ಸುದ್ದಿಲೈವ್/ಶಿವಮೊಗ್ಗ
ಜಿಲ್ಲಾ ನೋಂದಣಿ ಹಾಗೂ ಉಪ ನೋಂದಣಿ ಕಚೇರಿಯ ಕಂಪ್ಯೂಟರ್ ಆಪರೇಟರ್ ಗಳ ಮುಷ್ಕರಕ್ಕೆ(protest) ದಿನಾಂಕ ಫಿಕ್ಸ್(fix) ಆಗಿದೆ. ಫೆ.17 ರಂದು ರಾಜ್ಯಾದ್ಯಂದ ನೋಂದಣಿ ಕಚೇರಿಯ ಕಂಪ್ಯೂಟರ್ ಆಪರೇಟರ್ ಗಳ ಅನಿರ್ದಿಷ್ಠಾವಧಿ ಮುಷ್ಕರ ನಡೆಯಲಿದೆ.
ಐದು ತಿಂಗಳಿಂದ ಈ ಕಂಪ್ಯೂಟರ್ ಆಒರೇಟರ್ ಗಳಿಗೆ ಸಂಬಳ ಆಗದ ಹಿನ್ನಲೆಯಲ್ಲಿ ಮುಷ್ಕರಕ್ಕೆ ದಿನಾಂಕ ನಿಗದಿಯಾಗಿದೆ. ಇದರ ಜೊತೆಗೆ ಹಲವು ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿದೆ.
ಇದರಿಂದಾಗಿ ಫೆ. 17 ರಿಂದ ಸಾರ್ವಜನಿಕರಿಗೆ ನೋಂದಣಿ ಇಲಾಖೆ ಸೇವೆಯಲ್ಲಿ ವ್ಯತ್ಯಯವಾಗಲಿದೆ.