ಸುದ್ದಿಲೈವ್/ಶಿವಮೊಗ್ಗ
ಫೆ.08 ರಂದು ಬೆಳಗ್ಗೆ ಸಾಗರ ಟೌನ್ ನ ನಗರೇಶ್ವರ ದೇವಸ್ಥಾನದಲ್ಲಿ (temple) ಯಾರೋ ಕಳ್ಳರು(thieves) ದೇವಿಯ ಕೊರಳಲ್ಲಿದ್ದ ಅಂದಾಜು 30 ಗ್ರಾಂ 570 ಮಿಲಿ ತೂಕದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಾಗರ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0043/2025 ಕಲಂ 454, 457, 380 ಐಪಿಸಿ ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ತನಿಖಾ ತಂಡವು ದಿನಾಂಕಃ 11-02-2025 ರಂದು ಪ್ರಕರಣದ ಆರೋಪಿ ಶಿವಕುಮಾರ, 39 ವರ್ಷ, ಶಿರವಂತೆ ಸಾಗರ ತಾಲ್ಲೂಕು, ಈತನನ್ನು ದಸ್ತಗಿರಿ ಮಾಡಿ, ಆರೋಪಿತನಿಂದ ಅಂದಾಜು ಮೌಲ್ಯ 200000/- ರೂಗಳ 30 ಗ್ರಾಂ 570 ಮಿಲಿ ತೂಕದ ಬಂಗಾರದ ಮಾಂಗಲ್ಯ ಸರವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ* ಅಭಿನಂದಿಸಿರುತ್ತಾರೆ.