ಸುದ್ದಿಲೈವ್/ಭದ್ರಾವತಿ
ನಾಳೆ ಭದ್ರಾವತಿಗೆ ಯುವ ಜೆಡಿಎಸ್ ನ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಭೇಟಿ ನೀಡುತ್ತಿರುವ ಬೆನ್ನಲ್ಲೇ ಭದ್ರಾವತಿಯ ಕಾಂಗ್ರೆಸ್ ಘಟಕ ಆಕ್ಷೇಪಿಸಿದೆ. ನಿಖಿಲ್ ಕುಮಾರಸ್ವಾಮಿ ಮೊದಲು ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಅಗಿರುವ ದೌರ್ಜನ್ಯವನ್ನು ಖಂಡಿಸಲಿ ಎಂದು ಟಾಂಗ್ ನೀಡಿದೆ.
ಶಾಸಕರು ಹಾಗೂ ಕೆ.ಆರ್.ಐ.ಡಿ.ಎಲ್ ನ ಅಧ್ಯಕ್ಷರಾದ ಬಿ.ಕೆ. ಸಂಗಮೇಶ್ವರರವರ ಅಭಿವೃದ್ದಿ ಹಾಗೂ ಜನ ಬೆಂಬಲವನ್ನು ಸಹಿಸಿಕೊಳ್ಳಲು ಅಗದೆ ಇರುವ ಜೆ.ಡಿ.ಎಸ್ ಹಾಗೂ ಬಿ.ಜೆ.ಪಿ. ಮುಖಂಡರು ವಿನಾಕಾರಣ ಮಾದ್ಯಮಗಳ ಮೂಲಕ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ. ಶಾಸಕರ ಅಭಿವೃದ್ಧಿಯನ್ನು ಗುರುತಿಸಿ ಜನತೆ ಅವರನ್ನ 4 ಭಾರಿ ಗೆಲ್ಲಿಸಿರುತ್ತಾರೆ.
ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕಿ ಇಲ್ಲದೆ ಸಜ್ಜನ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ. ಶಾಸಕರೊಂದಿಗೆ ಅವರ ಕುಟುಂಬದ ಎಲ್ಲಾ ಸದಸ್ಯರುಪ್ರತಿ ದಿನ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ . ಯಾವುದೇ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿಲ್ಲಾ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದ ವಿಚಾರ. ಯಾರು ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಇಸ್ಪೀಟ್ ಜೂಜು ನೆಡಸಿದರೆಂದು ಸಾರ್ವಜನಿಕರಿಗೆ ತಿಳಿದಿದೆ ಎಂದು ಮಾಜಿ ನಗರ ಸಭೆ ಅಧ್ಯಕ್ಷ ಹಾಲಿ ಸದಸ್ಯ ಚನ್ನಪ್ಪ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಜೆ.ಡಿ ಎಸ್ ಶಾಸಕರು ಅಧಿಕಾರದಲ್ಲಿ ಇದ್ದಾಗ ಅತಿ ಹೆಚ್ಚು ಅಕ್ರಮ ಚಟುವಟಿಕೆ, ಮರಳು ದಂದೆ ಇಸ್ಪೀಟ್ ದಂದೆ ನಡೆಯುತ್ತಿತ್ತು. ಅದು ಈಗಲೂ ಮುಂದುವರೆಯುವುದು ಬೇಡ ಎಂದು ಶಾಸಕರು ಎಲ್ಲಾ ಪೊಲೀಸ್ ಇಲಾಖೆಗೆ ಸ್ಪಷ್ಟ ಸಂದೇಶವನ್ನು ನೀಡಿರುತ್ತಾರೆ ಹಾಗೂ ತಾಲೂಕಿನ ಅಭಿವೃದ್ಧಿಗಾಗಿ ಸರ್ಕಾರದಿಂದ ಅತಿ ಹೆಚ್ಚು ಅನುದಾನ ತಂದು ರಸ್ತೆ, ಚರಂಡಿ ಸಮುದಾಯಭವನಗಳ ನಿರ್ಮಾಣ ಸೇರಿದಂತೆ ಎಲ್ಲಾ ದೇವಸ್ಥಾನದ ಅಭಿವೃದ್ಧಿಗೂ ಸಮಾಜದ ಅಭಿವೃದ್ಧಿಗೂ ಸರ್ಕಾರದಿಂದ ಹೆಚ್ಚು ಹಣವನ್ನು ಕೊಡಿಸುವುದರ ಮೂಲಕ ಎಲ್ಲಾ ಸಮಾಜದ ಅಭಿವೃದ್ಧಿಗೆ ಕಾರಣಭೂತರಾಗಿರುತ್ತರೆ ಎಂದು ದೂರಿದರು.
ಇತ್ತೀಚೆಗೆ ನಡೆದ ಅಕ್ರಮ ಮರಳು ಸಾಗಾಣಿಕೆಯನ್ನು ಹಿಡಿಯುವ ವೇಳೆ, ಶಾಸಕರ ಹೇಳಿಗೆಯನ್ನು ಸಹಿಸದ ರಾಜಕೀಯ ಶತೃಗಳು ಅವರ ಧ್ವನಿಯನ್ನು ತಿರುಚಿ ಶಾಸಕರ ಪುತ್ರ ಬಸವೇಶ ಅಧಿಕಾರಿಗಳಿಗೆ ಅವ್ಯಾಚ್ಯ ಶಬ್ದದಿಂದ ಬೈದಿದ್ದಾನೆ ಎಂದು ಮಾದ್ಯಮದಲ್ಲಿ ಹೇಳಿರುವುದು ಸತ್ಯಕ್ಕೆ ದೂರವಾದ ವಿಚಾರ. ಸ್ವತಃ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯೆ ದೂರವಾಣಿಯಲ್ಲಿ ಯಾರು ಮಾತನಾಡಿರುವುದು ನನಗೆ ಗೊತ್ತಿಲ್ಲಾ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ. ಆದ್ದರಿಂದ ಶಾಸಕರ ಅವದಿಯಲ್ಲಿ ಯಾವುದೇ ಅಕ್ರಮ ಚಟುವಟಿಕೆ , ಇಸ್ಪೀಟ್, ಓ.ಸಿ ನಡೆದಿಲ್ಲಾ ಇದು ಸುಳ್ಳು ಸುದ್ದಿಯನ್ನು ಹಬ್ಬಿಸಲು ಹಾಗೂ ಶಾಸಕರಿಗೆ ಕೆಟ್ಟ ಹಸರು ಬರಲಿ ಎಂದು ಈ ಹೇಳಿಕೆ ನೀಡಿರುವುದು ಖಂಡನೀಯ ಎಂದು ದೂರಿದ್ದಾರೆ.
ಫೆ 14. ರಂದು ಜೆ.ಡಿ.ಎಸ್ ಮುಖಂಡ నిಖಿಲ್ ಕುಮಾರಸ್ವಾಮಿ ಭದ್ರಾವತಿಗೆ ಬರುವರೆಂಬ ಮಾಹಿತಿಯನ್ನು ಜೆಡಿಎಸ್ ಪಕ್ಷ ಪ್ರಚಾರ ಮಾಡುತ್ತಿದೆ ಆದರೆ ನಿಖಿಲ್ ಕುಮಾರಸ್ವಾಮಿ ಮೊದಲು ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಅಗಿರುವ ದೌರ್ಜನ್ಯವನ್ನು ಖಂಡಿಸಲಿ ಅದು ಬಿಟ್ಟು ಸಭ್ಯ ರಾಜಕಾರಣಿ ಬಿ.ಕೆ.ಸಂಗಮೇಶ್ವರ ವಿರುದ್ಧ ಪ್ರತಿಭಟನೆ ಮಾಡಲು ನಿಖಿಲ್ ಕುಮಾರಸ್ವಾಮಿಗೆ ಯಾವ ನೈತಿಕತೆ ಇದೆ. ಎಂದು ಅವರು ಪ್ರಶ್ನಿಸಿದ್ದಾರೆ.