ಮೊಬೈಲ್ ಬಳಸಿ KSRTC ಬಸ್ ಚಲಾಯಿಸುತ್ತಿರುವ ವಿಡಿಯೋ ವೈರಲ್

A video of the driver of a government transport bus from Sagar Taluk Talaguppa in Shimoga District to Sagar has gone viral. Due to this, it has been reported that the life of the passengers was put at risk in violation of the government order and there was negligence


ಸುದ್ದಿಲೈವ್/ಸಾಗರ  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ದಿಂದ ಸಾಗರಕ್ಕೆ ತೆರೆಳುತ್ತಿರುವ ಸರ್ಕಾರಿ ಸಾರಿಗೆ ಬಸ್ ನ ಚಾಲಕ ಮೊಬೈಲ್ ಬಳಸಿ ಚಾಲನೆ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇದರಿಂದ  ಸರ್ಕಾರಿ ಆದೇಶ ಉಲ್ಲಂಘಿಸಿ ಪ್ರಯಾಣಿಕರ ಪ್ರಾಣವನ್ನ ಅಪಾಯಕ್ಕೆ ತಳ್ಳಿ ನಿರ್ಲಕ್ಷತನ ಮೆರೆದಿರುವ ಘಟನೆ ವರದಿಯಾಗಿದೆ‌  

ಕಾರವಾರ ದಿಂದ ಭದ್ರಾವತಿಗೆ ಹೋಗುವ KSRTC ಬಸ್ ಚಾಲಕ ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಸ್ ಚಲಾಯಿಸುತ್ತಿರುವ ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. 


ಇಂದು ಬೆಳಗ್ಗೆ ಸುಮಾರು  9-15 ಕ್ಕೆ ತಾಳಗುಪ್ಪದಿಂದ ಹೊರಟಿದ್ದು " KA 17 F 1747 " ಬಸ್ ಚಾಲಕ ನಿರಂತರವಾಗಿ ಒಂದೇ ಕೈಯಲ್ಲಿ ಸ್ಟೇರಿಂಗ್ ಹಿಡಿದು ಸರ್ಕಾರಿ ಸಾರಿಗೆ ಬಸ್ ಚಾಲನೆ ಮಾಡುತ್ತಿರುವ ಚಾಲಕನ ವಿರುದ್ಧ ಪ್ರಜ್ಞಾವಂತ ಸಾಮಾಜಿಕ ಜಾಲತಾಣ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಬಸ್ಸಿನಲ್ಲಿರುವ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದೂ, ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಹಾಗೂ ಸರ್ಕಾರದ ಸಾರಿಗೆ ಅಧಿಕಾರಿಗಳು ಪ್ರಯಾಣಿಕರ ಜೀವ ಜೀವನ ಜೊತೆ ಚಲ್ಲಾಟವಾಡುತ್ತಿರುವುವುದಾಗಿ ಆರೋಪಿಸಲಾಗುತ್ತಿದೆ.  ಸದರಿ ಸರ್ಕಾರಿ ಬಸ್ ಚಾಲಕನ ವಿರುದ್ಧ ಸೇವೆಯಿಂದ ಅಮಾನತ್ತು ಆದೇಶ ಹೊರಡಿಸಿ  ಇನ್ಮುಂದೆ ಇಂತಹ ಪ್ರಕರಣಗಳು ಜರುಗುದಂತೆ ಕ್ರಮಕ್ಕೆ ಸರ್ಕಾರ ಆದೇಶಿಸಲಿ ಎಂಬ ಒತ್ತಾಯವೂ ಕೇಳಿ ಬರುತ್ತಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close