![]() |
A bell has been stolen from the Brahma, Vishnu Maheshwar temple at Ragigudda in Shimoga. The 70-year-old bell in the temple was removed during the renovation of the temple. |
ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದ ರಾಗಿಗುಡ್ಡದ ಬ್ರಹ್ಮ, ವಿಷ್ಣು ಮಹೇಶ್ವರ ದೇವಾಲಯದ ಗಂಟೆ ಕಳುವಾಗಿದೆ. ದೇವಸ್ಥಾನದ ಜೀರ್ಣೋಧ್ಧಾರ ನಡೆಯುತ್ತಿದ್ದು ದೇವಾಲಯದಲ್ಲಿದ್ದ 70 ವರ್ಷದ ಗಂಟೆಯನ್ನ ತೆಗೆದಿಡಲಾಗಿತ್ತು.
ಆ ಗಂಟೆ ಈಗ ಕಳುವಾಗಿದೆ. 2023 ರ ಆರಂಭದಲ್ಲಿ ರಾಗಿಗುಡ್ಡದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ದೇವಸ್ಥಾನವನ್ನ ಕೆಡವಿ ಶಿವಾಲಯ ಸ್ಥಾಪಿಸಿ ದೇವಸ್ಥಾನದಲ್ಲಿ ಹೋಟೆಲ್ ರೆಸಾರ್ಟ್ ಮಾಡಲು ಮುಂದಾಗಿತ್ತು. ಆ ವೇಳೆ ರಾಗಿಗುಡ್ಡದಲ್ಲಿ ಜೆಸಿಬಿಯ ಸದ್ದು ಕೇಳುವಂತಾಗಿತ್ತು.
ದೇವಸ್ಥಾನವನ್ನ ಕೆಡವಲು ಮುಂದಾಗಿದ್ದ ಆಗಿನ ಅಧಿಕಾರಿಗಳು ಜೆಸಿಬಿಯ ಬಕೆಟ್ ನಿಂದ 70 ವರ್ಷದ ಹಳೆಯ ಗಂಟೆಯನ್ನ ಒಡೆದು ಕೆಳೆಗೆ ಬೀಳುವಂತೆ ಮಾಡಿದ್ದರು. 100 ಕೋಟಿಯ ಯೋಜನೆ ಇದಾಗಿದ್ದು ಇದಕ್ಕೆ 17 ಕೋಟಿ ಹಣ ಬಿಡುಗಡೆಯಾಗಿತ್ತು.
ಅಟ್ಟಹಾಸವನ್ನೇ ಮೆರೆಯಲಾಗಿತ್ತು. ಕೆಳಕ್ಕೆ ಬಿದ್ದ ಗಂಟೆ ವಿಘ್ನವಾಗಿತ್ತು. 121 ಕೆಜಿಯ ಹಿತ್ತಾಖೆಯ ಗಂಟೆಯನ್ನ ಮೊನ್ನೆ 1 ನೇ ತಾರೀಕು ಕಳುವು ಮಾಡಲಾಗಿದೆ. ಇಲ್ಲಿನ ಪೂಜಾರಿಗಳು ಗಂಟೆಯನ್ನ ಹುಡುಕಲು ಹರ ಸಾಹಸ ಪಟ್ಟಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.