ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣವೊಂದು ದಾಖಲಾಗಿದೆ. ಇದರಿಂದ ವರ್ಷದಲ್ಲಿ ಮೂರನೇ ಪ್ರಕರಣ ಇದಾಗಿದೆ. ವಿಷೇಶ ಎಂದರೆ ಇಷ್ಟು ದಿನ ಮಹಿಳೆಯರ ಮಾಂಗನ್ಯ ಸರದ ಕಳ್ಳತನ ನಡೆಯುತ್ತಿತ್ತು. ಈ ಪ್ರಕರಣದಲ್ಲಿ ಪುರುಷರ ಪರ್ಸ್ ನ್ನ ಲಫ್ಟಾಯಿಸಲಾಗಿದೆ.
ಸಹೋದರ ಅತ್ತೆಯ ಮರಣಹೊಂದಿದ ಕಾರಣ ತ್ಯಾವರೆ ಚಟ್ನಹಳ್ಳಿಯ ಹೊನ್ನೂರಪ್ಪ ಎಂಬುವರು ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಂದು ಚಳ್ಳಕೆರೆ ಕ್ಯಾತಗೊಂಡನಹಳ್ಳಿಗೆ ತೆರಳಲು ಫ್ಲಾಟ್ ಫಾರಂ 8 ರಲ್ಲಿ ಕಾಯುತ್ತ ಕುಳಿತಿದ್ದಾಗ ಚಳ್ಳಕೆರೆಗೆ ಹೋಗುವ ಬಸ್ ಬಂದಿದ್ದು, ಬಸ್ ಹತ್ತಲು ತುಂಬ ರಶ್ ಆಗಿತ್ತು.
ರಶ್ ನಲ್ಲೇ ಬಸ್ ಹತ್ತಿದ ಹೊನ್ನೂರಪ್ಪನವರ ಪರ್ಸ್ ಎಗುರಿಸಲಾಗಿದೆ. ಟಿಕೇಟ್ ಖರೀದಿಗೆ ಮುಂದಾದ ಹೊನ್ನೂರಪ್ಪನವರಿಗೆ ಶಾಕ್ ಆಗಿದೆ. ಪರ್ಸ್ ನಲ್ಲಿ 11 ಗ್ರಾಂ ಬಂಗಾರದ ಬ್ರಾಸ್ ಲೈಟ್, 4500 ರೂ. ಕ್ಯಾಸ್ ಎಗುರಿಸಲಾಗಿದೆ. ಈ ಬಗ್ಗೆ ಹೊನ್ನೂರಪ್ಪ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.