಂತೆ 9 ಕೇಂದ್ರಗಳನ್ನ ಆರಂಭಿಸಲಾಗಿದೆ. 93 ಮತಕೇಂದ್ರಗಳನ್ನ ಆರಂಭಿಸಲಾಗಿದೆ. 31 ಸಾವಿರ ಸದಸ್ಯರನ್ನ ಹೊಂದಿರುವ ಈ ಮ್ಯಾಮ್ ಕೋಸ್ ನಲ್ಲಿ 11,511 ಮತಗಳು ಚಲಾವಣೆಯಾಗಲಿದೆ.  ಈಗಾಗಲೇ ನಾಮಪತ್ರಗಳನ್ನ‌ ಸಲ್ಲಿಸಲಾಗಿದ್ದು 39 ಜನ‌ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

ಕಳೆದ 20 ವರ್ಷಗಳಿಂದ ಬಿಜೆಪಿಯ ಬೆಂಬಲಿತ ಸಹಕಾರ ಭಾರತಿ ಮ್ಯಾಮ್ ಕೋಸ್ ನ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿದಿದೆ. ಮತ್ತೊಂದು ಅವಧಿಗೆ ಸಹಕಾರ ಭಾರತಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. ಅದರಂತೆ ಕಾಂಗ್ರೆಸ್ ಬೆಂಬಲಿತ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದ ಅಡಿ 19 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

ನಾಳೆನೇ ಮತದಾನ ನಡೆಯಲಿದ್ದು ನಾಳೆಯೇ ಶಿವಮೊಗ್ಗದಲ್ಲಿ ಮತ ಎಣಿಕೆ ನಡೆಯಲಿದೆ. ಎಪಿಎಂಸಿಯಲ್ಲಿರುವ ಮ್ಯಾಮ್ ಕೋಸ್ ನಲ್ಲಿ ಮತ ಎಣಿಕೆ ನಡೆಯಲಿದೆ. ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ 17 ವಿಧಾನ ಸಭಾ ಕ್ಷೇತ್ರದಲ್ಲಿ 9 ಕೇಂದ್ರಗಳಲ್ಲಿ ನಡೆಯುವ ಮತಪೆಟ್ಟಿಗೆಗಳನ್ನ  ಶಿವಮೊಗ್ಗಕ್ಕೆ ತಂದು ಎಣಿಸಲಾಗುವುದು. 

ಇದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಎರಡೂ ಪಕ್ಷಗಳ ಪ್ರತಿಷ್ಠೆಯ ಚುನಾವಣೆಯಾಗಿದೆ. ಯಾರು ಗೆದ್ದು ಬೀಗುತ್ತಾರೆ ಎಂದು ಕಾದು ನೋಡಬೇಕಿದೆ. 19 ಜನ ನಿರ್ದೇಶಕರನ್ನ ಆಯ್ಕೆ ಮಾಡಬೇಕಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close