ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಷಯದಲ್ಲಿ ಸ್ಪೀಡ್ ಆಗಿ ಕೆಲಸ ಮಾಡಿದ ಆಯೋಗ ಮಹಿಳಾ ಅಧಿಕಾರಿ ವಿಚಾರದಲ್ಲಿ ಮೌನವಾಗಿರುವುದೇಕೆ?ಪ್ರಣವಾನಂದ ಶ್ರೀಗಳು

Pranavananda Swamiji of Shakti Peetha gave a statement to the media after visiting the house of mining officer Jyoti. Officials visited the house to provide moral support to the officers.


ಸುದ್ದಿಲೈವ್/ಶಿವಮೊಗ್ಗ

ಗಣಿ ಅಧಿಕಾರಿ ಜ್ಯೋತಿಯವರ ಮನೆಗೆ ಭೇಟಿ ನೀಡಿದ ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಧಿಕಾರಿಗೆ ನೈತಿಕ ಬೆಂಬಲ ನೀಡಲು ಅಧಿಕಾರಿಗಳ ಮನೆಗೆ ಭೇಟಿ ನೀಡಿರುವುದಾಗಿ ತಿಳಿಸಿದರು. 

ಅಧಿಕಾರಿಗಳಿಗೆ ಆದ ಅಪಮಾನ ಮಾತ್ರವಲ್ಲ ಮಹಿಳೆಗೆ ಮತ್ತು ಹಿಂದುಳಿದ ವರ್ಗದವರಿಗೆ ಆದ ಅವಮಾನವಾಗಿದೆ. ಭಾಗ್ಯವನ್ನ ಹೇಳುವ ಮತ್ತು ಸಂವಿಧಾನ ಎಂದು ಹೇಳುವ ಕಾಂಗ್ರೆಸ್ ರಾಜ್ಯ ಸರ್ಕಾರ  ಮಹಿಳೆಗೆ ಸಂವಿಧಾನದಲ್ಲಿರುವ ರಕ್ಷಣೆ ಯಾಕೆ ನೀಡಿಲ್ಲ? ಸರ್ಕಾರಿ ನೌರರಲ್ಲೇ ಈಡಿಗ ಸಮುದಾಯವನ್ನ ಮೂಲೆಗುಂಪು ಮಾಡಲಾಗಿದೆ ಎಂದು ದೂರಿದರು. 

ದೂರು ದಾಖಲಾದ ತಕ್ಷಣ ಮೊಬೈಲ್ ತಂದು ಕೊಡುವನನ್ನ ಬಂಧಿಸಿ ಎಫ್ಎಸ್ ಎಲ್ ಕಳುಹಿಸಿಲ್ಲ. ಮಾತು ಎತ್ತಿದ್ರೆ ಸಂವಿಧಾನ ಎನ್ನುವ ಕಾಂಗ್ರೆಸ್ ಮಹಿಳಾ ಅಧಿಕಾರಿಗೆ ರಕ್ಷಣೆ ನೀಡಿಲ್ಲ ಮೂಲೆ ಗುಂಪು ಮಾಡಲಾಗಿದೆ. ಭ್ರಷ್ಠಾಚಾರ ನಡೆಸದ ಮಹಿಳೆಗೆ ಜೀವಬೆದರಿಕೆ ಹಾಕದೆ ಅವರ ಮೈಮೇಲೆ ವಾಹನ ಹತ್ತಿಸಿ ಹತ್ಯೆ ಮಾಡುವ ಯತ್ನ ಮಾಡಲಾಗಿದೆ ಎಂದು ಪ್ರಣವಾನಂದ ಸ್ವಾಮಿ ಆರೋಪಿಸಿದರು.

ಈಡಿಗ ಸಮುದಾಯ ಮೂಲೆಗುಂಪಾಗಿದೆ. ಕ್ರಮ ಆಗದಿದ್ದರೆ ಸಭೆ ಸೇರಿ ಮುಂದಿನ ಹೋರಾಟ ನಡೆಸಲಾಗುವುದು. ಬಂಗಾರಪ್ಪನವರ ಸಮುದಾಯಕ್ಕೆ ರಕ್ಷಣೆ ನೀಡಬೇಕು. ಸಂಗಮೇಶ್ವರ್ ನ ಪುತ್ರರನ್ನ ಬಂಧಿಸಬೇಕು. ಈ ಬಗ್ಗೆ ಎಸ್ಪಿಗೆ ಮನವಿ ನೀಡಲಾಗುವುದು. ಮಹಿಳೆಯ ಮೇಲೆ ಅವ್ಯಚ್ಯವಾಗಿ ನಿಂದಿಸಿದರೂ ಶಾಸಕ ಪುತ್ರನನ್ನ ಬಂಧಿಸುವುದು ಮೊದಲ ಕರ್ತವ್ಯವಾಗಬೇಕಿತ್ತು ಎಂದರು. 

 ಅಧಿಕಾರಿ ಜ್ಯೋತಿ ವಿರುದ್ಧ ಮೇಲ್ವರ್ಗದ ವಿರುದ್ದ ಮೇಲ್ವರ್ಗ ದಬ್ವಾಳಿಕೆ ನಡೆಸಿದೆ. ಸಂಗಮೇಶ್ ಅವರ ಶಾಸಕ ಸ್ಥಾನ ಕಿತ್ತುಕೊಂಡು ಮಗನನ್ನ ಬಂಧಿಸಬೇಕು. ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಪ್ಪ ಬಿ ರಿಪೋರ್ಟ್ ನೀಡುವುದಲ್ಲ ಕ್ಲೀನ್ ಚೀಟ್ ಆದ ಮೇಲೆ ಶಾಸಕರಾಗಿ ಮುಂದು ವರೆಯಿರಿ ಎಂದರು.

ಹಿಂದುಳಿದ ವರ್ಗದ ಅಧಿಕಾರಿಗಳ ಮೇಲೆ ಮೇಲ್ವರ್ಗದ ಅಧಿಕಾರಿಗಳ ದಬ್ಬಾಳಿಕೆ ನಡೆಯುತ್ತಿರುವುದು ಕಂಡು ಬರುತ್ತಿದೆ. ಈಡಿಗರು ಸತ್ತಿಲ್ಲ. ಸಮುದಾಯವನ್ನ ಮೂಲೆಗುಂಪು ಮಾಡಿದ್ದಾರೆ. ಎರಡು ಸಮುದಾಯ ಸಮಾಜವನ್ನೇ ಹಂಚಿಕೊಂಡಿವೆ ಎಂದು ಮೇಲ್ವರ್ಗದವರ ವಿರುದ್ಧ ಆರೋಪಿಸಿದರು. ಇಲಾಖೆಯಲ್ಲಿ ಮಹಿಳೆಯರಿಗೆ ಕಿರಿಕಿರಿ ಉಂಟು ಮಾಡಿದರೆ ಸಮುದಾಯ ಬೀದಿಗಿಳಿದು ಹೋರಾಟ ಮಾಡಲಿದೆ. 

ಜಿಲ್ಲಾ ಉಸ್ತುವಾರಿ ಸಚಿವರ ಜವಬ್ದಾರಿ ಇದೆ. ಸಂಗಮೇಶ್ವರ ಮಗನನ್ನ‌ಒದ್ದು ಒಳಗೆ ಹಾಕಬೇಕು. ಕುಮಾರ್ ಬಂಗಾರಪ್ಪ, ಹರತಾಳ ಹಾಲಪ್ಪ ಮತ್ತು ಶಾಸಕ ಬೇಳೂರಿಗೆ ಜವಬ್ದಾರಿಯಿದೆ. ಸಣ್ಣ ಮನೆಯೊಳಗೆ ಮಹಿಳಾ ಅಧಿಕಾರಿ ಬದುಕುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ವಿಷಯದಲ್ಲಿ ಅಬ್ಬರಿಸಿದ ಮಹಿಳಾ ಆಯೋಗ ಮಹಿಳಾ ಅಧಿಕಾರಿಗೆ ಆಗಿರುವ ವಿಚಾರದಲ್ಲು ಸುಮೋಟೊ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಸ್ಬಾಮೀಜಿ ಅಬ್ಬರಿಸಿದರು. 

ಮಹಿಳೆ ಘಟನೆ ನಡೆದಾಗ ಡಿವೈಸ್ಪಿಗೆ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಆರೋಪ ಕೇಳಿ ಬರುತ್ತಿದೆ. ಅಧಿಕಾರಿಗಳು ರಾಜೀನಾಮೆ ನೀಡಬೇಕು ಇಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಡಿಸಿಎಂ ನವರು ಈ ಬಗ್ಗೆ ಗಮನಹರಿಸಿ ಶಾಸಕರ ಸ್ಥಾನದಿಂದ ಕೆಳಗಿಳಿಸಿ. ಈ ಹಿಂದಿನ ಸರ್ಕಾರ 

ಗ್ಯಾರೆಂಟಿಗಿಂತ 10 ಪಟ್ಟು ಸ್ವಾಭಿಮಾನ ಮುಖ್ಯವಾಗಿದೆ. ಅಧಿಕಾರಿ ಜ್ಯೋತಿ ಘಟನೆಯಿಂದ ಹೆದರಿದ್ದಾರೆ. ಅಧಿಕಾರಿಗಳು ಶಾಸಕರ ಪುತ್ರರನ್ನ ಎಲ್ಲೂ ನೇರವಾಗಿ ಹೆಸರಿಸಿಲ್ಲ. ತನಿಖೆಯಾಗಲಿ. ತನಿಖೆಯ ವಿಚಾರದಲ್ಲಿ ಮೊದಲು ಮೊಬೈಲ್ ತಂದುಕೊಟ್ಟವನನ್ನ ಬಂಧಿಸಿ ಎಫ್ಎಸ್ಎಲ್ ಗೆ ಕಳುಹಿಸಿ ತನಿಖೆ ನಡೆಯಲಿ. ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರದಲ್ಲಿ ಸ್ಪೀಡ್ ಆಗಿ ಮುಂದುವರೆದ ಮಹಿಳಾ ಆಯೋಗ ಅಧಿಕಾರ ಜ್ಯೋತಿ ವಿಚಾರದಲ್ಲೂ ಸ್ಪೀಡ್ ಆಗಿ ಮುಂದುವರೆದಿಲ್ಲ ಏಕೆ ಎಂದು ಪ್ರಶ್ನಿಸಿದರು. 

ಜಿಲ್ಲಾ ಉಸ್ತುವಾರಿ ಸಚಿವರು ಮೂವರನ್ನ ಬಂಧಿಸಿರುವುದಾಗಿ ಹೇಳಿದ್ದಾರೆ. ಅದಲ್ಲ. ಈಡಿಗ ಸಮುದಾಯದೊಂದಿಗೆ ನಿಲ್ಲಬೇಕು. ಬಂಗಾರಪ್ಪನವರು ಹೋದ ಮೇಲೆ ಧ್ವನಿ ಎತ್ತುವವರಿಲ್ಲದಂತಾಗಿದೆ. ಸಮುದಾಯದ ರಾಹಕಾರಣಿಗಳು ಸ್ವಾರ್ಥಿಗಳಾಗಿದ್ದಾರೆ. ಇದನ್ನ ತಿದ್ದಲು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಜಾಗೃತಿ ಮಾಡುವುದಾಗಿ ಹೇಳಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close