ಮತದಾನದ ಗುರುತಿನ ಚೀಟಿ ದುರ್ಬಳಕೆ-ಕ್ರಮಕ್ಕೆ ಬಿಜೆಪಿ ಆಗ್ರಹ


Momcos election was held at APMC yard in Shimoga. The BJP alleged that the opponents of the election slip misused and created confusion in the voting.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಎಪಿಎಂಸಿ ಯರ್ಡ್ ನಲ್ಲಿ ಮಾಮ್ ಕೋಸ್ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಚುನಾವಣೆಯ ಗುರಿತಿನ ಚೀಟಿ ನ್ನ ಎದುರಾಳಿಗಳು ದುರುಪಯೋಗ ಮಾಡಿಕೊಂಡು ಮತದಾನದಲ್ಲಿ ಗೊಂದಲ ಎಬ್ಬಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. 

ಸಹಕಾರ ಭಾರತಿ ಕೇಸರಿ ಕಲರ್ ಗುರುತಿನ ಚೀಟಿಗಳನ್ನ‌ಎದುರಾಳಿ ತಂಡ ಸಾವಿರಾರು ಗಟ್ಟಲೆ ಮಾಡಿಸಿ ಫ್ರಾಕ್ಸಿ ಮತಗಳು ಬೀಳಿಸುವ ಹುನ್ನಾರ ನಡೆಸಿ ಚುನಾವಣೆಯಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಿದೆ ಎಂದು ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಗಂಭೀರ ಆರೋಪ ಮಾಡಿದೆ. 

ಈ ಕುರಿತು ಮಾತನಾಡಿದ  ಸಹಕಾರ ಭಾರತಿಯ ಸದಸ್ಯ ವಿರುಪಾಕ್ಷಪ್ಪ,  ಎದುರಾಳಿ ತಂಡ ಅನುಚಿತ ವರ್ತನೆಯಿಂದ ಚುನಾವಣೆ ಅಖಾಡದಲ್ಲಿ ತೋರುತ್ತಿದ್ದಾರೆ.  ಸಹಕಾರಿ ಭಾರತಿಯ 19 ಜನರಿರುವ ಗುರುತಿನ ಚೀಟಿಯನ್ನ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದಿಂದ ಪದರಿಂಟ್ ಮಾಡಿಸಿಕೊಂಡು ಬಂದು ಮತದಾರರಲ್ಲಿ ಹಂಚಿ ಗೊಂದಲ ಉಂಟುಮಾಡುವ ಯತ್ನ ನಡೆಸಲಾಗುತ್ತಿದೆ.  

ನಮ್ಮ ಸಹಕಾರಿ ಭಾರತಿಯ ಸದಸ್ಯರ ಕೇಸರಿ ಕಲರ್ ಮಾಡಿಕೊಂಡು ಬಂದಿರುವ ಎದುರಾಳಿ ಸಹಕಾರಿ ಪ್ರತಿಷ್ಠಾನದವರು ಬಿಳಿ ಬಣ್ಣದ ಗುರುತಿನ ಚೀಟಿ ಹಂಚುವ ಬದಲು ಪಿಂಕ್ ಕಲರ್ ಹಂಚಿ  ನಮ್ಮ‌ಹೆಸರಿನಲ್ಲಿ ಮತದಾರರಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋಲನ್ನ ಒಪ್ಪಿರುವ ಸಹಕಾರ ಪ್ರತಿಷ್ಠಾನ ಎಲ್ಲಿ ಪ್ರಿಂಟ್ ಮುದ್ರಣ ಮಾಡಿಸಿದ್ದಾರೋ ಆ ಮುದ್ರಣದ ಮೇಲೆ ಚುನಾವಣೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. 

ಆದರೆ ಈ ಬಗ್ಗೆ ಕಾಂಗ್ರೆಸ್ ಬೆಂಬಲಿತ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನದವರು  ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಒಟ್ಟಿನಲ್ಲಿ ವಿಧಾನ ಸಭಾ ಚುನಾವಣೆಗಿಂತ ಮಾಮ್ ಕೋಸ್ ಚುನಾವಣೆಯಲ್ಲಿ ಘೋಷಣೆಗಳು, ಪರಸ್ಪರ ಆರೋಪಗಳ ಘೋಷಣೆ ಜೋರಾಗಿ ಕೇಳಿ ಬರುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close