ನದಿಯದ ದಡದಲ್ಲಿ ಅನಾಮಧೇಯ ಶವ ಪತ್ತೆ

An anonymous headless body was found in a decomposed state on the banks of river Tunga in Bedarhosahalli, Shimoga taluk.


ಸುದ್ದಿಲೈವ್/ಶಿವಮೊಗ್ಗ

ತಲೆಯಿಲ್ಲದ ಅನಾಮಧೇಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಶಿವಮೊಗ್ಗ ತಾಲೂಕು ಬೇಡರಹೊಸಹಳ್ಳಿಯ ತುಂಗ ನದಿಯ ದಡದಲ್ಲಿ ಪತ್ತೆಯಾಗಿದೆ. 

ಈ ಪ್ರಕರಣದಲ್ಲಿ ಪತ್ತೆಯಾದ ಮೃತದೇಹದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.‌ ಬೇಡರಹೊಸಹಳ್ಳಿಯ ಬಸರಾಜ ಗೌಡರ ಅಡಿಕೆ ತೋಟದ ಹಿಂಭಾಗದಲ್ಲಿ ಹರಿಯುವ ತುಂಗ ನದಿಯ ದಡದಲ್ಲಿ ಕಲ್ಲು ಮಣ್ಣಿನ ದಿಣ್ಣೆಯಲ್ಲಿ ಪತ್ತೆಯಾಗಿದೆ. ಸಾರ್ವಜನಿಕರು ನೋಡಿ ತೋಟದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಈ ಕೊಳೆತಸ್ಥಿತಯಲ್ಲಿ ಪತ್ತೆಯಾದ ಅನಾಮಧೇಯ ಶವದ ಬಗ್ಗೆ ಹಲವು ಶಂಕೆಗಳನ್ನ ವ್ಯಕ್ತಪಡಿಸಲಾಗಿದೆ ಈ ಶವ ಒಂದುವರೆ ತಿಂಗಳ ಹಿಂದೆ ಆಕಸ್ಮಾತ್ ನದಿಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೊಳೆತ ಸ್ಥಿತಿಯಲ್ಲಿ ತೇಲಿ ಬಂದ ಶವವನ್ನ ನಾಯಿಗಳು ಎಳೆದು ದಡದಲ್ಲಿ ಹಾಕಿರುವ ಶಂಕೆ ವ್ಯಕ್ತವಾಗಿದೆ. 

ಬಹಿರ್ದೆಸೆಗೆ ಹೋದಾಗ ನೀರಿಗೆ ಬಿದ್ದಿರುವ ಶಂಕೆಯೂ ವ್ಯಕ್ತವಾಗಿದೆ. ಘಟನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close