ಬಸ್ ಹತ್ತಿಕುಳಿತು ಆಧಾರ್ ಕಾರ್ಡ್ ತೆಗೆಯಲು ಹೋದಾಗ ಮಹಿಳೆಗೆ ಶಾಕ್!

 

Mangalya chain, cash and documents were stolen from a woman's vanity bag when she boarded a Mysore bus to return to Viraj Peta in Kodu after completing her court work at NR Pura. This is the fourth case registered in KSRTC this year.

ಸುದ್ದಿಲೈವ್/ಶಿವಮೊಗ್ಗ

ಎನ್ ಆರ್ ಪುರದ ಕೋರ್ಟ್ ಕೆಲಸ ಮುಗಿಸಿಕೊಂಡು ವಾಪಾಸ್ ಕೊಡುಗಿನ ವಿರಾಜ್ ಪೇಟೆಗೆ ಹೋಗಲು ಮೈಸೂರು ಬಸ್ ಹತ್ತುವಾಗ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಮಾಂಗಲ್ಯ ಸರ, ನಗದು ಹಾಗೂ ದಾಖಲಾತಿಗಳನ್ನ ಕಳವು ಮಾಡಲಾಗಿದೆ. ಇದರಿಂದ ಕೆಎಸ್ ಆರ್ ಟಿಸಿಯಲ್ಲಿ ಈ ವರ್ಷದ ನಾಲ್ಕನೇ ಪ್ರಕರಣ ದಾಖಲಾಗಿದೆ.

ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಈ ವರ್ಷದ 35 ದಿನಗಳಲ್ಲಿ 4 ನೇ ಪ್ರಕರಣ ದಾಖಲಾಗಿದೆ. ವಿರಾಜ್ ಪೇಟೆಯ ಮಹಿಳೆ ತನ್ನ ಅಕ್ಕನ ಮಗಳ ಜೊತೆ ಎನ್ ಆರ್ ಪುರದಲ್ಲಿ ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗಲು ಬಂದು ವಾಪಾಸ್ ಊರಿಗೆ ತೆರಳಲು ಮೈಸೂರು ಬಸ್ ಹಿಡಿದು ಕುಳಿತಿದ್ದರು. 

ಆಧಾರ್ ಕಾರ್ಡ್ ತೆಗೆಯಲು ಮುಂದಾದ ಮಹಿಳೆಗೆ ವ್ಯಾನಿಟಿ ಬ್ಯಾಗ್ ನ ಜಿಪ್ ಓಪನ್ ಆಗಿತ್ತು. ತಕ್ಷಣವೇ ಪರಿಶೀಲಿಸಿದಾಗ 80 ಸಾವಿರ ರೂ. ಮೌಲ್ಯದ ಎರಡೆಳೆ ಮಾಂಗಲ್ಯ ಸರ, 15 ಸಾವಿರ ರೂ ಮೌಲ್ಯದ ಒಂದು ಜೊತೆ ಕಿವಿಯೋಲೆ, ದಾಖಲಾತಿಗಳು ಮತ್ತು ಐದು ಸಾವಿರ ರೂ. ನಗದು ಕಳುವಾಗಿರುವುದು ತಿಳಿದು ಬಂದಿದೆ

ಈ ಘಟನೆ  ಜ. 20 ರಂದು ನಡೆದಿದೆ. ಊರಿಗೆ ಹೋಗಿ ವಾಪಾಸ್ ಬಂದು ನಿನ್ನೆ ದೂರನ್ನ ಮಹಿಳೆ ದಾಖಲಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close