The villagers protested yesterday evening by shutting down the Milk Producers' Association, alleging that there was malpractice in the appointment of the secretary and milk inspector appointed in the milk producers' association of Anjanapur Hobali Harogoppa in the taluk.
ಸುದ್ದಿಲೈವ್/ಶಿಕಾರಿಪುರ
ತಾಲೂಕಿನ ಅಂಜನಾಪುರ ಹೋಬಳಿ ಹಾರೋಗೊಪ್ಪದ ಹಾಲು ಉತ್ಪಾದಕರ ಸಂಘದಲ್ಲಿ ನೇಮಕಗೊಂಡಿರುವ ಕಾರ್ಯದರ್ಶಿ ಮತ್ತು ಹಾಲು ಪರೀಕ್ಷಕ ಹುದ್ದೆಯ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿನ್ನೆ ಸಂಜೆ ಹಾಲು ಉತ್ಪಾದಕರ ಸಂಘವನ್ನ ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.
2024 ಆಗಸ್ಟ್ ತಿಂಗಳಲ್ಲಿ ಉತ್ಪಾದಕರ ಸಂಘದಲ್ಲಿ ಹಂಗಾಮಿ ಹುದ್ದೆಯಾಗಿ ಕಾರ್ಯದರ್ಶಿ ಮತ್ತು ಹಾಲು ಪರೀಕ್ಷಕ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಒಟ್ಟು 84 ಜನರು ಅರ್ಜಿ ಸಲ್ಲಿಸಿದ್ದರು. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳೆಂದು ಶಿಮೂಲ್ ನ ಸೂಪರ್ ವೈಸರ್ ಗಳು ತಲಾ 4 ಜನರನ್ನ ಆಯ್ಕೆ ಮಾಡಿದ್ದರು.
ಇದರಲ್ಲಿ ಹಾಲು ಉತ್ಪಾದಕರ ಸಂಘದ 9 ಜನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರೆ ಸದಸ್ಯರು ತಮಗೆ ಬೇಕಾದವರನ್ನ ಈ ಹುದ್ದೆಗೆ ಕೂರಿಸಿ ಉದ್ದೇಶ ಪೂರಕವಾಗಿ ಇತರರನ್ನ ತಿರಸ್ಕರಿಸಿದ್ದಾರೆ. ಈ ಹುದ್ದೆಗೆ ನೇಮಿಸುವ ಅರ್ಹತಾ ಪರೀಕ್ಷೆಯಲ್ಲಿ ಶೇ60-80 ರಷ್ಟು ಅಂಕ ಪಡೆದವರನ್ನ ತಿರಸ್ಕರಿಸಿ ಶೇ.40 ರಷ್ಟು ಅಂಕ ಪಡೆದವರನ್ನ ಈ ಎರಡೂ ಹುದ್ದೆಗೆ ನೇಮಿಸಲಾಗಿದೆ.
ಸಂಘದ ಕಾರ್ಯದರ್ಶಿಗಳ ಕಡೆಯವರನ್ನೇ ಈ ಹುದ್ದೆಗೆ ನೇಮಿಸಲಾಗಿದೆ. ಇದನ್ನ ಪುನರ್ ಪರಶೀಲಿಸಯವಂತೆ ಒತ್ತಾಯಿಸಿ ಗ್ರಾಮಸ್ಥರು ನಿನ್ನೆ ಸಂಘಕ್ಕೆ ಹಾಲು ಹಾಕಲು ಬಂದ ಹಾಲು ಉತ್ಪಾದಕರನ್ನೇ ವಾಪಾಸ್ ಕಳುಹಿಸಿರುವ ಘಟನೆ ನಡೆದಿದೆ.
ನಿನ್ನೆ ಮಧ್ಯಾಹ್ನ ಸಂಘದ ಸದಸ್ಯರೊಂದಿಗೆ ಕೆಲವರು ಚರ್ಚಿಸಿದರೂ ಸದಸ್ಯರು ಆಯ್ಕೆ ಮಾಡಿರುವ ನೌಕರರನೇ ಅಂತಿಮ ಬದಲಿಸಲು ಸಾಧ್ಯವಿಲ್ಲ ಎಂಬ ತೀರ್ಮಾನ ಪಡೆದ ಬೆನ್ನಲ್ಲೇ ಸಂಜೆ ಹಾಲು ಉತ್ಪಾದಕರ ಸಂಘವನ್ನೇ ಬಂದ್ ಮಾಡಲಾಗಿದೆ.