BJP Bhadravati unit taluk president Dharmaprasad protested in front of Tehsildar's office against MLA BK Sangameshwar's son Basavesh, who threatened a woman officer with unintelligible words yesterday.
ಸುದ್ದಿಲೈವ್/ಶಿವಮೊಗ್ಗ
ನಿನ್ನೆ ಮಹಿಳಾ ಅಧಿಕಾರಿ ವಿರುದ್ಧ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪುತ್ರ ಬಸವೇಶ್ ವಿರುದ್ಧ ಬಿಜೆಪಿ ಭದ್ರಾವತಿ ಘಟಕದ ತಾಲೂಕು ಅಧ್ಯಕ್ಷ ಧರ್ಮಪ್ರಸಾದ್ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದೆ.
ಭದ್ರಾವತಿಯಲ್ಲಿ ನಿನ್ನೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಜ್ಯೋತಿ ಅವರು ಅಕ್ರಮ ಗಣಿಗಾರಿಕೆ ವಿರುದ್ಧ ದಾಳಿ ಮಾಡಲು ಹೋದಾಗ ಮಹಿಳ ಅಧಿಕಾರಿಗಳನ್ನ ಶಾಸಕರ ಪುತ್ರ ಬಸವೇಶ್ ಅವ್ಯಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ. ಇದನ್ನ ಖಂಡಿಸಿದ ಬಿಜೆಪಿ ಇಂದು ಭದ್ರಾವತಿಯಲ್ಲಿ ಬಸವೇಶ್ ರನ್ನ ಬಂಧಿಸಿ ಅಧಿಕಾರಿಗಳಿಗೆ ರಕ್ಷಣೆ ನೀಡಲು ಆಗ್ರಹಿಸಿದ್ದಾರೆ.
ಅಧಿಕಾರಿಗಳ ಪ್ರಾಣ ಹಿಂಡಿತ್ತಿರುವ, ಓಸಿ ಆಡಿಸುವ, ಶಾಸಕ ಸಂಗಮೇಶ್ವರ ಅವರ ಪುತ್ರ ಬಸವೇಶ್ ಗೆ ದಿಕ್ಕಾರ, ಕಾಂಗ್ರೆಸ್ ತೊಲಗಿಸಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.