The prestigious Momcos election of three districts has been concluded and the percentage of voting has come out. Voting started at 9 am and ended at 4 pm.
ಸುದ್ದಿಲೈವ್/ಶಿವಮೊಗ್ಗ
ಮೂರು ಜಿಲ್ಲೆಗಳ ಪ್ರತಿಷ್ಠಿತ ಮಾಮ್ ಕೋಸ್ ಚುನಾವಣೆ ಮುಕ್ತಾಯಗೊಂಡಿದ್ದು ಶೇಕಡವಾರು ಮತದಾನ ಹೊರಬಿದ್ದಿದೆ. ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನ 4 ಗಂಟೆಗೆ ಮುಕ್ತಾಯಗೊಂಡಿದೆ.
ಮತ ಎಣಿಕೆ ಕಾರ್ಯ ಇನ್ನೂ ಆರಂಭಗೊಳ್ಳಬೇಕಿದೆ. ಮತ ಎಣಿಕೆ ಬಹುಶ ನಾಳೆ ಬೆಳಿಗ್ಗಿನ ಜಾವ ಪ್ರಕರಣವಾಗುವ ನಿರೀಕ್ಷೆಯಿದೆ. ಈಗಾಗಲೇ ಸಹಕಾರ ಭಾರತಿಯ ಸದಸ್ಯ ನಾಳೆ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಎನಿವೇ! ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕನ್ನ ಒಳಗೊಂಡ 17 ವಿಧಾನ ಸಭಾ ಕ್ಷೇತ್ರದಲ್ಲಿ 11511 ಮತಗಳನ್ನ ಒಳಗೊಂಡಿದ್ದು ಇನ್ನೂ ಕೋರ್ಟ್ ಗೆ ಹೋಗಿ ಮತಚಲಾವಣೆಯ ಹಕ್ಕು ಪಡೆದವರು 6644 ಜನರಾಗಿದ್ದು, ಒಟ್ಟು 18155 ಮತಗಳು ಚಲಾವಣೆಯಾಗಬೇಕಿತ್ತು.
11511 ಜನ ಮತದಾರರಲ್ಲಿ 8329 ಮತಗಳು ಚಲಾವಣೆಯಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಬಂದು 6644 ಜನರಲ್ಲಿ 3723 ಮತಗಳು ಚಲಾವಣೆಯಾಗಿದೆ. ಒಟ್ಟು 18155 ಮತದಾರರಲ್ಲಿ 12061 ಜನ ಮತಚಲಾಯಿಸಿದ್ದಾರೆ. ಇದರಿಂದ ಶೇ.66.43 ಮತಗಳು ಚಲಾವಣೆಗೊಂಡಿದೆ.