ಬಂಗಾರ ಖರೀದಿಸಲು ಬಂದ ಬುರ್ಕಾಧಾರಿಗಳು ಪೊಲೀಸರ ಅತಿಥಿಯಾಗಿದ್ದು ಹೇಗೆ?

Two women who had come to a gold shop in Shimoga's Gandhi Bazaar were caught trying to show off their skills. Both are now guests of the police.


ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿರುವ ಬಂಗಾರದ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು ಕೈಚಳಕ ತೋರಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಇಬ್ವರೂ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಗಾಂಧಿ ಬಜಾರ್ ನಲ್ಲಿ ಸದಾಜಿ ಸೋಗ್ ಮಲ್ ಜಿ ಜ್ಯುವೆಲ್ಲರಿ ಶಾಪ್ ಗೆ ಬಂದಿದ್ದ ಇಬ್ಬರು ಬುರ್ಕಾಧಾರಿ ಮಹಿಳೆಯರು ಚಿನ್ನಾಭರಣದ ಖರೀದಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕೈಚಳಕ ತೀರಲು ಹೋಗಿ 15 ಗ್ರಾಂ ಬೆಲೆಯ ಚಿನ್ನಾಭರಣವನ್ನ ಎಗುರಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ. 


ಸಿಕ್ಕಿಬಿದ್ದಿದ್ದು ಹೇಗೆ?

ಅಂಗಡಿಯಲ್ಲಿದ್ದ ಆಭರಣಗಳಿಗೆ ಟ್ಯಾಗ್ ಮಾಡಲಾಗುತ್ತದೆ. ಈ ಟ್ಯಾಗ್ ಗಳನ್ನ ಮಾಲೀಕ ಕಿರಣ್ ಶಾ ಪ್ರಿಂಟೆಂಡ್ ಮಾಡಿಸಿ ಟ್ಯಾಗ್ ಮಾಡಿದ್ದರು. ಯಾವಾಗ 15 ಗ್ರಾಂ ಒರಿಜಿನಲ್ ಚಿನ್ನಾಭರಣವನ್ನ ಎತ್ತಿ  ನಕಲಿ ಬಂಗಾರವನ್ನ ಆ ಸ್ಥಳದಲ್ಲಿರಿಸಿ ಕೈಯಲ್ಲಿ ಬರೆದ ಟ್ಯಾಗ್ ನ್ನ ಟ್ರೇ ನಲ್ಲಿ ಇಟ್ಟು ವಾಪಾಸ್ ಆಗುವ ವೇಳೆ ಮಾಲೀಕರು ಮಹಿಳೆಯರ ಅಡ್ರೆಸ್ ಪಡೆದಿದ್ದಾರೆ. 

ಆರ್ ಎಂ ಎಲ್ ನಗರದ ಅಡ್ರೆಸ್ ಹೇಳಿದ ಮಹಿಳೆಯರು ಇನ್ನೇನು ಅಂಗಡಿಯ ಹೊರಗೆ ಹೆಜ್ಜೆ ಇಡ್ತಾರೆ ಆಗ 112 ಗೆ ಮಾಲೀಕರು ಕರೆ ಮಾಡಿದ್ದಾರೆ. ಬುರ್ಕಾಧಾರಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಸಿಸಿ ಟಿವಿ ಫೂಜೇಜ್ ನಲ್ಲಿ ಮಹಿಳೆಯರು ಅಸಲಿ ಬಂಗಾರದ ಸರವನ್ನ ಬುರ್ಕಾದ ತೋಳಿನಲ್ಲಿ ಎಳೆದುಕೊಂಡಿದ್ದು ಸಿಸಿ ಟಿವಿಯಲ್ಲಿ ಪತ್ತೆಯಾಗಿದ್ದರಿಂದ ಮಾಲೀಕರು ಸಮಯ ಪ್ರಜ್ಞೆಯಿಂದ ಬುರ್ಕಾಧಾರಿಗಳನ್ನ ಪೊಲೀಸರ ಅತಿಥಿಯನ್ಬಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ನಿಗರ್ ಸುಲ್ತಾನ್ ಮತ್ತು ನೂರೈನ್ ಪರಿ ಎಂಬ ಇಬ್ವರು ಮಹಿಳೆಯರ ವಿರುದ್ಧ ನಂತರ ಜ್ಯುವೆಲರಿ ಶಾಪ್ ಮಾಲೀಕರ ಸಂಘದ ಜೊತೆ ಸಮಾಲೋಚನೆ ನಡೆಸಿದ ಕಿರಣ್ ಶಾ ದೂರು ನೀಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close