![]() |
The war of the police against the interest demanders is on. A massive attack has taken place under the guidance of Shimoga District Superintendent of Police Mithun Kumar G.K. |
ಸುದ್ದಿಲೈವ್/ಶಿವಮೊಗ್ಗ
ಬಡ್ಡಿದಂದೆ ಕೋರರ ವಿರುದ್ಧ ಪೊಲೀಸರ ಸಮರ ಮುಂದು ವರೆದಿದೆ. ಬಡ್ಡಿದಂಧೆ ಕೋರರ ಹಾವಳಿಯ ವಿರುದ್ಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ.ಕೆ ಅವರ ಮಾರ್ಗದರ್ಶನದಲ್ಲಿ ಭರ್ಜರಿ ದಾಳಿ ನಡೆದಿದೆ.
ಗೋಪಿಶೆಟ್ಟಿಕೊಪ್ಪದಲ್ಲಿ ನೂತನ ಗೃಹಪ್ರವೇಶ ಮಾಡಿದ್ದ, ದಾಮೋದರ್, ಯಾನೆ ಬಡ್ಡಿ ಕುಮಾರ ಸನ್ ಮುನಿಸ್ವಾಮಿ ಅವರ ಮನೆಯ ಮೇಲೆ ತುಂಗ ನಗರ ಪೊಲೀಸ್ ಇನ್ ಸ್ಪೆಕ್ಟರ್ ಗುರುರಾಜ್ ಕೆಟಿ ಅವರ ನೇತೃತ್ವದ ದಾಳಿ ಬೆಳ್ಳಿಗ್ಗೆ 6 ಗಂಟೆಯಿಂದಲೇ ನಡೆದಿದೆ. ದಾಳಿಯಲ್ಲಿ ಪೊಲಿಸರಿಗೆ ಭರ್ಜರಿ ಬೇಟೆನೆ ಲಭ್ಯವಾಗಿದೆ. ಪಿಎಸ್ಐ ಶಿವಪ್ರಸಾದ್ ಮತ್ತು ಮಂಜಮ್ಮನವರ ನೇತೃತ್ವದಲ್ಲಿ ನಡೆದ ದಾಳಿ, ಕೈಕಟ್ಟಿ ನಿಂತಿರುವ ಬಡ್ಡಿ ಕುಮಾರ್
39 ಲಕ್ಷ ರೂ. ನಗದು, 26 ದ್ವಿಚಕ್ರವಾಹನ, 24 ಮೊಬೈಲ್ ಒಂದು ಲ್ಯಾಪ್ ಟ್ಯಾ ಮತ್ತು ಡಿಸೇರ್ ಕಾರು ಹಲವಾರು ಖಾಲಿ ಚೆಕ್ ಗಳು ವಶಕ್ಕೆ ಪಡೆಯಲಾಗಿದೆ. ದಾಳಿಯಲ್ಲಿ ಪಿಎಸ್ಐ ಶಿವಪ್ರಸಾದ್, ಪಿಎಸ್ಐ ಮಂಜಮ್ಮ, ಮತ್ತು ಕಿರಣ್ ಮೋರೆ, ರಾಜು, ಅರುಣ್ ಸೇರಿದಂತೆ 20 ಜನ ಸಿಬ್ಬಂದಿಗಳು ಭಾಗಿಯಾಗಿದ್ದರು.
ಆರೋಪಿ ದಾಮೋದರ್ ಅವರನ್ನ ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತ್ರರೋರ್ವರ ದೂರಿನ ಆಧಾರದಲ್ಲಿ ದಾಳಿ ನಡೆದಿದೆ. ಈ ಹಿಂದೆ ಮಾಜಿ ನಗರ ಸಭಾ ಸದಸ್ಯರೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ತುಂಗ ನಗರ ಪಿಐ ಗುರುರಾಜ್ ಕೆ.ಟಿ ನೇತೃತ್ವದಲ್ಲಿ ದಾಳಿ ನಡೆದು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಸೀಜ್ ಮಾಡಿರುವ 26 ದ್ವಿಚಕ್ರ ವಾಹನಗಳು
ಇಂದು ಹಲವು ಠಾಣ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ ಎಂಬ ವಿಷಯವೂ ಸಹ ಕೇಳಿ ಬರುತ್ತಿದೆ.