ಇಂಜಿನಿಯರಿಂಗ್ ಪದವಿಯನ್ನ ಮಿಸ್ ಆಗಿ ಪಾಸ್ ಆದ ಹುಡುಗರ ಕಥೆಯೇ ಇಂಟರ್ವಲ್ ಸಿನಿಮಾ


Interval film starring Shashiraj, Prajwal Kumar Gowda, Suki, Charitra Rao, Sahana Aradhya, Samiksha Danam Shimogga, Ranganath Shimogga will release on March 07.

ಸುದ್ದಿಲೈವ್/ಶಿವಮೊಗ್ಗ

ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರರಾವ್, ಸಹನ ಆರಾಧ್ಯ, ಸಮಿಕ್ಷ ದಾನಂ ಶಿವಮೊಗ್ಗ, ರಂಗನಾಥ್ ಶಿವಮೊಗ್ಗ, ತಾರಾಗಣದ ಇಂಟರ್ವಲ್ ಚಲನಚಿತ್ರ ಮಾ.07 ರಂದು ತೆರೆಕಾಣಲಿದೆ. 

ಈ ಕುರಿತಂತೆ ಚಲನಚಿತ್ರ ತಂಡ ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದೆ. ಹಾಸ್ಯ ಮಯವಾಗಿರುವ ಈ ಸಿನಿಮಾ ಗಣೇಶ್ ಎಸ್, ಗಣೇಶ್ ಟಿ ಹಾಗೂ ಗಣೇಶ್ ಯು ಎಂಬ ಮೂವರ ಬಾಲ್ಯ, ಪ್ರೌಢವ್ಯವಸ್ಥೆ ಮತ್ತು ಕೆಲಸದ ಹುಡುಗಾಟದ ಚಲನಚಿತ್ರ ಇದಾಗಿದೆ. ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಚಲನ ಚಿತ್ರವಾಗಿದೆ. 

ಈ ಕುರಿತು ಮಾತನಾಡಿರುವ ನಾಯಕ ಸಿನಿಮಾದ ನಾಯಕ ನಟ ಸುಕಿ,  ತೀರ್ಥಹಳ್ಳಿ ಹುಡುಗರು ಆಗಿರುವ ಈ ಮೂವರು ಇಂಜಿನಿಯರಿಂಗ್ ಪದವೀಧರರು‌. ಎಂದಿನಂತೆ ತೀರ್ಥಹಳ್ಳಿಯ ಹಳ್ಳಿಗಳಲ್ಲಿ  ಶೂಟಿಂಗ್ ನಡೆದಿದೆ. ಇಂಜಿನಿಯರಿಂಗ್ ಪದವಿಯನ್ನ ಮಿಸ್ ಆಗಿ ಪಾಸ್ ಆದ ಹುಡುಗರ ಕಥೆಯೇ ಇಂಟರ್ವಲ್ ಸಿನಿಮಾ ಆಗಿದೆ. 

ಎಲ್ಲರ ಜೀವನವೂ ಮದ್ಯಂತರ ಬರುವುದರಿಂದ ಅದು ಪಾಸಿಟಿವ್ ಕಡೆ ಹೋದರೆ ಅದು ಸಕ್ಸಸ್ ಆಗಲಿದೆ. ಮಿಡ್ಲ್ ಕ್ಲಾಸ್ ಜೀವನದ ಸಿನಿಮಾವಾಗಿದೆ ಎಂದು ತಿಳಿಸಿದೆ. 

ಸಾಹಸದಲ್ಲಿ  ರಘುಬಂಡೆ, ಸಂಕಲನ ಶಶಿಧರ್ ಪುಟ್ಟೇಗೌಡ, ಸಂಗೀತ ವಿಕಾಸ ವಸಿಷ್ಠ, ಛಾಯಾಗ್ರಹಣ ರಾಜ್ ಕಾಂತ್ ಎಸ್ ಕೆ, ನಿರ್ದೇಶನ ಭರತ್ ವರ್ಷ, ನಿರ್ಮಾಪಕರಾಗಿ ಸುಕಿ ಮತ್ತು ಭರತ್ ವರ್ಷ, ಭರತ್ ವರ್ಷ ಫಿಕ್ಚರ್ಸ್ ಬ್ಯಾನರ್ ಅಡಿ ಸಿನಿಮಾ ಮೂಡಿ ಬಂದಿದೆ. ನಟ ಶ್ರೀಮುರುಳಿ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಎರಡು ಕೋಟಿಯ ಸಿನಿಮಾ ಇದಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close