ಅಟಲ್ ಜಿಯಂತಹ ವ್ಯಕ್ತಿತ್ವ ರಾಜ್ಯದ ಬಿಜೆಪಿ ನಾಯಕರು ಬೆಳೆಸಿಕೊಳ್ಳಲ್ವಾ ಎಂಬ ಮಾಧ್ಯಮದ ಪ್ರಶ್ನೆಗೆ ಬಿಜೆಪಿ ಮಹಿಳಾ ಮೋರ್ಚಾದ ಉತ್ತರವೇನು?

Atal Bihari Vajpayee's centenary program was held from January 14 to February 14. Feb. State Secretary of BJP Mahila Morcha Lakshmi Ashwin Gowda said that it is being conducted under the name of Virasat from 14th to March 14th.


ಸುದ್ದಿಲೈವ್/ಶಿವಮೊಗ್ಗ

ಅಟಲ್ ಬಿಹಾರಿ ವಾಜಪೇಯಿ ಅವರ  ಶತಮಾನೋತ್ಸವ ಕಾರ್ಯಕ್ರಮವನ್ನ ನಡೆದಿದ್ದು ಜ.14 ರಿಂದ ಫೆ.14 ರ ವರೆಗೆ ಆಚರಿಸಲಾಗಿದೆ. ಫೆ. 14 ರಿಂದ ಮಾ.14 ರವರೆಗೆ ವಿರಾಸತ್ ಎಂಬ ಹೆಸರಿನ ಅಡಿ ನಡೆಸಲಾಗುತ್ತಿದೆ ಎಂದು  ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ದೊಡ್ಡ ಆರ್ಥಿಕ ವ್ಯವಸ್ಥೆ, ಬಲಿಷ್ಠ ಭಾರತವಾಗಿ ನಮ್ಮ ದೇಶ ಬೆಳೆದಿದೆ. ಅಟಲ್ ಜಿಯವರ ವಿಡಿಯೋ, ಫೋಟೊ ತುಣುಕನ್ನ ಇಟ್ಟುಕೊಂಡವರು, ಕವನ ಬರೆದವರು, ಪತ್ರಬರೆದವರ ಮನೆಗೆ ನಾವುಗಳು ಭೇಟಿ ನೀಡಿ ಅವರನ್ನ‌ ಸನ್ಮಾನಿಸಲಾಗುವುದು ಎಂದರು. 

ಅಂತಹವರನ್ನ ಗುರುತಿಸಿ ಸನ್ಮಾನ, ವಾಜಪೇಯಿರವನ್ನ ಸನ್ನಾನ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಫೆ.14 ರಿಂದ  ಮಾ.14 ರ ವರೆಗೆ ವಿರಾಸತ್ ಸಮ್ಮೇಳನ್ನ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಅಟಲ್ ವಿಚಾರವನ್ನ ವಿರಾಸತ್ ಸಮ್ನೇಳನದಲ್ಲಿ ಹಂಚಿಕೊಳ್ಳಲಾಗುವುದು. 

ಡಿ.25 ಸುಶಾನ ದಿನಾಚರಣೆ ಎಂದು ಅಟಲ್ ಜಿ ಅವರ ಹುಟ್ಟುಹಬ್ಬವನ್ನ ಆಚರಿಸುತ್ತಿದೆ. ಸೋಷಿಯಲ್ ಮೀಡಿಯದಲ್ಲಿ ಅಟಲ್ ಜಿ ಫೊಟೊವನ್ನ ಫೆ.9 ರಿಂದ ಆರಂಭವಾಗಿದೆ. ಎಲ್ಲಿ? ಮತ್ತು ಹೇಗೆ ಎಂಬ ವಿವರಣೆಯೊಂದಿಗೆ ನಡೆಯಲಿದೆ. 

ರಾಜ್ಯದ ನಾಯಕರು ಅವರ ವ್ಯಕ್ತಿತ್ವವನ್ನ ತಿಳಿದುಕೊಂಡಿದ್ದರೆ ಒಳ್ಳೆಯದು ಎಂದ ಅವರು ನಾನು ಅವರಿಗೆ ಹೇಳುವಷ್ಟು ದೊಡ್ಡವಳಲ್ಲ ಎಂದು ಇತ್ತೀಚೆಗೆ ನಡೆದ ರಾಜಕೀಯ ಬೆಳೆವಣಿಗೆ ಬಗ್ಗೆ ಮಾರ್ಮಿಕವಾಗಿ ನುಡಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close