ಮೊದಲು ಎಸ್ ಎಸ್ ಎಲ್‌ಸಿ ಪರೀಕ್ಷೆ ಹೇಗೆ ನಡೆಯುತ್ತಿತ್ತೋ ಹಾಗೆ ಈ ಬಾರಿಯೂ ನಡೆಯಲಿದೆ-ಮಧು ಬಂಗಾರಪ್ಪ


The SSLC exam will be conducted in the same manner as before. Education Minister Madhu Bangarappa clarified that there are no grace marks here.

ಸುದ್ದಿಲೈವ್/ಶಿವಮೊಗ್ಗ

ಎಸ್ ಎಸ್ ಎಲ್ ಸಿ ಪರೀಕ್ಷೆ ಮೊದಲು ಏನಿತ್ತು, ಅದೇ ರೀತಿ  ನಡೆಸಲಾಗುವುದು. ಇಲ್ಲಿ ಗ್ರೇಸ್ ಮಾರ್ಕ್ಸ್ ಇರೂದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿಕ್ಕಿ ನಿಲ್ಲಿಸಲಾಗಿದೆ.‌ಅನೇಕ ದೋಷಗಳು ಕಂಡು ಬಂದ ಹಿನ್ನಲೆ ಹಾಗೂ ದೂರು ಬಂದ ಕಾರಣಕ್ಕೆ ಶಾಲೆಯಲ್ಲಿ ಮಕ್ಕಳಿ್ಎ ನಿಲ್ಲಿಸಲಾಗಿದೆ ಎಂದರು. 

ಹಿಜಾಬ್ ಕುರಿತು ಕೋರ್ಟ್ ನಲ್ಲಿ ಇರುವುದರಿಂದ ಅದರ ಬಗ್ಗೆ ಏನೂ ಮಾತನಾಡಲ್ಲ‌. ಅದರ ಬಗ್ಗೆ ಚರ್ಚೆ ಬೇಡ ಎಂದ ಸಚಿವರು ಆಶ್ರಯ ಬಡಾವಣೆ ಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.  ಮುಂದೆ ಶಾಶ್ವತವಾಗಿ ಮೂಲಭೂತ  ವ್ಯವಸ್ಥೆ ಮಾಡಬೇಕಿದೆ. ಸಚಿವ ಜಮೀರ್ ಅಹಮದ್ ರವರು ಬರುತ್ತಾರೆ. ಅವರಿಗೆ ಅಲ್ಲಿನ ಮೂಲಭೂತ ಸೌಕರ್ಯದ ಬಗ್ಗೆ ಮನವಿ ಮಾಡಲಾಗುವುದು.

ನಮ್ಮ ಇಲಾಖೆಯಲ್ಲಿ ಶಿಕ್ಷಕರ ನೇಮಕ ಮಾಡಬೇಕಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಕ್ಕೆ ಈಗಾಗಲೇ ಸಿದ್ದತೆ ನಡೆಸಲಾಗುತ್ತಿದೆ. ಈಗ 1.500 ಕೋಟಿ ರೂ ನಮ್ಮ ಶಿಕ್ಷಣ ಇಲಾಖೆಗೆ ನೀಡಲಾಗಿದೆ ಎಂದು ತಿಳಿಸಿದರು. 

ಅತಿಥಿ ಶಿಕ್ಷಕರ ಸಂಬಳ ಯಾವುದು ನಿಲ್ಲಿಸಿಲ್ಲ. ಕೆಲ ತಾಂತ್ರಿಕ ಸಮಸ್ಯೆಯಿಂದ ಸಂಬಳ‌ ನಿಲ್ಲಿಸಲಾಗಿತ್ತು.  ಈಗ ನಿನ್ನೆ ಸಚಿವ ಸಂಪುಟದ ನಂತರ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಬಜೆಟ್ ನ್ನ ಶಿವಮೊಗ್ಗ ಜಿಲ್ಲೆಗೆ ವಿಶೇಷವಾಗಿ ಕೆಲ ಯೋಜನೆಗಳನ್ನು ಕೇಳಲಾಗಿದೆ. ಈ ಕುರಿತು ಸಿಎಂ ಜೊತೆ ನಡೆಸಲಾಗಿದೆ. ಇನ್ನೂ ಬಜೆಟ್ ಗೆ ಸಮಯವಿರುವುದರಿಂದ ಮತ್ತೆ ಅನುದಾನ ಕೇಳಲಾಗುವುದು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close