ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗದಲ್ಲಿ ರ‌್ಯಾಪಿಡ್ ಕಂಪನಿಯ ದ್ವಿಚಕ್ರ ವಾಹನಗಳನ್ನ(two wheel) ತಡೆದು ಪೊಲಿಸರಿಗೆ ಒಪ್ಪಿಸುವ ಮೂಲಕ ಆಟೋ ಚಾಲಕರು ನಗರದಲ್ಲಿ ಯುದ್ಧವನ್ನೇ(war) ಸಾರಿದ್ದಾರೆ. ಈ ಬಗ್ಗೆ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣ ವೇದಿಕೆ ಎಸ್ಪಿಗೆ ಮನವಿ ಮಾಡಿ ಇಂತಹ ವೈಟ್ ಬೋರ್ಡ್ ವಾಹನಗಳನ್ನ ಸಂಚರಿಸದಂತೆ ತಡೆಯುವಂತೆ ಆಗ್ರಹಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಬೆಂಗಳೂರು ರ‌್ಯಾಪಿಡ್ ಕಂಪನಿಯ ಓಲೋ, ಊಬರ್‌ಗಳ ಬಳಕೆಯ ಚಾಲನೆಗೆ ತರಲು ಪ್ರಯತ್ನ ನಡೆಯುತ್ತಿದ್ದು, ಪ್ರತಿ ದಿನ ಟ್ಯಾಕ್ಸಿ ಆಟೋ ಚಾಲಕರಿಗೆ ತೊಂದರೆ ನೀಡುತ್ತಿದ್ದಾರೆ. ಇಂದು ವೈಟ್ ಬೋರ್ಡ್‌ನ 5 ಬೈಕುಗಳನ್ನ ಬಳಸಿಕೊಂಡು ರ‌್ಯಾಪಿಡ್ ಕಂಪನಿಯ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಕೆಲಸ ನಿರ್ವಹಿಸುತ್ತಿದೆ.
1)KA-14 EX 8039 2) ΚΑ-14 HB 5026, 3) KA-14 EL 7018, 4) KA-14 EZ 0907, 5) KA-14 EJ 6385 ವಾಹನಗಳನ್ನ ತಡೆದು ಸಂಘಟನೆಯ ಕಾರ್ಯಕರ್ತರು ಜಯನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ವಾಹನವನ್ನ ಬಳಸಿ ಸಾರ್ವಜನಿಕರು ಓಡಾಡಿದರು ಇದು ಕಾನೂನು ಬಾಹಿರ ಮಾತ್ರವಲ್ಲ ಬಡ ಆಟೋ ಮತ್ತು ಟ್ಯಾಕ್ಸಿ ಚಾಲಕರ ಹೊಟ್ಟೆಯ ಮೇಲೂ ಒಡೆಯಲಾಗುತ್ತಿದೆ ಎಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕಳೆದ 10 ವರ್ಷಗಳ ಹಿಂದೆಯೇ ಈ ರೀತಿ ಕಂಪನಿಗಳು ಶಿವಮೊಗ್ಗ ನಗರಕ್ಕೆ ಬಂದು ಈ ರೀತಿ ಎಲ್ಲಾ ಚಾಲಕರಿಗೆ ಮನವೊಲಿಸಿ ಕೆಲಸ ಮಾಡಿ ಮೋಸ ಮಾಡಿ ಹೋಗಿವೆ. ಅಂದಿನ ಜಿಲ್ಲಾಧಿಕಾರಿಗಳು ಇದನ್ನು ಗಮನಿಸಿ ಓಲೋ ಊಬರ್ಸ್ಗಳಿಗೆ ಅವಕಾಶ ನೀಡದಂತೆ ರದ್ದು ಮಾಡಿದ್ದರು. ಆದರೂ ಸಹ ಈ ದ್ವಿಚಕ್ರ ಚಾಹನದ ಟ್ಯಾಕ್ಸಿಗಳು ಪದೇ ಪದೆ ಬಂದು ಕೆಲಸ ನಿರ್ವಹಿಸುತ್ತಿವೆ. ಈಗ ರ‌್ಯಾಪಿಡ್ ಕಂಪನಿಯ ಹೆಸರಿನಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಸಂಘಟನೆ ಆರೋಪಿಸಿದೆ.
ಆದ್ದರಿಂದ ಈ ರೀತಿ ಓಲ್ಲೋ, ಊಬರ್ಸ್ಗಳ ಕಂಪನಿಯ ಹೆಸರಿನಲ್ಲಿ ಕೆಲಸ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಕಂಪನಿಗಳಿಗೆ ಶಿವಮೊಗ್ಗ ನಗರದಲ್ಲಿ ಅವಕಾಶ ಕೊಡಬಾರದಾಗಿ ಮನವಿಯಲ್ಲಿ ಒತ್ತಾಯಿಸಿದೆ. ಜೊತೆ ಪೊಲೀಸ್ ಠಾಣೆಯಲ್ಲಿ ರ‌್ಯಾಪಿಡ್ ಕಂಪನಿಯ ದ್ವಿಚಕ್ರ ವಾಹನದ ವಿರುದ್ಧ ದೂರು ದಾಖಲಿಸಿದೆ.
ಮನವಿ ನೀಡುವ ವೇಳೆ ಸಂಘನೆಯ ರಾಜ್ಯಧ್ಯಕ್ಷ ಸತೀಶ್ (ದೇವು), ಸತೀಶ್, ಗೋಪಿ, ಕಾಂತ, ಶ್ರೀನಿವಾಸ, ಆರ್ ಮೋಹನ್ ಮೊದಲಾದವರು ಮನವಿನೀಡುವ ವೇಳೆ ಉಪಸ್ಥಿತರಿದ್ದರು.