ಬೀಸಿದ್ದ ಬಲೆಯಿಂದ ಮೀನು ತೆಗೆಯಲು ಹೋಗಿ ಯುವಕ ಸಾವು


It has been reported that a young man who had gone to catch fish in a pond in Shimoga rural area drowned.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಹೊಂಡದಲ್ಲಿ ಮೀನಿಗಾಗಿ ಬೀಸಿದ್ದ ಬಲೆಯಿಂದ ಮೀನು ಹಿಡಿಯಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿರುವ ಘಟನೆ ವರದಿಯಾಗಿದೆ. 

ಕುಂಸಿಯ ನೀರಲಗಿ ಹೊಂಡದಲ್ಲಿ ಮೀನು ಹಿಡಿಯಲು ಬೆಸ್ತರು ಬಲೆ ಬೀಸಿದ್ದರು. ಈ ಬೀಸಿದ್ದ ಬಲೆಯಿಂದ ಮೀನು ಹಿಡಿಯಲು ಮುಂದಾದ ಯುವಕ ಶಿವಕುಮಾರ್(30) ನೀರಿನ ಹುಸುಗಿನಲ್ಲಿ ಸಿಕುಕಿ ಸಾವನ್ನಪ್ಪಿದ್ದಾನೆ. 

ಕುಂಸಿಯ ಶಿವಕುಮಾರ್ ಇಂದು ಮಧ್ಯಾಹ್ನ ನೀರಲಗಿ ಹೊಂಡಕ್ಕೆ ಇಳಿದಿದ್ದಾನೆ. ಮದ್ಯ ವ್ಯಸನ ಮಾಡಿ ಮೀನುಗಳನ್ನ ಹಿಡಿಯಲು ಮುಂದಾಗಿ ಈ ಘಟನೆಗೆ ಕಾರಣನಾಗಿದ್ದಾನೆ ಎಂಬುದು ಕುಟುಂಬಸ್ಥರ  ಆರೋಪವಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close