ಸುದ್ದಿಲೈವ್/ಭದ್ರಾವತಿ
ಭದ್ರಾವತಿಯಲ್ಲಿ ಕಾನೂನು ಬಾಹಿರ ಚಡುವಟಿಕೆ ಹಿನ್ನಲೆಯಲ್ಲಿ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನಾಮೇಷ ಎಣಿಸುತ್ತಿದ್ದ ಭದ್ರಾವತಿ ಕಾಗದ ನಗರ ಪೊಲೀಸ್ ಠಾಣೆಯ ಪೊಲೀಸರು ಕೊನೆಗೂ ಮಾಧ್ಯಮಗಳಲ್ಲಿ ಪ್ರಚಾರ ಆದ ಮೇಲೆ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗಲು ಕೊನೆಗೂ ಮಾಧ್ಯಮಗಳೇ ಎಚ್ಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಆಗಿರುವುದು ದುರಂತವೇ ಸರಿ. 24 ನೇ ನಂಬರ್ ಓಸಿ ವಿಚಾರದಲ್ಲಿ ನಡು ರಸ್ತೆಯಲ್ಲಿ ರಾರಾಜಿಸಿದ್ದ ಲಾಂಗು ಮಚ್ಚು ತಲವಾರ್ ಗಳನ್ನ ಹಿಡಿದ ಯುವಕರ ವಿರುದ್ಧ ದೂರು ದಾಖಲಿಸಲು ಪೊಲೀಸರು ಧೈರ್ಯ ಮಾಡಿದ್ದಾರೆ.
ಹೊಸಮನೆ ವಾಸಿ ಹಳೆ ಬಟ್ಟೆ ಆಕಾಶ, ಸುನೀಲ, ಬಾರಂದೂರು ವಾಸಿ ಅಜಿತ, ಜೇಡಿಕಟ್ಟಿಯ ವಾಸಿ ವರುಣ, ಉಜ್ಜೇನಿಪುರದ ಕಾರ್ತಿಕ, ಸೋಮಶೇಖರ ಮತ್ತು ಪ್ರದೀಪ ಯಾನೆ ಆನೆ ಪ್ರದೀಪನ ವಿರುದ್ಧ ದೂರು ದಾಖಲಾಗಿದೆ. ಆದರೆ ಓಸಿ ವಿಚಾರದಲ್ಲಿ ಈ ಪ್ರಕರಣ ದಾಖಲಾಗಿಲ್ಲ.
ಯಾವುದೇ ಹಳೇ ದ್ವೇಷದ ಹಿನ್ನಲೆಯಲ್ಲಿ ಬಡಿದಾಟ ನಡೆದಿದೆ ಎಂದು Sue Moto ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಪೊಲೀಸರು ಯಾವುದೇ ಒಂದು ಹಳೇ ದ್ವೇಷದ ಹಿನ್ನಲೆಯಲ್ಲಿ ಘಟನೆ ನಡೆದಿದ್ದು ಸಾರ್ವಜನಿಕರ ಶಾಂತಿ ಭಂಗದ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣವೇನು?
ಆನೆ ಪ್ರದೀಪ್ ವರ್ಸಸ್ ಹಳೆ ಬಟ್ಟೆ ಆಕಾಶ್ ಗ್ಯಾಂಗ್ ನಡುವೆ ಮಾರಾಮಾರಿ ನಡೆದಿದೆ. ಭದ್ರಾವತಿಯ ಉಜ್ಜನಿಪುರ ಸರ್ಕಲ್ ಬಳಿಯ ರಾಘವೇಂದ್ರ ವೈನ್ಸ್ ಬಳಿ ಮಾರಾಮಾರಿಯಾಗಿದೆ. ನಾಲ್ಕಾರು ಬೈಕಿನಲ್ಲಿ ಮಚ್ಚು, ದೊಣ್ಣೆ, ಬರ್ಚಿ ಹಿಡಿದು ಬಂದ ಹಳೆ ಬಟ್ಟೆ ಆಕಾಶ್ ನ ಗ್ಯಾಂಗ್ ಸರ್ಕಲ್ ಬಳಿ ನಿಂತಿದ್ದ ಆನೆ ಪ್ರದಿ ಗೆ ಭರ್ಜರಿ ಒದೆ ಬಿದ್ದಿದೆ.
ಇಷ್ಟಕ್ಕೂ ಈ ಗಲಾಟೆ ನಡೆದಿದ್ದು ಯಾಕೆ?
ಇದು ಓಸಿ ನಂಬರ್ ಪಾನಾ ಗಲಾಟೆ ಎಂದು ಹೇಳಲಾಗುತ್ತಿದೆ. ಒಂದು ರೂಪಾಯಿ ಒಂದು ನಂಬರ್ ಗೆ ಕಟ್ಟಿದರೆ ಆ ನಂಬರ್ ಪಾಸಾದರೆ 80 ರೂಪಾಯಿ ಹಣಕಟ್ಟಿದವನಿಗೆ ಸಿಗುವ ಓಸಿ ಆಟದ ದಂದೆಯಾಗಿದೆ. ನಂಬರ್ ಒಂದಕ್ಕೆ 80000 ಕಟ್ಟಲಾಗಿತ್ತು. ಕಟ್ಟಿದ ನಂಬರ್ ಪಾಸ್ ಆಗಿದ್ದರಿಂದ ಎಂಬತ್ತು ಲಕ್ಷರು ಕೊಡಬೇಕಾಗಿತ್ತು. ಒಸಿ ಬರೆಸಿದ 24 ನಂಬರ್ ಪಬ್ಲಿಕ್ ಆಗಿದೆ ಎಂದು ಆಟ ಆಡಿದವರಿಗೆ ಹಣ ಕೊಡಲೇ ಇಲ್ಲ ಎಂಬ ಮಾತು ಕೇಳಿ ಬಂದಿದೆ.
ಹಣದ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಆನೆ ಪ್ರದಿಗೆ ಗೂಸ ಬಿದ್ದಿದೆ. ಇದೇ ಕಾರಣಕ್ಕೆ ಆನೆ ಪ್ರದೀಪ್ ಅಂಡ್ ಗ್ಯಾಂಗ್ ಗೆ ಥಳಿಸಲಾಗಿದೆ. ಈ ಗ್ಯಾಂಗ್ ವಾರ್ ನ ಗಲಾಟೆ ಪ್ರಭಾವಿ ನಾಯಕರ ಮನೆಯಲ್ಲಿ ರಾಜಿ ಪಂಚಾಯಿತಿ ನಡೆದಿದೆ. ಈಗಲೂ ಓಸಿ ದಂಧೆಯ 24 ರ ಸಂಖ್ಯೆಯ ಪಾನಾ ರಹಸ್ಯ ಬಗೆಹರಿದಿಲ್ಲ. ಓಸಿ ಬಿಡ್ಡರ್ ನಾಪತ್ತೆ ಗ್ಯಾಂಗ್ ಗಳ ನಡುವೆ ನಿತ್ಯವೂ ಬಡಿದಾಟ ನಡೆಯುತ್ತಿದೆ. ಭದ್ರಾವತಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಪೊಲೀಸರಿಗೆ ಕೈಕಟ್ ...! ಬಾಯ್ ಮುಚ್ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ದೂರು ದಾಖಲಾಗಿದೆ.