ಮೈಸೂರಿನಲ್ಲಿ ಗೂಂಡಾ ಮುಸ್ಲೀಂರನ್ನ ಬಂಧಿಸುವಂತೆ ಬಿಜೆಪಿ ಯುವಮೋರ್ಚಾ ಮನವಿ

In Mysore, the district BJP has submitted a request to the state home department through Yuva Morcha SP, condemning the arrest of a young man who had posted on social media that the BJP had won in Delhi.


ಸುದ್ದಿಲೈವ್/ಭದ್ರಾವತಿ

ಮೈಸೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ದೆಹಲಿಯಲ್ಲಿ ಬಿಜೆಪಿ ಗೆದ್ದಿದ್ದಕ್ಕೆ ಪೋಸ್ಟ್ ಹಾಕಿದ್ದ ಯುವಕನನ್ನ ಬಂಧಿಸಿರುವುದನ್ನ‌ ಖಂಡಿಸಿ  ಜಿಲ್ಲಾ ಬಿಜೆಪಿ ಯುವಮೋರ್ಚಾ ಎಸ್ಪಿಯವರ ಮೂಲಕ ರಾಜ್ಯ ಗೃಹ ಇಲಾಖೆಗೆ ಮನವಿ ಸಲ್ಲಿಸಿದೆ. 

ಗಲಭೆ ಸೃಷ್ಟಿಸಿ, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದ ಮುಸ್ಲಿಂ ಗೂಂಡಾಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಆಗ್ರಹಿಸಲಾಗಿದೆ. 

ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ  ಸಿದ್ದರಾಮಯ್ಯನವರ ತವರು ಜಿಲ್ಲೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಲ್ಯಾಣಗಿರಿ ಬಡಾವಣೆಯ ಯುವಕನೊಬ್ಬ ಹಾಕಿದ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಸಾಮಾಜಿಕ ಸ್ವಾಸ್ಥ್ಯವನ್ನೇ ಕೆಡಿಸಿದೆ. 

ದೆಹಲಿಯಲ್ಲಿ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಸುರೇಶ್ ಎಂಬಾತ ಪೋಸ್ಟ್ ಮಾಡಿದ್ದ. ಉದಯಗಿರಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿರುತ್ತಾರೆ.

ಸುರೇಶ್‌ನನ್ನು ಬಂಧಿಸಿದ ನಂತರವೂ ಕ್ಷುಲ್ಲಕ ವಿಚಾರವನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡಿ ಗಲಭೆ ಸೃಷ್ಟಿಸುವಂತಹ ಕೆಲಸವನ್ನು ಠಾಣೆಯಲ್ಲಿ ನೆರೆದಿದ್ದ ಮುಸ್ಲಿಂ ಗೂಂಡಾಗಳು ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿ ಹಾಗೂ ಪೊಲೀಸ್ ಕಾರ್‌ಗಳ ಮೇಲೂ ಕಲ್ಲು ತೂರಾಟ ನಡೆಸಿ ಗೂಂಡಾವರ್ತನೆ ಮೆರೆದಿದ್ದಾರೆ. 

ಕಾನೂನು ರಕ್ಷಕರಾದ ಪೋಲೀಸ್ ಮೇಲೆ ಮುಸ್ಲಿಂ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಇದನ್ನು ಖಂಡಿಸಿರುವ ಬಿಜೆಪಿ ಯುವಮೋರ್ಚಾ  ಪ್ರಸ್ತುತ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸಾರ್ವಜನಿಕರಿಗೆ ಇನ್ನೇಗೆ ರಕ್ಷಣೆ ನೀಡುತ್ತದೆ ಎನ್ನುವುದೇ ಜನ ಸಾಮಾನ್ಯರ ಪ್ರಶ್ನೆಯಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

ಯುವಮೋರ್ಚಾದ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಕುಕ್ಕೆ ಉಪಾಧ್ಯಕ್ಷರಾದ ಸತೀಶ್ ರಾಮೇನಕೊಪ್ಪ, ಧೃವಕುಮಾ‌ರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದರ್ಶನ್ ಆರ್.ವಿ, ಶಿವಮೊಗ್ಗ ನಗರ ಅಧ್ಯಕ್ಷರಾದ ರಾಹುಲ್ ಪಿ. ಬಿದರೆ, ಅನಿಲ್ ಸಂತಕಡೂರು, ಹರಿಕೃಷ್ಣ, ಧೀನ್ ದಯಾಳು, ಮಾಲ್ತೇಶ್ ಮಹಿಳಾ ಮೋರ್ಚಾದ ಸುರೇಖಾ ಮುರುಳೀಧರ್, ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close