ಆಶ್ರಯ ಸಮಿತಿಗೆ ಸರ್ಕಾರಿ ನೇಮಕಗೊಂಡ ನಾಲ್ವರು ಅಧಿಕಾರ ಸ್ವೀಕಾರ

The government has appointed four members to the Urban Ashraya Committee today, as Yamuna Rangegowda, Manjunath Babu, Abdul Muhib, K Laxman took office in the City Corporation Hall.

ಸುದ್ದಿಲೈವ್/ಶಿವಮೊಗ್ಗ

ನಗರ ಆಶ್ರಯ ಸಮಿತಿಗೆ ಸರ್ಕಾರ ಇಂದು ನಾಲ್ವರನ್ನ ನೇಮಿಸಿದ್ದು ಅದರಂತೆ ಇಂದು ಯಮುನಾ ರಂಗೇಗೌಡ, ಮಂಜುನಾಥ ಬಾಬು, ಅಬ್ದುಲ್ ಮುಹೀಬ್, ಕೆ ಲಕ್ಷ್ಮಣ್ ಅವರು ನಗರ ಪಾಲಿಕೆ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು. 

ಮೊದಲಿಗೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್, ಬಹಳಷ್ಟು ಜನ ಇದ್ದರೂ ನಾಲ್ವರನ್ನ ಆಯ್ಕೆ ಮಾಡಲಾಗಿದೆ ಎಂದರೆ ಒಖ್ಳೆ ಕೆಲಸ ಮಾಡುತ್ತೀರಿ ಎಂದು ಗುರುತಿಸಿ ಸರ್ಕಾರ ನೇಮಿಸಿದೆ. ಆಶ್ರಯ ಮನೆಗಳ ಬಗ್ಗೆ ಮೂಲಭೂತ ಸೌಕರ್ಯದ ಬಗ್ಗೆ ಗುರುತಿಸಿ ಕೆಲಸ ಮಾಡಿ ಎಂದು ಆಶೀಸಿದರು.

ಹೆಚ್ ಸಿ ಯೋಗೀಶ್ ಮಾತನಾಡಿ, 652 ಮನೆಗಳನ್ನ ಆಶ್ರಯ ಸಮಿತಿ ನೀಡಲಾಗುತ್ತಿದೆ 2004 ರಲ್ಲಿ ಮನೆ ಕೊಟ್ಟಿರುವುದು 2017 ರಲ್ಲಿ ಅರ್ಜಿ ಕರೆದಿದ್ದು ಮತ್ತು ಮಗದೊಮ್ಮೆ ಮನೆ ಹಂಚಲಾಗುತ್ತಿದೆ ಎಂದರೆ ಕಾಂಗ್ರೆಸ್ ಸರ್ಕಾರ. 652 ಮನೆ ಹಂಚಲು ಹಬ್ಬದ ರೀತಿಯಲ್ಲಿ ಹಂಚಲು ಯೋಚಿಸಲಾಗುತ್ತಿದೆ ಎಂದು ತಿಳಿಸಿದರು. 

2282 ಮನೆ ಹಂಚಿಕೆ ಬಾಕಿಯಿದೆ. ಸರ್ಕಾರದ ಜೊತೆ ಸಚಿವ ಜಮೀರ್ ಮತ್ತು ಪಾಲಿಕೆಯೊಂದಿಗೆ ಹೆಜ್ಜೆ ಹಾಕಿ 3000 ಮನೆಗಳನ್ನ 2028 ರಲ್ಲಿ ಹಂಚಿಕೆ ಪೂರ್ಣಗೊಳಿಸೋಣ ಎಂದರು. 

ನೂತನ ಸದಸ್ಯೆ ಯಮುನಾ ರಂಗೇಗೌಡ ಮಾತನಾಡಿ, ಆಶ್ರಯ ಸಮಿತಿಗೆ ಆಯ್ಕೆಯಾದ ನಂತರ ಜವಬ್ದಾರಿ ಹೆಚ್ಚಾಗಿದೆ. ಸಾರ್ವಜನಿಕರ ಕುಂದು ಕೊರತೆ ನಮ್ಮ ವಾರ್ಡ್ ನಲ್ಲಿದೆ. ಜವಬ್ದಾರಿಯನ್ನ ಸರಿಯಾಗಿ ನಿಬಾಯಿಸಿ ಜನರ ಪ್ರೀತಿಗೆ ಪಾತ್ರರಾಗುತ್ತೇವೆ ಎಂದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close