ಸುದ್ದಿಲೈವ್/ಶಿವಮೊಗ್ಗ
ಎರಡು ಗುಂಪುಗಳ ಯುವಕರ ನಡುವೆ ಮಾರಾಮಾರಿಯಾಗಿದೆ. ಮದುವೆಗಾಗಿ ಹೋದ ವೇಳೆ ಪುರಲೆ ಗಣಪತಿ ದೇವಸ್ಥಾನದ ಬಳಿ ಯುವಕರ ಎರಡು ಗುಂಪು ಬಡಿದಾಡಿಕೊಂಡು ಆಟೋ ಮತ್ತು ಮಾರುತಿ ವಾಹನಗಳ ಗ್ಲಾಜುಗಳು ಪೀಸ್ ಪೀಸ್ ಆಗಿದೆ.
ಫೆ.1 ರಂದು ಗುಡ್ಡೇಕಲ್ ದೇವಸ್ಥಾನದಲ್ಲಿ ರಾತ್ರಿ ಮದುವೆ ದಿಬ್ಬಣ ಕಾರ್ಯ ನಡೆದಿದೆ. ರಾತ್ರಿ 12-30 ರ ವೇಳೆಗೆ ಅಶೋಕ್ ಎಂಬ ಯುವಕನ ಮೇಲೆ ರಾಕಿ, ಜೀವ ಮತ್ತು ಸಂದೇಶ್ ಎಂಬುವರು ಹಲ್ಲೆ ಮಾಡಿ ಅಶೋಕ್ ರವರ ಆಟೋ ಗ್ಲಾಜನ್ನ ಒಡೆದಿದ್ದಾರೆ.
ಈ ವೇಳೆ ವಿಜಯ್ ಎಂಬ ಹೊಳೆಬೆನವಳ್ಳಿ ಹುಡುಗ ಅಶೋಕ್ ಎಂಬುವನನ್ನ ಬಜಾವ್ ಮಾಡಲು ಹೋದಾಗ ಆತನ ಮೇಲೂ ಹಲ್ಲೆ ಮಾಡಲಾಗಿದೆ. ಈ ವೇಳೆ ಬಲರಾಮರ ಮಾರುತಿ ಓಮಿನಿಯ ಮುಂದಿನ ಗ್ಲಾಜನ್ನ ಒಡೆದು ಹಾಕಲಾಗಿದೆ. ಪ್ರಕರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.