ಪಿಎಸ್ಐ ವಿರುದ್ಧದ ಕೇಸ್ ಹಿಂಪಡೆಯಲು ಆಗಲ್ಲ ಎಂದಿದ್ದಕ್ಕೆ ಹಲ್ಲೆ

What is happening in Bhadravati has reached a state of incomprehensibility. An attempt has been made to cover up the case through pressure on the poor Dalit youth who had lodged a complaint with the SP, Human Rights Commission and Home Secretary against Hosmane Police Station PSI Krishna Kumar Mane and two PCs earlier.

ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿಯಲ್ಲಿ ಏನು ನಡೆಯುತ್ತಿದೆ ಅರ್ಥವೇ ಆಗದ ಸ್ಥಿತಿಗೆ ತಲುಪಿದೆ. ಮೊನ್ನೆ ಹೊಸಮನೆ ಪೊಲೀಸ್ ಠಾಣೆ ಪಿಎಸ್ಐ ಕೃಷ್ಣ ಕುಮಾರ್ ಮಾನೆ ಮತ್ತು ಇಬ್ವರು ಪಿಸಿಗಳ ವಿರುದ್ಧ ಎಸ್ಪಿ, ಮಾನವಹಕ್ಕು ಆಯೋಗ ಹಾಗೂ ಗೃಹಸಚಿವರಿಗೆ ದೂರು ದಾಖಲಿಸಿದ್ದ ಬಡ ದಲಿತ ಯುವಕನ ಮೇಲೆ ಒತ್ತಡ ಮೂಲಕ ಪ್ರಕರಣ ಮುಚ್ಚುಹಾಕುವ ಪ್ರಯತ್ನ ನಡೆದಿದೆ. 


ಭದ್ರಾವತಿಯಲ್ಲಿ ಆಗಸ್ಟ್ ನಲ್ಲಿ ಅನಿಲ್ ಮತ್ತು ಸಹೋದರ ದೀಪಕ್ ಎಂಬ ಕೂಲಿ ಕಾರ್ಮಿಕರನ್ನ ಪೊಲೀಸ್ ಸಬ್ ಇನ್ ಸ್ಪೆಕ್ಡರ್ ಕೃಷ್ಣ ಕುಮಾರ್ ಮಾನೆ ಮತ್ತು ಇಬ್ಬರು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ ಥಳಿಸಿ ಮಾನಸಿಕ ಹಿಂಸೆ ನೀಡಿರುವುದಾಗಿ ಎಸ್ಪಿ, ಗೃಹಸಚಿವ ಮಾನವಹಕ್ಕು, ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದರು. 

ಈ ಮನವಿಯ ಬೆನ್ನಲ್ಲೇ ಅನಿಲ್ ಎಂಬಾತನನ್ನ ಭದ್ರಾವತಿ ನಗರ ಸಭೆಯ ಸದಸ್ಯ ಕದಿರೇಶ್ ಅವರ ಪುತ್ರ ಸುದೀಪ್ ಕರೆ ಮಾಡಿ ನಿನ್ನ ಬಳಿ ಮಾತನಾಡುತ್ತೇನೆ ಸಂತೆ ಮೈದಾನದ ಬಳಿ ಬರಲು ಸೂಚಿಸಿದ್ದಾನೆ. ಸ್ಥಳಕ್ಕೆ ಬಂದ ಅನಿಲ್ ಗೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ವಿರುದ್ಧದ ದೂರು ಹಿಂಪಡಿ ಹಣಕೊಡ್ತಾರೆ ಎಂದು ಹೇಳಿದ್ದಾಬೆ. ಇದನ್ನ ಒಪ್ಪದ ಅನಿಲ್ ಮನೆಗೆ ವಾಪಾಸ್ ಆಗಿದ್ದಾನೆ. 

ನಿನ್ನೆ ಸಂಜೆ ವಿಜಯನಗರದ ಬಳಿಯಿರುವ ಕೃಷ್ಣ ಪ್ರೌಢಶಾಲೆಯ ಬಳಿ ಮಾತನಾಡುತ್ತ ನಿಂತಿದ್ದಾಗ ಸ್ಥಳಕ್ಕೆ ಬಂದ ಆಕಾಶ್ ಯಾನೆ ಹಳೆ ಬಟ್ಟೆ ಆಕಾಶ್ ಇಬ್ವರು ಸಹೋದರನ್ನ ಎರಡು ಬೈಕ್ ನಲ್ಲಿ ಕೂರಿಸಿಕೊಂಡು ಸೀಗೆಬಾಗಿಯ ಬೆಂಡೆಕಟ್ಟೆ ಚೌಡಮ್ಮ ಲೇಔಟ್ ಬಳಿ ನಿಲ್ಲಿಸಿಕೊಂಡು ಥಳಿಸಿದ್ದಾರೆ. ಆಕಾಶ್ ಜೊತೆ ಇನ್ನು ನಾಲ್ವರ್ ಸಹೋದಾರರನ್ನ ಥಳಿಸಿ ದೂರು ಪಾಪಾಸ್ ಪಡೆಯದಿದ್ದರೆ ಕೇಸ್ ಫಿಟ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. 

ನಾನು ಹೇಳಿದ ಹಾಗೆ ಹೇಳುವಂತೆ ಬೆದರಿಸಿ ಚಿತ್ರೀಕರಣ ಮಾಡಿಕೊಂಡು ಥಳಿಸಿದ್ದಾರೆ. ಈ ವೇಳೆ ಅನಿಲ್ ಗೆ ಗಾಯವಾಗಿದೆ. ಆತನನ್ನ‌ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಬೈಕ್ ನಲ್ಲಿ ಎತ್ತಿಹಾಕಿಕೊಂಡು ಹೋದ ಆಕಾಶ್ ಮತ್ತು ಇತರರ ವಿರುದ್ಧ ಕ್ರಮ ಜರುಗಿಸುವಂತೆ ಡಿವೈಎಸ್ಪಿಗೆ ಮನವಿ ನೀಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close