ಬೀದಿಯಲ್ಲಿ ಹುಟ್ಟುಹಬ್ಬ ಆಚರಣೆ, ದಾರಿ ಬಿಡ್ರಯ್ಯ ಎಂದಿದ್ದಕ್ಕೆ ರಾದ್ದಾಂತ ನಡೆಸಿದ ಬರ್ತಡೇ ಬಾಯ್ಸ್!

 

In Shimoga, the road traffic has become chaotic as all the celebrations have come to the streets. There is no problem if you practice the practice even if you leave the path. Birthday celebration caused traffic jam.  incident was recorded in Tunga Nagar.

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಆಚರಣೆಗಳೆಲ್ಲಾ ಬೀದಿಗೆ ಬಂದ ಕಾರಣ ರಸ್ತೆ ಸಂಚಾರಗಳು ಅಸ್ತವ್ಯಸ್ಥಗೊಂಡಿದೆ. ಹೋಗಲಿ ದಾರಿ ಬಿಟ್ಟಾದರೂ ಆಚರಣೆ ಮಾಡಿಕೊಂಡರೆ ಏನೂ ಸಮಸ್ಯೆ ಇರಲ್ಲ. ದಾರಿ ಬಿಡ್ರಪ್ಪ ಎಂದರೆ ದಾದಾಗಿರಿನೇ ನಡೆಸಿದ ಘಟನೆ ತುಂಗ ನಗರದಲ್ಲಿ ದಾಖಲಾಗಿದೆ.

ಫೆ.16ರಂದು ರಾತ್ರಿ ರಾತ್ರಿ 9-30 ಗಂಟೆ ಸುಮಾರಿಗೆ ಸೂಳೆಬೈಲಿನ ಹಬೀದ್ ರವರ ಮನೆಯ ಮುಂದೆ ರಸ್ತೆಯ ಮೇಲೆ ಬೈಕ್ಯಳನ್ನು ಅಡ್ಡ ಇಟ್ಟುಕೊಂಡು ಕೆಲವರು ಹುಟ್ಟು ಹಬ್ಬವನ್ನ ಆಚರಿಸುತ್ತಿದ್ದರು. ಆಸ್ಪತ್ರೆಗೆ ತೆರಳಿದ್ದ ಮುನಾವರ್ ಪಾಷಾ ಎಂಬುವರು ಮನೆಗೆ ಹೋಗುವಾಗ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. 

ಹಬೀದ್, ಸಾಧಿಕ್, ಹಬೀದ್ ನ ತಂದೆ ಬಾಷಾ, ಹಾಗೂ ಇತರರು ಸೇರಿಕೊಂಡು ಹುಟ್ಟುಹಬ್ಬದ  ಕೇಕ್ ಕಟ್ ಮಾಡುತ್ತಿದ್ದಾಗ ಮುನಾವರ್ ಪಾಷಾ ರಸ್ತೆ ಮಧ್ಯದಲ್ಲಿ ಕೇಕ್ ಕಟ್ ಮಾಡುತ್ತಾ ಇದ್ದೀರಲ್ಲಾ ಸೈಡ್ ನಲ್ಲಿ ಅಥವಾ ಮನೆಯೊಳಗೆ ಹೋಗಿ ಕೇಕ್ ಕಟ್ ಮಾಡಿ ಅಂತಾ ಹೇಳಿದ್ದಷ್ಟೆ.

ಹೇಳಿ ಹೀಗೆ ಮುಂದೆ ಸಾಗುತ್ತಿದ್ದಂತೆ  ಹಬೀದ್, ಸಾಧಿಕ್, ಹಬೀದ್ ನ ತಂದೆ ಬಾಷಾ, ಶಾಹೀದ್ ಇವರುಗಳು ಪಾಷಾರನ್ನ ಅಡ್ಡಗಟ್ಟಿ' ನಿನ್ಯಾರೂ ಹೇಳೋದಕ್ಕೆ,  ತಿ* ಮುಚ್ಚಿಕೊಂಡು ಹೋಗೋದ ತಾನೇ ಎಂದು ಅವಾಚ್ಯವಾಗಿ ಬೈಯ್ದಿದ್ದಾರೆ.  ಹಲ್ಲೆ ನಡೆಸಿ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ.  ತಪ್ಪಿಸಿಕೊಂಡಾಗ ಚಾಕು ಪಾಷಾರ ಎಡಗಣ್ಣಿನ ಹತ್ತಿರ ತಾಗಿ ರಕ್ತ ಗಯವಾಗಿದೆ.

ಪಾಷಾರವರು ಹೆದರಿ ಮನೆಯೊಳಗೆ ಹೋಗಿ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ಆದರೂ ಬಿಡದ ಗ್ಯಾಂಗ್ ಮನೆ ಹತ್ತಿರ ಬಂದು ಜೀವಬೆದರಿಕೆ ಹಾಕಿದ್ದಾರೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close