ಸುದ್ದಿಲೈವ್/ಶಿವಮೊಗ್ಗ
ಕರ್ನಾಟಕ ರಾಜ್ಯ ರೈತ ಸಂಘವು ಈಸೂರಿನಿಂದ ಅಂಜನಾಪುರ ಕೆಇಬಿ ಗ್ರೀಡ್ ಅವೈಜ್ಞಾನಿಕ ನೀಲನಕ್ಷೆ ವಿದ್ಯುತ್ ಮಾರ್ಗದ ವಿರುದ್ದ ತಾಲೂಕ್ ಕಛೇರಿ ಎದುರು ಪ್ರತಿಭಟನೆ ನಡೆಸಿದೆ. ಈ ವೇಳೆ ಅನ್ಯಾಯದ ವಿರುದ್ಧ ಬೇಸತ್ತ ರೈತ ನೋರ್ವ ವಿಷ ಸೇವಿಸಲು ಮುಂದಾಗಿರುವ ಘಟನೆಯೂ ವರದಿಯಾಗಿದೆ.
ಯಡಿಯೂರಪ್ಪ ಕುಟುಂಬದ ಮೇಲೆ ಶಿಕಾರಿಪುರ ತಾಲೂಕಿನ ಜನರ ಋಣ ತೀರಿಸುವುದು ಬಾಕಿ ಇದೆ. ರೈತರ ರಕ್ಷಣೆಗೆ ರೈತರೇ ಹೋರಾಟ ಮಾಡಬೇಕು ಜನಪ್ರತಿನಿಧಿಗಳಿಗೆ ಯಾವುದೇ ಕರುಣೆ ಇಲ್ಲ. ರೈತರ ಮೇಲೆ ದೌಜ್ಯನ್ಯ ನಡೆಯುತ್ತಲೆ ಇದೆ ಬಿ.ಎಸ್ ಯಡಿಯೂರಪ್ಪನವರು ರೈತರ ಹೆಸರಿನಲ್ಲಿ ಅಧಿಕಾರ ಹಿಡಿದವರು ಅದರೆ ರೈತರ ಮೇಲೆ ಯಾವುದೇ ಕಾಳಜಿ ಇಲ್ಲ. 4 ಕೀಲೋ ಮೀಟರ್ ನಲ್ಲಿ ಮಾಡುವ ಕಾಮಗಾರಿಯನ್ನು 17 ಕೀ.ಮಿ. ಅವೈಜ್ಞಾನಿಕ ಕಾಮಗಾರಿಯನ್ನು ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈಕೂಡಲೇ ಈ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಯಾವುದೇ ಕಾರಣಕ್ಕೂ ಈ ಕಾಮಗಾರಿಯನ್ನು ನಡೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರು ಆಗ್ರಹಿಸಿದರು. ಈ ವೇಳೆ ಮಾತನಾಡಿದ ತೀ.ನಾ.ಶ್ರೀನಿವಾಸ್ ಬಿವೈ ರಾಘವೇಂದ್ರ, ವಿಜಯೇಂದ್ರ ಅವರೆ ಈಸೂರು ವೀರಭದ್ರಸ್ವಾಮಿ ನಿಮ್ಮನ್ನೂ ಸುಮ್ಮನೆ ಬಿಡುವುದಿಲ್ಲ ಅವೈಜ್ಞಾನಿಕ ಕಾಮಗಾರಿಯಲ್ಲಿ ಮಾತು ತಪ್ಪಿದರೆ ಶಿಕ್ಷೆ ಖಂಡಿತಾ ಎಂದು ಆಗ್ರಹಿಸಿದರು.
ಶಿಕಾರಿಪುರ ರೈತರ ಹೋರಾಟ ವಿಷ ಕುಡಿಯುವ ಪರಿಸ್ಥಿತಿ ತಾಲೂಕು ಕಚೇರಿ ಎದರು ಕೆಪಿಸಿಯು ಅವೈಜ್ಞಾನಿಕ ನಕ್ಷೆ ತಯಾರು ಮಾಡಿ ರೈತರಿಗೆ ತೊಂದರೆ ಆಗುತ್ತದೆ ಎಂದು ಆರೋಪಿಸಿ ವಿಷ ಕುಡಿಯಲು ಯತ್ನಿಸಿರುವ ಘಟನೆ ನಡೆದಿದೆ.