ಸಾಮೂಹಿಕ‌ ನೀಲಸರಸ್ವತಿ ಹೋಮ

Mass Neelasaraswati Homa was conducted by Shrimad Jagadguru Koodali Sringeri Shankaracharya Mahasansthapanam.


ಸುದ್ದಿಲೈವ್/ಶಿವಮೊಗ್ಗ

ಶ್ರೀಮದ್ ಜಗದ್ಗುರು ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾಪನಮ್ ನಿಂದ ಸಾಮೂಹಿಕ ನೀಲಸರಸ್ವತೀ ಹೋಮವನ್ನು ಹಮ್ಮಿಕೊಳ್ಳಲಾಗಿದೆ. 

ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ತುಂಗಭದ್ರ ಸಂಗಮ ಸ್ಥಳದಲ್ಲಿ ನೆಲೆ ನಿಂತಿರುವ ವಿದ್ಯಾಧಿ ಆದಿ ದೇವತೆ ಶ್ರೀ ಶಾರದಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಆಸ್ತಿಕ ಭಕ್ತ ಮಹಾಶಯರುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಶಸ್ಸು, ಪರೀಕ್ಷೆಗಳನ್ನು ಎದುರಿಸಲು ಬೇಕಾದ ಧೈರ್ಯ ಇತ್ಯಾದಿಗಾಗಿ ಜಗದ್ಗುರು ಮಹಾಸ್ವಾಮಿಗಳ ಅಪ್ಪಣೆ ಹಾಗೂ ಮಾರ್ಗದರ್ಶನದಂತೆ ಪ್ರತಿ ತಿಂಗಳ ಮೂಲ ನಕ್ಷತ್ರದ ದಿನದಂದು ಕ್ಷೇತ್ರದಲ್ಲಿ ನೀಲಸರಸ್ವತೀ ಹೋಮವನ್ನು ಸಾಮೂಹಿಕವಾಗಿ ಮಾಡಬೇಕೆಂದು ನಿಶ್ಚಯ ಮಾಡಲಾಗಿದೆ. 

ಅದರಂತೆ ಫೆ. 23 ರಿಂದ  ಈ ಹೋಮ ಶುರು ಮಾಡಲಾಗಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕಾಗಿ ಈ ಮೂಲಕ ತಿಳಿಸಲಾಗಿದೆ. ಮಾಹಿತಿಗೆ ಮೊ.ನಂ.9844570404 ಸಂಪರ್ಕಿಸಬಹುದಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close